ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪನೆಗೆ ಶಾಸಕ ಶರಣಗೌಡ ಕಂದಕೂರು ವಿರೋಧ

| Published : Mar 20 2025, 01:17 AM IST

ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪನೆಗೆ ಶಾಸಕ ಶರಣಗೌಡ ಕಂದಕೂರು ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಎಂದರೇ ತಾಯಿ ಇದ್ದಂತೆ, ತಾಯಿ ಹಾಲು ಕೊಟ್ಟರು ಮಗು ಕುಡಿಯುತ್ತದೆ. ವಿಷ ಕೊಟ್ಟರು ಕುಡಿಯುತ್ತದೆ. ನೀವು ಏನಾದರೂ ಕೊಡಿ ಎಂದು ಗವಿಸಿದ್ಧೇಶ್ವರ ಶ್ರೀಗಳು ಹೇಳಿ ಕಣ್ಣೀರು ಹಾಕಿದ್ದಾರೆ. ಇಂಥ ಕಾರ್ಖಾನೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಏಕೆ ನೀಡುತ್ತೀರಿ.

ಕೊಪ್ಪಳ:

ಕೊಪ್ಪಳ ಬಳಿ ಬೃಹತ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಗವಿಸಿದ್ಧೇಶ್ವರ ಸ್ವಾಮೀಜಿ ಕಣ್ಣೀರು ಹಾಕಿದ್ದಾರೆ. ಇಂಥ ಕಾರ್ಖಾನೆಗಳನ್ನು ಏಕೆ ಕೇವಲ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಬಳಿ ಸ್ಥಾಪಿಸಲಾಗುತ್ತಿದೆ ಎಂದು ಯಾದಗಿರಿ ಜಿಲ್ಲೆಯ ಗುರುಮಿಟಕಲ್ ಶಾಸಕ ಶರಣಗೌಡ ಕಂದಕೂರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಕಾರ್ಖಾನೆ ಸ್ಥಾಪನೆಯಿಂದ ತೊಟ್ಟಿಲಕ್ಕೆ ಹೋಗುವವರಿಗಿಂತ ಸ್ಮಶಾನಕ್ಕೆ ಹೋಗುವವರು ಹೆಚ್ಚಾಗುತ್ತಾರೆ ಎಂದು ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದ್ದಾರೆ. ಸರ್ಕಾರ ಎಂದರೇ ತಾಯಿ ಇದ್ದಂತೆ, ತಾಯಿ ಹಾಲು ಕೊಟ್ಟರು ಮಗು ಕುಡಿಯುತ್ತದೆ. ವಿಷ ಕೊಟ್ಟರು ಕುಡಿಯುತ್ತದೆ. ನೀವು ಏನಾದರೂ ಕೊಡಿ ಎಂದು ಶ್ರೀಗಳು ಹೇಳಿ ಕಣ್ಣೀರು ಹಾಕಿದ್ದಾರೆ. ಇಂಥ ಕಾರ್ಖಾನೆಗಳನ್ನು ನಮ್ಮ ಭಾಗಕ್ಕೆ ಏಕೆ ಕೊಡತ್ತಿರಿ ಎಂದು ಕಿಡಿಕಾರಿದ್ದಾರೆ.

ಸಖತ್ ವೈರಲ್:

ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಈಗಾಗಲೇ ಬೃಹತ್ ಹೋರಾಟ ನಡೆದಿದ್ದು, ನಿರಂತರವಾಗಿ ನಡೆಯುತ್ತಿದೆ. ಈ ಕುರಿತು ಶಾಸಕ ಶರಣಗೌಡ ಕಂದಕೂರು ಅಧಿವೇಶನದಲ್ಲಿ ಮಾತನಾಡಿರುವ ವೀಡಿಯೋ ವೈರಲ್‌ ಆಗಿದೆ. ಇದಕ್ಕೆ ಮೆಚ್ಚುಕೆ ವ್ಯಕ್ತಪಡಿಸಿರುವ ಹೋರಾಟಗಾರರು, ಜಿಲ್ಲೆಯ ಯಾವೊಬ್ಬ ಶಾಸಕರು ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಕ್ಷಾತೀತವಾಗಿ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಭೇಟಿಯಾಗಿ ಕಾರ್ಖಾನೆ ಕೆಲಸಕ್ಕೆ ತಾತ್ಕಾಲಿಕ ತಡೆ ನೀಡಿದೆ. ಆದರೆ, ಕಾರ್ಖಾನೆ ವಿಸ್ತರಣೆ ಹಾಗೂ ಸ್ಥಾಪನೆ ವಿರೋಧಿಸುವ ಕುರಿತು ಒಂದೇ ಒಂದು ಹೇಳಿಕೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.