ಸಾರಾಂಶ
ಕೇಂದ್ರ ಸರ್ಕಾರದಿಂದ ೬೦ ಅಡಿ ರಸ್ತೆಗೆ ೨೯ ಕೋಟಿ ಹಣ ಮಂಜೂರಾಗಿದ್ದು, ಯಾರಿಗೂ ತೊಂದರೆ ಆಗದಂತೆ ರಸ್ತೆ ಒಂದು ಬದಿಯ ಡ್ರೈನಿಂದ ೩೦ ಅಡಿ ರಸ್ತೆಯ ಕಾಮಗಾರಿ ಪ್ರಾರಂಭ ಮಾಡಲಾಗಿದೆ ಮತ್ತು ಡಾ. ಅಂಬೇಡ್ಕರ್ ವೃತ್ತದ ತನಕ ಮಾಡುತ್ತೇವೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ಸೂರನಹಳ್ಳಿ ರೈಲ್ವೆ ಗೇಟ್ ಸಮೀಪದ ಅಂಡರ್‌ಪಾಸ್ ಹತ್ತಿರದಿಂದ ಕಾಮಗಾರಿ ಪ್ರಾರಂಭ ಮಾಡಲಾಗಿದ್ದು, ಜೆಸಿಬಿ ಬಳಸಿ, ಚರಂಡಿಗಳನ್ನು ತೆಗೆಯಲಾಗುತ್ತಿದ್ದು, ೬೦ ಅಡಿ ರಸ್ತೆ ಕಾಮಗಾರಿಯಲ್ಲಿ ಅಗತ್ಯವಿದ್ದಲ್ಲಿ ಭೂ ಸ್ವಾಧೀನವಾದ ನಂತರ ಪರಿಹಾರ ನೀಡಿ ಉಳಿಕೆ ಕಾಮಗಾರಿ ಮಾಡುತ್ತೇವೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಕೇಂದ್ರ ಸರ್ಕಾರದಿಂದ ೬೦ ಅಡಿ ರಸ್ತೆಗೆ ೨೯ ಕೋಟಿ ಹಣ ಮಂಜೂರಾಗಿದ್ದು, ಯಾರಿಗೂ ತೊಂದರೆ ಆಗದಂತೆ ರಸ್ತೆ ಒಂದು ಬದಿಯ ಡ್ರೈನಿಂದ ೩೦ ಅಡಿ ರಸ್ತೆಯ ಕಾಮಗಾರಿ ಪ್ರಾರಂಭ ಮಾಡಲಾಗಿದೆ ಮತ್ತು ಡಾ. ಅಂಬೇಡ್ಕರ್ ವೃತ್ತದ ತನಕ ಮಾಡುತ್ತೇವೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.ಪಟ್ಟಣದ ಹಾಸನ-ಮೈಸೂರು ರಸ್ತೆ ಅಗಲೀಕರಣ ಕಾಮಗಾರಿಯು ನಡೆಯುತ್ತಿದ್ದು, ಕಾಮಗಾರಿ ವೀಕ್ಷಿಸಿ ಮಾತನಾಡಿದರು. ೬೦ ಅಡಿ ರಸ್ತೆ ಕಾಮಗಾರಿಯಲ್ಲಿ ಅಗತ್ಯವಿದ್ದಲ್ಲಿ ಭೂ ಸ್ವಾಧೀನವಾದ ನಂತರ ಪರಿಹಾರ ನೀಡಿ ಉಳಿಕೆ ಕಾಮಗಾರಿ ಮಾಡುತ್ತೇವೆ ಎಂದರು.ಸೂರನಹಳ್ಳಿ ರೈಲ್ವೆ ಗೇಟ್ ಸಮೀಪದ ಅಂಡರ್‌ಪಾಸ್ ಹತ್ತಿರದಿಂದ ಕಾಮಗಾರಿ ಪ್ರಾರಂಭ ಮಾಡಲಾಗಿದ್ದು, ಜೆಸಿಬಿ ಬಳಸಿ, ಚರಂಡಿಗಳನ್ನು ತೆಗೆಯಲಾಗುತ್ತಿದ್ದು, ಶಾಸಕ ರೇವಣ್ಣ ಅವರು ಚರಂಡಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ತನಕ ಸ್ಥಳದಲ್ಲಿದ್ದು, ವಾಹನ ಚಾಲಕರಿಗೆ ಜಾಗ್ರತೆಯಿಂದ ತೆರಳುವಂತೆ ಸಲಹೆ ನೀಡುತ್ತಿದ್ದರು.