ಅಕ್ಕನಹಳ್ಳಿ ಕ್ರಾಸ್ ಗ್ರಾಮದಲ್ಲಿ ವರಸಿದ್ಧಿ ವಿನಾಯಕ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಶ್ರೀ ಲಕ್ಷ್ಮೀದೇವಿ ಕಾರ್ತಿಕ ಮಾಸದ ದೀಪೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಶ್ರೀ ಕೃಷ್ಣ ಸಂಧಾನ ಅಥವಾ ಭೀಮಾ ದುರ್ಯೋಧನರ ಗದಾಯುದ್ಧ ನಾಟಕದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು. ನಮ್ಮ ಪೂರ್ವಿಕರ ಕಾಲದಲ್ಲಿ ಜಾತ್ರೆ ಹಾಗೂ ಹಬ್ಬದ ಸಮಯದಲ್ಲಿ ನಾಟಕಗಳನ್ನು ಕಲಿತು ನಾಟಕದಲ್ಲಿ ಅಭಿನಯಿಸುತ್ತಿದ್ದರು. ಗ್ರಾಮೀಣ ಪ್ರದೇಶದ ಮೂಲ ಪರಂಪರೆಗಳಾದ ಪೌರಾಣಿಕ ನಾಟಕ ಜನಪದ ಕಲೆ ಕೋಲಾಟ ಸೇರಿದಂತೆ ವಿವಿಧ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಗ್ರಾಮೀಣ ಪ್ರದೇಶದ ಮೂಲ ಪರಂಪರೆಗಳಾದ ಪೌರಾಣಿಕ ನಾಟಕ ಜನಪದ ಕಲೆ ಕೋಲಾಟ ಸೇರಿದಂತೆ ವಿವಿಧ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.ಹೋಬಳಿಯ ಅಕ್ಕನಹಳ್ಳಿ ಕ್ರಾಸ್ ಗ್ರಾಮದಲ್ಲಿ ವರಸಿದ್ಧಿ ವಿನಾಯಕ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಶ್ರೀ ಲಕ್ಷ್ಮೀದೇವಿ ಕಾರ್ತಿಕ ಮಾಸದ ದೀಪೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಶ್ರೀ ಕೃಷ್ಣ ಸಂಧಾನ ಅಥವಾ ಭೀಮಾ ದುರ್ಯೋಧನರ ಗದಾಯುದ್ಧ ನಾಟಕದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು. ನಮ್ಮ ಪೂರ್ವಿಕರ ಕಾಲದಲ್ಲಿ ಜಾತ್ರೆ ಹಾಗೂ ಹಬ್ಬದ ಸಮಯದಲ್ಲಿ ನಾಟಕಗಳನ್ನು ಕಲಿತು ನಾಟಕದಲ್ಲಿ ಅಭಿನಯಿಸುತ್ತಿದ್ದರು. ಇದರಿಂದ ಅವರಲ್ಲಿರುವ ಕಲೆಯು ಹೊರ ಪ್ರಪಂಚಕ್ಕೆ ತಿಳಿಯುತ್ತಿತ್ತು. ಆದರೆ ವೈಜ್ಞಾನಿಕ ಯುಗದಲ್ಲಿ ಚಲನಚಿತ್ರಗಳೇ ಕಮ್ಮಿಯಾಗಿ ಯುವ ಸಮೂಹ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾ ಕಡೆ ಹೆಚ್ಚು ವಾಲುತ್ತಿದ್ದಾರೆ. ಇದರಿಂದ ನಮ್ಮ ನಮ್ಮ ಜನಪದ ಕಲೆಗಳು ನಶಿಸುವ ಹಂತದಲ್ಲಿವೆ. ನಮ್ಮ ಸಂಸ್ಕೃತಿ ಧರ್ಮವನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಹಳ್ಳಿಗಳಲ್ಲಿ ನಾಟಕಗಳ ಪ್ರದರ್ಶನದಿಂದ ಧಾರ್ಮಿಕ ಭಾವನೆಗಳು ಹೆಚ್ಚಾಗುವುದರ ಜೊತೆಗೆ ಕಲೆಯನ್ನು ಉಳಿಸಿದಂತಾಗುತ್ತದೆ. ಅಕ್ಕನಹಳ್ಳಿ ಕ್ರಾಸ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಅನೇಕ ತಿಂಗಳುಗಳ ಕಾಲ ಅಭ್ಯಾಸ ನಡೆಸಿ ಕಲಿತು ಶ್ರೀ ಕೃಷ್ಣ ಸಂಧಾನ ಅಥವಾ ಭೀಮ ದುರ್ಯೋಧನರ ಗದಾಯುದ್ಧ ನಾಟಕವನ್ನು ಆಯೋಜಿಸುವ ಮೂಲಕ ಈ ಭಾಗದ ಜನರಿಗೆ ಕಲೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದಾರೆ ಎಂದರು. ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ಕೆರೆಗಳಿಗೆ ಕಳೆದ 6 ವರ್ಷಗಳಿಂದ ನೀರು ಹರಿಸಿ ತುಂಬಿಸಲಾಗಿದೆ. ಈ ವರ್ಷ ಮಳೆಯ ಕೊರತೆಯಿಂದ ಕೆರೆಗಳನ್ನು ತುಂಬಿಸಲು ಸಾಧ್ಯವಾಗಿಲ್ಲ. ಅಕ್ಕನಹಳ್ಳಿ ಸೋಸಲಗೆರೆ ಹೊಸೂರು ಮೊದಲಗೆರೆ ಶೆಟ್ಟಿಹಳ್ಳಿ ಸೇರದಂತೆ ಅನೇಕ ಗ್ರಾಮಗಳಿಗೆ ನುಗ್ಗೇಹಳ್ಳಿ ಕೆರೆ ತುಂಬುವುದರಿಂದ ಹೆಚ್ಚು ಅನುಕೂಲವಾಗುತ್ತಿತ್ತು. ಮುಂದಿನ ಹಂಗಾಮಿನೊಳಗೆ ತೋಟಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ರಸ್ತೆ ಅಭಿವೃದ್ಧಿ ಹೊಸ ಡೇರಿ ಕಟ್ಟಡ ನಿರ್ಮಾಣ ಒಳಚರಂಡಿ ವ್ಯವಸ್ಥೆ ಕುಡಿಯುವ ನೀರು ಜೊತೆಗೆ ಪ್ರತಿ ಭಾನುವಾರ ಅಕ್ಕನಹಳ್ಳಿ ಕ್ರಾಸ್ನಲ್ಲಿ ನಡೆಯುವ ತೆಂಗಿನಕಾಯಿ ಸಂತೆ ಅಭಿವೃದ್ಧಿಗೆ ಕೃಷಿ ಮಾರುಕಟ್ಟೆ ವತಿಯಿಂದ ಅನೇಕ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು. ಲೋಕೇಶ್ ನೇತೃತ್ವದ ತಿರುಮಲ ರಂಗ ಕಿತ್ತಗಾನಹಳ್ಳಿ ಡ್ರಾಮಾ ಸೀನರಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ವೇದಿಕೆಯಲ್ಲಿ ನಾಟಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ, ತಾಲೂಕು ಜೆಡಿಎಸ್ ಯುವ ಮುಖಂಡ ಜೈದೀಪ್ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಟಿಎಪಿಎಂಎಸ್ ಅಧ್ಯಕ್ಷ ತೋಟಿ ನಾಗರಾಜ್, ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ಜೆಡಿಎಸ್ ಮುಖಂಡರುಗಳಾದ ಎಂ ದಾಸಪುರ ವಿಕ್ಟರ್, ಚಿಕ್ಕೇನಹಳ್ಳಿ ವಾಸು, ಎಂ ಎಸ್ ಸುರೇಶ್, ಸೋಸಲಗೆರೆ ವಸುದೇವ್, ನವೀನ್ ಕುಮಾರ್, ಮಧು, ಹುಲಿಕೆರೆ ಸಂಪತ್ ಕುಮಾರ್, ಕೃಷಿ ಪತ್ತಿನ ಅಧ್ಯಕ್ಷ ಅಕ್ಕನಹಳ್ಳಿ ಕಿಶೋರ್, ಉದ್ಯಮಿ ಜಗದೀಶ್, ಮೊದಲಗೆರೆ ದಿಲೀಪ್, ಬೋರೇಗೌಡ, ಎಸ್ ಎಮ್ ರಾಜ್ ಕುಮಾರ್, ಅಕ್ಕನಹಳ್ಳಿ ಕ್ರಾಸ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.