ಸಾರಾಂಶ
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕದೆ ಇದ್ದಾಗ ಅವುಗಳ ಶೇಖರಣೆ ಮಾಡಲು ಹಳೆಯ ಶೀತಲಗೃಹ ನಿರ್ಮಾಣಗೊಂಡಿರುವುದರಿಂದ ೨೦೦೦ ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ದೊಡ್ಡ ಮಟ್ಟದ ಶೀತಲಗೃಹ ಗೃಹ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ಅವರು ತಿಳಿಸಿದ್ದಾರೆ. ಗುಣಮಟ್ಟ ಕಾಯ್ದುಕೊಂಡು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು. ಈ ಶೀತಲಗೃಹ ನಿರ್ಮಾಣದಿಂದ ಶೀಘ್ರವಾಗಿ ರೈತರು ಬೆಳೆದ ಆಲೂಗೆಡ್ಡೆ ಮತ್ತು ತರಕಾರಿಗಳನ್ನು ಶೇಖರಿಸಿಡಲು ಅನುಕೂಲವಾಗಲಿದೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕದೆ ಇದ್ದಾಗ ಅವುಗಳ ಶೇಖರಣೆ ಮಾಡಲು ಹಳೆಯ ಶೀತಲಗೃಹ ನಿರ್ಮಾಣಗೊಂಡಿರುವುದರಿಂದ ೨೦೦೦ ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ದೊಡ್ಡ ಮಟ್ಟದ ಶೀತಲಗೃಹ ಗೃಹ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ಅವರು ತಿಳಿಸಿದ್ದಾರೆ.ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ತೋಟಗಾರಿಕೆ ಇಲಾಖೆಯಡಿಯಲ್ಲಿ ಹೊಸದಾಗಿ ಶೈತ್ಯಾಗಾರ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗುಣಮಟ್ಟ ಕಾಯ್ದುಕೊಂಡು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು. ಈ ಶೀತಲಗೃಹ ನಿರ್ಮಾಣದಿಂದ ಶೀಘ್ರವಾಗಿ ರೈತರು ಬೆಳೆದ ಆಲೂಗೆಡ್ಡೆ ಮತ್ತು ತರಕಾರಿಗಳನ್ನು ಶೇಖರಿಸಿಡಲು ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಾಗಿ ರೈತರು ಆಲೂಗೆಡ್ಡೆಯನ್ನು ಬೆಳೆಯುತ್ತಾರೆ ಹಾಗೂ ಹಳೇಬೀಡು, ಜಾವಗಲ್, ಸಾಲಗಾಮೆ ಭಾಗಗಳಿಂದ ತರಕಾರಿಗಳು ಹೆಚ್ಚಾಗಿ ಬರುತ್ತವೆ. ಇವುಗಳ ಬೆಲೆ ಕುಸಿತವಾದಾಗ ರೈತರಿಗೆ ನಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ಶೇಖರಿಸಿಟ್ಟು ಬೆಲೆ ಏರಿಕೆಯಾದಾಗ ಮಾರಾಟ ಮಾಡಲು ಪ್ರಯೋಜನವಾಗುತ್ತದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರಾದ ಚಂದ್ರೇಗೌಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮಂಗಳ ಹಾಗೂ ಮತ್ತಿತರರು ಉಪಸ್ಥಿತರಿದ್ದರು.