ಜಾತ್ರೆ ಮೂಗಿಯುವವರೆಗೆ ಸೌಕರ್ಯ ಒದಗಿಸುವಂತೆ ಶಾಸಕ ಸವದಿ ಸೂಚನೆ

| Published : Jan 09 2024, 02:00 AM IST

ಜಾತ್ರೆ ಮೂಗಿಯುವವರೆಗೆ ಸೌಕರ್ಯ ಒದಗಿಸುವಂತೆ ಶಾಸಕ ಸವದಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಕಟನೂರ ಯಲ್ಲಮ್ಮದೇವಿಯ ದರ್ಶನ ಪಡೆದ ಶಾಸಕ ಲಕ್ಷ್ಮಣ ಸವದಿ ಅವರು, ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಐಗಳಿ

ಕೊಕಟನೂರ ಯಲ್ಲಮ್ಮದೇವಿ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಜಾತ್ರೆ ಮೂಗಿಯುವವರೆಗೂ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸಮೀಪದ ಕೊಕಟನೂರ ಗ್ರಾಮದ ಯಲ್ಲಮ್ಮದೇವಿಯ ದರ್ಶನ ಪಡೆದು ನಂತರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಕೊಕಟನೂರ ಯಲ್ಲಮ್ಮದೇವಿ ಜಾತ್ರೆ ದೊಡ್ಡದಾಗಿದ್ದು, ಇಲ್ಲಿ ದೇವಿ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಬರುತ್ತಾರೆ. ಹೀಗಾಗಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಬೇಕು. ಕೊರೋನಾ ಅಲೆ ಎದ್ದಿದ್ದು ಆರೋಗ್ಯ ಇಲಾಖೆಯವರು ಇದರತ್ತ ಗಮನ ಹರಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಯಾವುದೇ ರೀತಿಯ ಅನಿಷ್ಟ ಪದ್ಧತಿ ನಡೆಯದಂತೆ ಪೊಲೀಸ್ ಇಲಾಖೆಯವರು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ಈ ವೇಳೆ ದೇವಿ ಅರ್ಚಕ ಹಾಗೂ ಜಿಪಂ ಮಾಜಿ ಸದಸ್ಯ ಪ್ರಲ್ಹಾದ ಪೂಜಾರಿ, ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ, ತಾಪಂ ಇಒ ಶಿವಾನಂದ ಕಲ್ಲಾಪುರ, ಜಿಪಂ ಎಇಇ ಈರಣ್ಣ ವಾಲಿ ಮಾತನಾಡಿದರು.

ಮುಖಂಡರಾದ ವಿಶಾಲ ದೇಸಾಯಿ, ಶೀತಲಗೌಡ ಪಾಟೀಲ, ಸುರೇಶ ಪಾಟಣಕರ, ಸುಭಾಷ ಸೋನಕರ, ಮಹಾವೀರ ಹಳಕಿ, ಬಾಳಾಸಾಹೇಬ ಪೂಜಾರಿ, ಅನಿಲ ಮುಳಿಕ, ಶ್ರೀಶೈಲ ನಾಯಿಕ, ವಕೀಲ ಸುಭಾಷ ಪಾಟಣಕರ, ಗ್ರಾಪಂ ಅಧ್ಯಕ್ಷೆ ಶಾನವ್ವಾ ಪೂಜಾರಿ, ಉಪಾಧ್ಯಕ್ಷ ಅರ್ಜುನ ಪೂಜಾರಿ, ಪಿಡಿಒ ಸಿದ್ಧಪ್ಪ ತುಂಗಳ, ಬಸವರಾಜ ಬಳೋಜ, ಗ್ರಾಮಾಡಳಿತಾಧಿಕಾರಿ ಕಲ್ಮೇಶ ಕಲಮಡಿ, ಘೂಳಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.