ಸಾರಾಂಶ
ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿನ ಕಚೇರಿಯ ಸಿಬ್ಬಂದಿ ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ, ಕೆಲವೊಂದು ಕಚೇರಿಗೆ ಹಗಲು ವೇಳೆ ಬಾಗಿಲು ಹಾಕಿರುತ್ತಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಶನಿವಾರ ಬೆಳಗ್ಗೆ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ಪರಿಶೀಲನೆ ನಡೆಸಿದರು.
ಕಚೇರಿ ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಬರುತ್ತಿಲ್ಲ ಎಂಬ ಆರೋಪ ಹಿನ್ನೆಲೆ
ಕನ್ನಡಪ್ರಭ ವಾರ್ತೆ ಪುತ್ತೂರುತಾಲೂಕು ಆಡಳಿತ ಸೌಧದಲ್ಲಿನ ಕಚೇರಿಯ ಸಿಬ್ಬಂದಿ ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ, ಕೆಲವೊಂದು ಕಚೇರಿಗೆ ಹಗಲು ವೇಳೆ ಬಾಗಿಲು ಹಾಕಿರುತ್ತಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಶನಿವಾರ ಬೆಳಗ್ಗೆ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ಪರಿಶೀಲನೆ ನಡೆಸಿದರು.ತಾಲೂಕು ಆಡಳಿತ ಸೌಧದಲ್ಲಿರುವ ಎಲ್ಲ ಇಲಾಖೆಗಳ ಪ್ರತಿ ವಿಭಾಗಗಳಿಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಭೂ ಮಾಪನಾ ಇಲಾಖೆಯ ಕಚೇರಿಯಲ್ಲಿ ಯಾರೂ ಇಲ್ಲದೇ ಇರುವುದು ಕಂಡುಬಂದಿದೆ. ಅಧಿಕಾರಿಯ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು ಅಧಿಕಾರಿ ಇಲ್ಲದಿದ್ದರೆ ಕಚೇರಿಯನ್ನು ಯಾಕೆ ಓಪನ್ ಇಟ್ಟಿದ್ದೀರಿ ಬಂದ್ ಮಾಡಿ ಎಂದ ಶಾಸಕರೇ ಕಚೇರಿಯ ಬಾಗಿಲನ್ನು ಮುಚ್ಚಿ ಬೀಗ ಹಾಕುವಂತೆ ತಿಳಿಸಿದರು.
ದೂರಿನ ಹಿನ್ನೆಲೆಯಲ್ಲಿ ಭೇಟಿ:ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿ ಬರುತ್ತಿಲ್ಲ. ಭೂ ದಾಖಲೆಗಳ ಇಲಾಖಾ ಕಚೇರಿ ಬಂದ್ ಇದೆ ಎಂದು ಸಾಮಾಜಿಕ ಜಾಲತಾಣಗಲ್ಲಿ ಪ್ರಸಾರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಲಾಗಿದೆ. ಇಬ್ಬರು ಅಧಿಕಾರಿಗಳ ಹೊರತು ಪಡಿಸಿ ಉಳಿದೆಲ್ಲ ಅಧಿಕಾರಿಗಳು ಹಾಜರಿದ್ದರು. ಕಚೇರಿ ಬಂದ್ ಆಗಿಲ್ಲ. ರಜೆ ಹಾಕದೇ ಕಚೇರಿಗೆ ಗೈರು ಆಗಿರುವ ಅಧಿಕಾರಿಗಳಗೆ ಶೋಕಾಸ್ ನೋಟಿಸ್ ನೀಡುವಂತೆ ಸಹಾಯಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.