ಸಾರಾಂಶ
ಬೀದರ್ ದಕ್ಷಿಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಆಯೋಜಿಸಿದ ರಾಮೋತ್ಸವದಲ್ಲಿ ಶಾಸಕ ಡಾ. ಬೆಲ್ದಾಳೆ ಪಾಲ್ಗೊಂಡು ಮಾತನಾಡಿದರು.
ಬೀದರ್: ಅಯೋಧ್ಯೆಯ ಪ್ರಭು ರಾಮ ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಬೀದರ್ ದಕ್ಷಿಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಪಾಲ್ಗೊಂಡು ರಾಮಚಂದ್ರರ ದರ್ಶನ ಪಡೆದರು.
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಪೂಜಾ ಕಾರ್ಯಕ್ರಮದ ನೇರ ಪ್ರಸಾರ ಬೀದರ್ ದಕ್ಷಿಣ ಕ್ಷೇತ್ರದ ಮರಕುಂದಾ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ವೀಕ್ಷಿಸಿದರು.ವಿದ್ಯಾನಗರದಲ್ಲಿರುವ ಶ್ರೀ ರಾಮ ವೃತ್ತ, ಬೀದರ್ ದಕ್ಷಿಣ ಕ್ಷೇತ್ರದ ಚಿಟ್ಟಾ, ಘೋಡಂಪಳ್ಳಿ, ಚಿಟ್ಟಾ ವಾಡಿ, ಮರಕುಂದಾ, ಭಂಗೂರ, ಸಿಂಧೋಲ, ಬನ್ನಳ್ಳಿ ಭೇಮಳಖೇಡಾ, ವಿಠ್ಠಲಪುರ, ಸಿರ್ಸಿ (ಎ) ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬೀದರ್ ದಕ್ಷಿಣ ಕ್ಷೇತ್ರದ ಮರಕುಂದಾ ಗ್ರಾಮದ ಬೂತ್ ಸಂಖ್ಯೆ 179ನಲ್ಲಿರುವ ನಮ್ಮ ಬಿಜೆಪಿ ಬೂತ್ ಅಧ್ಯಕ್ಷ ಎಸ್ ಟಿ ಸಮಾಜದ ಶಿವಕುಮಾರ ಗಡಿಯವರ ಮನೆಯಲ್ಲಿ ವಿಶ್ರಾಂತಿ ಪಡೆದು ಬೂತ್‌ನಲ್ಲಿರುವ ಸಮಸ್ಯೆಗಳನ್ನು ಆಲಿಸಿದರು.ಪಕ್ಷದ ಮುಖಂಡರಾದ ಸುರೇಶ್ ಮಾಶೆಟ್ಟಿ, ಚಂದ್ರಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ ವಿವಿಧ ಗ್ರಾಮಗಳ ರಾಮ ಭಕ್ತರು ಪಕ್ಷದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.