ಸಾರಾಂಶ
ಈ ವರ್ಷದಿಂದ ಪೌರಕಾರ್ಮಿಕರಿಗೆ ಗೌರಿಗಣೇಶ ಹಬ್ಬದ ನಿಮಿತ್ತ ಬಾಗಿನ ನೀಡುವ ಹವ್ಯಾಸವನ್ನು ಪ್ರಾರಂಭಿಸಿದ್ದು, ಮುಂದಿನ ವರ್ಷಗಳಲ್ಲೂ ಇದನ್ನು ಮುಂದುವರಿಸಲಾಗುವುದು. ಈ ಮೂಲಕ ಅವರ ಸೇವೆಗೆ ಸರ್ಕಾರ ಹಾಗೂ ನಾಗರಿಕರಿಂದ ಗೌರವ ವ್ಯಕ್ತಪಡಿಸಬಹುದು ಎಂದು ಹೇಳಿದರು. ಪೌರಕಾರ್ಮಿಕರು ತಮ್ಮ ಶ್ರಮದಿಂದ ನಗರಕ್ಕೆ ಸ್ವಚ್ಛತೆಯ ರೂಪ ನೀಡುತ್ತಿರುವುದನ್ನು ಸಮಾಜ ಗೌರವದಿಂದ ನೋಡುವ ದೃಷ್ಟಿಕೋನ ಬೆಳೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇವರು ಮಡಿಲಲ್ಲಿ ದೇವರು ಇದ್ದರೂ ಕಾಣದಂತೆ ತೋರುವ ಶ್ರಮಿಕರು. ನಾವು ಎಲ್ಲರೂ ಅವರ ಸೇವೆಗೆ ಕೃತಜ್ಞರಾಗಿರಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕು ನಗರಸಭೆಯ ಆಶ್ರಯದಲ್ಲಿ ಪೌರಕಾರ್ಮಿಕರಿಗೆ ಗೌರಿಗಣೇಶ ಹಬ್ಬದ ಪ್ರಯುಕ್ತ ವಿಶೇಷವಾಗಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಭಾಗವಹಿಸಿ, ಪೌರಕಾರ್ಮಿಕರ ಸೇವೆಗೆ ಗೌರವ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿ, ಪೌರಕಾರ್ಮಿಕರು ಪ್ರತಿದಿನ ಮುಂಜಾನೆ ತಮ್ಮ ಕೆಲಸಕ್ಕೆ ನಿಷ್ಠೆಯಿಂದ ಹಾಜರಾಗಿ, ಇಡೀ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಅಪಾರ ಪಾತ್ರ ವಹಿಸುತ್ತಿದ್ದಾರೆ. ಅವರು ಪ್ರತಿ ಮನೆಗೆ ತೆರಳಿ ಕಸದ ಸಂಗ್ರಹ ಮಾಡುವುದು, ಅದನ್ನು ಸರಿಯಾದ ಸ್ಥಳದಲ್ಲಿ ವಿಲೇವಾರಿ ಮಾಡುವ ಮೂಲಕ ನಗರವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿ ಉಳಿಸುತ್ತಿದ್ದಾರೆ ಎಂದು ಹೇಳಿದರು.ಈ ವರ್ಷದಿಂದ ಪೌರಕಾರ್ಮಿಕರಿಗೆ ಗೌರಿಗಣೇಶ ಹಬ್ಬದ ನಿಮಿತ್ತ ಬಾಗಿನ ನೀಡುವ ಹವ್ಯಾಸವನ್ನು ಪ್ರಾರಂಭಿಸಿದ್ದು, ಮುಂದಿನ ವರ್ಷಗಳಲ್ಲೂ ಇದನ್ನು ಮುಂದುವರಿಸಲಾಗುವುದು. ಈ ಮೂಲಕ ಅವರ ಸೇವೆಗೆ ಸರ್ಕಾರ ಹಾಗೂ ನಾಗರಿಕರಿಂದ ಗೌರವ ವ್ಯಕ್ತಪಡಿಸಬಹುದು ಎಂದು ಹೇಳಿದರು. ಪೌರಕಾರ್ಮಿಕರು ತಮ್ಮ ಶ್ರಮದಿಂದ ನಗರಕ್ಕೆ ಸ್ವಚ್ಛತೆಯ ರೂಪ ನೀಡುತ್ತಿರುವುದನ್ನು ಸಮಾಜ ಗೌರವದಿಂದ ನೋಡುವ ದೃಷ್ಟಿಕೋನ ಬೆಳೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇವರು ಮಡಿಲಲ್ಲಿ ದೇವರು ಇದ್ದರೂ ಕಾಣದಂತೆ ತೋರುವ ಶ್ರಮಿಕರು. ನಾವು ಎಲ್ಲರೂ ಅವರ ಸೇವೆಗೆ ಕೃತಜ್ಞರಾಗಿರಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಸಮಿವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ನಗರಸಭಾ ಸದಸ್ಯರಾದ ಅನ್ನಪೂರ್ಣ, ದರ್ಶನ್,ಗಣೇಶ್, ವೆಂಕಟಮುನಿ, ಅವಿನಾಶ್, ರಾಜು, ರೇವಣ್ಣ, ಇಮ್ರಾನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.