ಕುಸ್ತಿ ಪಂದ್ಯಾವಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಚಾಲನೆ

| Published : Oct 18 2023, 01:01 AM IST

ಸಾರಾಂಶ

ಕುಸ್ತಿ ಪಂದ್ಯಾವಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಚಾಲನೆ, ರಾಜ್ಯ ಹಾಗೂ ಹೊರ ರಾಜ್ಯದಿಂದ ಒಟ್ಟು 72 ಜೊತೆ ಕುಸ್ತಿಪಟುಗಳು ಭಾಗಿ
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದಸರಾ ಅಂಗವಾಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಕ್ರೀಡಾ ಜ್ಯೋತಿ ಸ್ವೀಕರಿಸಿ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 72 ಜೊತೆ ಕುಸ್ತಿಪಟುಗಳು ಭಾಗವಹಿಸಿದ್ದರು. ನಂತರ ಮಾತನಾಡಿದ ಶಾಸಕರು, ಪ್ರತಿ ವರ್ಷದಂತೆ ಈ ವರ್ಷವು ಕುಸ್ತಿ ಪಂದ್ಯಾವಳಿ ಏರ್ಪಡಿಸುತ್ತಿದ್ದೇವೆ ಎಂದರು. ಜನತೆಯ ಪ್ರೋತ್ಸಾಹದಿಂದ ಕುಸ್ತಿಪಂದ್ಯಾವಳಿ ಆರ್ಕಷಿಣಿ ಹಾಗೂ ಜನಪ್ರಿಯವಾಗಿ ನಡೆಯುತ್ತಿದೆ. ನಾಡ ಕ್ರೀಡೆ ಕುಸ್ತಿ ಉಳಿಯಬೇಕಾದರೆ ಹೆಚ್ಚಿನ ಮಕ್ಕಳು ಕುಸ್ತಿ ಕಲಿಯಬೇಕು. ಹಾಗಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಎಸ್ಪಿ ಎನ್ .ಯತೀಶ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ಆಯುಷ್ ವೈದ್ಯಾಧಿಕಾರಿ ಸೀತಾಲಕ್ಷ್ಮೀ, ವಾರ್ತಾಧಿಕಾರಿ ನಿರ್ಮಲ ಎಸ್.ಎಚ್ ಸೇರಿದಂತೆ ವಿವಿಧ ಕುಸ್ತಿ ತರಬೇತುದಾರರು ಹಾಜರಿದ್ದರು. 17ಕೆಎಂಎನ್ ಡಿ24,25 ಶ್ರೀರಂಗಪಟ್ಟಣ ದಸರಾ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಚಾಲನೆ ನೀಡಿದರು. ಕುಸ್ತಿ ಪಂದ್ಯಾವಳಿ ನಡೆಯುತ್ತಿರುವುದು.