ಗ್ರಾಮೀಣ ಗೋದಾಮು ಕಟ್ಟಡ ಉದ್ಘಾಟಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ

| Published : Oct 22 2024, 12:14 AM IST

ಗ್ರಾಮೀಣ ಗೋದಾಮು ಕಟ್ಟಡ ಉದ್ಘಾಟಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಬೆಳೆಗಳಿಗೆ ಅಗತ್ಯವಾಗಿ ಬೇಕಾಗಿರುವ ಗೊಬ್ಬರ ಸೇರಿದಂತೆ ಇತರೆ ಪರಿಕರಗಳ ಸಂಗ್ರಹಣಗೆ ಈ ಗೋದಾಮು ಅಗತ್ಯವಾಗಿದೆ. ಇದರಿಂದ ಸಹಕಾರ ಸಂಘಕ್ಕೂ ಆದಾಯ ಬರುತ್ತದೆ. ಸಂಘದ ಸದಸ್ಯರು ಇದನ್ನು ಸದುಪಯೋಗ ಪಡಿಸಿಕೊಂಡು ಸಂಘವನ್ನ ಅಭಿವೃದ್ಧಿಪಥದೊಂದಿಗೆ ಉನ್ನತ ಮಟ್ಟಕ್ಕೆ ತೆಗೆದುಕೊಂಡ ಹೋಗಬಹುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಪಾಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನೂತನವಾಗಿ ನಿರ್ಮಿಸಿರುವ ಗ್ರಾಮೀಣ ಗೋದಾಮು ಕಟ್ಟಡವನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿದರು.

ನಬಾರ್ಡ್ ವತಿಯಿಂದ 1 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಸಂಘದ ಗೋದಾಮು ಹಾಗೂ ಸಂಘದ 75ನೇ ಅಮೃತ ಮಹೋತ್ಸೋವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ಈ ಭಾಗದ ಜನರು ಹೆಚ್ಚಾಗಿ ಕೃಷಿಗೆ ಅವಲಂಭಿತರಾಗಿದ್ದು, ಪಾಲಹಳ್ಳಿ ಗ್ರಾಮವೂ ಒಂದಾಗಿದೆ ಎಂದರು.

ರೈತರ ಬೆಳೆಗಳಿಗೆ ಅಗತ್ಯವಾಗಿ ಬೇಕಾಗಿರುವ ಗೊಬ್ಬರ ಸೇರಿದಂತೆ ಇತರೆ ಪರಿಕರಗಳ ಸಂಗ್ರಹಣಗೆ ಈ ಗೋದಾಮು ಅಗತ್ಯವಾಗಿದೆ. ಇದರಿಂದ ಸಹಕಾರ ಸಂಘಕ್ಕೂ ಆದಾಯ ಬರುತ್ತದೆ. ಸಂಘದ ಸದಸ್ಯರು ಇದನ್ನು ಸದುಪಯೋಗ ಪಡಿಸಿಕೊಂಡು ಸಂಘವನ್ನ ಅಭಿವೃದ್ಧಿಪಥದೊಂದಿಗೆ ಉನ್ನತ ಮಟ್ಟಕ್ಕೆ ತೆಗೆದುಕೊಂಡ ಹೋಗಬಹುದು ಎಂದರು.

ಈ ವೇಳೆ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ, ಡಿಸಿಸಿಬ್ಯಾಂಕ್ ನಿರ್ದೇಶಕ ಚಂದ್ರಶೇಖರ್, ಜೆಡಿಎಸ್ ಮುಖಂಡ ಚಂದ್ರಶೇಖರ್, ಪೈಲ್ವಾನ್ ಮುಕುಂದ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರೇಗೌಡ ಸೇರಿದಂತೆ ಸಂಘದ ಅಧ್ಯಕ್ಷರು, ನಿರ್ದೇಶಕರು, ಗ್ರಾ.ಪಂ ಜನಪ್ರತಿನಿಧಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.ಇಂದು ಪ್ರಗತಿ ಪರಿಶೀಲನಾ ಸಭೆಮಂಡ್ಯ: ಬೆಂಗಳೂರಿನ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅ.22 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಜೆ.ಎಲ್ ಜವರೇಗೌಡ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಂಡ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.