ನೂತನ ಆಟೋ ನಿಲ್ದಾಣಕ್ಕೆ ಶಾಸಕ ಸ್ವರೂಪ್ ಚಾಲನೆ

| Published : Jun 04 2025, 02:27 AM IST

ಸಾರಾಂಶ

ಆಟೋ ಚಾಲಕರ ಕಳೆದ ಹಲವು ದಿನಗಳ ಬೇಡಿಕೆಯಾಗಿದ್ದ ಆಟೋ ನಿಲ್ದಾಣ ಸ್ಥಾಪನೆಯಾಗಿ ಇಂದು ಉದ್ಘಾಟನೆ ಮಾಡಲಾಗಿದೆ. ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಆಟೋ ಖರೀದಿಸಿ ತಮ್ಮ ಬದುಕು ಕಟ್ಟಿಕೊಂಡಿರುವ ಆಟೋ ಚಾಲಕರು ಬಿಸಿಲು ಹಾಗೂ ಮಳೆಯಿಂದ ತಮ್ಮ ಆಟೋಗಳನ್ನು ರಕ್ಷಿಸುವುದು ಸವಾಲಾಗಿದೆ. ಆದುದರಿಂದ ಶಾಸಕರ ಅನುದಾನದಲ್ಲಿ ಸಣ್ಣ ಸಹಾಯಾಸ್ತ ಚಾಚಲಾಗಿದೆ ಎಂದು ಶಾಸಕ ಸ್ವರೂಪ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನಹುಣಸಿನಕೆರೆ ಬಡಾವಣೆ ೮೦ ಫೀಟ್ ರಸ್ತೆಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ಎಪಿಜೆ ಅಬ್ದುಲ್ ಕಲಾಂ ಆಟೋ ನಿಲ್ದಾಣವನ್ನು ಶಾಸಕ ಎಚ್.ಪಿ. ಸ್ವರೂಪ್‌ ಪ್ರಕಾಶ್ ಮಂಗಳವಾರ ಉದ್ಘಾಟಿಸಿದರು.ಇದೇ ವೇಳೆ ಶಾಸಕರು ಮಾತನಾಡಿ, ಈ ಭಾಗದ ಆಟೋ ಚಾಲಕರ ಕಳೆದ ಹಲವು ದಿನಗಳ ಬೇಡಿಕೆಯಾಗಿದ್ದ ಆಟೋ ನಿಲ್ದಾಣ ಸ್ಥಾಪನೆಯಾಗಿ ಇಂದು ಉದ್ಘಾಟನೆ ಮಾಡಲಾಗಿದೆ. ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಆಟೋ ಖರೀದಿಸಿ ತಮ್ಮ ಬದುಕು ಕಟ್ಟಿಕೊಂಡಿರುವ ಆಟೋ ಚಾಲಕರು ಬಿಸಿಲು ಹಾಗೂ ಮಳೆಯಿಂದ ತಮ್ಮ ಆಟೋಗಳನ್ನು ರಕ್ಷಿಸುವುದು ಸವಾಲಾಗಿದೆ. ಆದುದರಿಂದ ಶಾಸಕರ ಅನುದಾನದಲ್ಲಿ ಸಣ್ಣ ಸಹಾಯಾಸ್ತ ಚಾಚಲಾಗಿದೆ ಎಂದರು. ಒಂದೆಡೆ ಬಾಡಿಗೆ ಕೊರತೆಯಿಂದ ಬಳಲುತ್ತಿರುವ ಆಟೋ ಚಾಲಕರು ತಮ್ಮ ವಾಹನಗಳನ್ನು ರಕ್ಷಣೆ ಮಾಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ಸುಸಜ್ಜಿತವಾದ ಆಟೋ ನಿಲ್ದಾಣ ನಿರ್ಮಿಸಲಾಗಿದ್ದು ಆಟೋ ಚಾಲಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು..ಆಟೋ ನಿಲ್ದಾಣ ಉದ್ಘಾಟಿಸಲು ಬಂದ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಆಟೋ ಚಾಲಕರ ಸಂಘದ ಸದಸ್ಯರು ಪ್ರೀತಿಪೂರ್ವಕವಾಗಿ ಬರಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ನಗರಸಭೆ ಸದಸ್ಯ ರಫೀಕ್, ಜಿ. ಕುಮಾರ್, ಮಹಾಂತೇಶ್ ಸೇರಿದಂತೆ ಆ ಭಾಗದ ವಾರ್ಡ್ ಸದಸ್ಯರು, ಧಾರ್ಮಿಕ ಮುಖಂಡರು ಹಾಗೂ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.