ಸಾರಾಂಶ
ಹಿರೀಕಾಟಿ ಗೇಟ್ ಬಳಿ ಮದ್ಯದಂಗಡಿ ತೆರೆಯದಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ, ಅಬಕಾರಿ ಇಲಾಖೆ ಹಾಗೂ ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಹಿರೀಕಾಟಿ ಗೇಟ್ ಬಳಿ ಮದ್ಯದಂಗಡಿ ತೆರೆಯದಂತೆ ಗ್ರಾಮಸ್ಥರ ಮನವಿ ಮೇರೆಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರ ಕೂಡ ಜಿಲ್ಲಾಧಿಕಾರಿಗಳಿಗ ಪತ್ರ ಬರೆದು ಅನುಮತಿ ನೀಡಬಾರದು ಎಂದು ಹೇಳಿದ್ದಾರೆ.ಹಿರೀಕಾಟಿ ಗೇಟ್ ಬಳಿ ಮದ್ಯದಂಗಡಿ ತೆರೆಯದಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ, ಅಬಕಾರಿ ಇಲಾಖೆ ಹಾಗೂ ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಿದ್ದು, ಮದ್ಯದಂಗಡಿ ತೆರೆದರೆ ಗ್ರಾಮಸ್ಥರಿಗೆ ತೊಂದರೆಯಾಗಲಿದೆ ಎಂದು ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ಮನವಿ ಬಳಿಕ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಹೊಸದಾಗಿ ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ. ಹಿರೀಕಾಟಿ ಗೇಟ್ ಜನನಿ ಬಿಡ ಸ್ಥಳವಾಗಿದೆ. ಹಿರೀಕಾಟಿ ಮೂಲಕ ಚನ್ನವಡೆಯನಪುರ, ದೊಡ್ಡಹುಂಡಿ, ಚಿಕ್ಕಹುಂಡಿ ಗ್ರಾಮಸ್ಥರು ಹಿರೀಕಾಟಿ ಗೇಟ್ ಹೋಗಬೇಕಿದೆ ಎಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ.ಮದ್ಯದಂಗಡಿ ಮುಂದೆಯೇ ಹಿರೀಕಾಟಿ ರಸ್ತೆಯಲ್ಲಿ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹೋಗಬೇಕಾಗುತ್ತದೆ. ಆದ್ದರಿಂದ ಗ್ರಾಮಸ್ಥರ ಕೋರಿಕೆ ಮೇರೆಗೆ ಹಿರೀಕಾಟಿ ಮುಖ್ಯ ರಸ್ತೆಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಶಾಸಕರು ಕೋರಿದ್ದಾರೆ.
ಗ್ರಾಮಸ್ಥರ ಮನವಿ ಮೇರೆಗೆ ಹಿರೀಕಾಟಿ ಗೇಟ್ ಬಳಿ ಹೊಸದಾಗಿ ತೆರೆಯಲು ಉದ್ದೇಶಿಸಿರುವ ಮದ್ಯದಂಗಡಿಗೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಜರು ಸಮಯದಲ್ಲಿ ಮದ್ಯದಂಗಡಿ ಬೇಡ ಎಂದು ಗ್ರಾಮಸ್ಥರು ತಿಳಿಸಿರುವ ಹಿನ್ನೆಲೆ ಮೇಲಾಧಿಕಾರಿಗಳಿಗೆ ಮದ್ಯದಂಗಡಿ ಬೇಡ ಎಂದು ವರದಿ ಸಲ್ಲಿಸುತ್ತೇನೆ.-ದೀಪಾ, ಅಬಕಾರಿ ಇನ್ಸ್‌ಪೆಕ್ಟರ್
೯ಜಿಪಿಟಿ೬ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್ ಬಳಿ ಮದ್ಯದಂಗಡಿ ತೆರೆಯಲು ಉದ್ದೇಶಿತ ಹೊಸ ಕಟ್ಟಡ.