ಸಾರಾಂಶ
ಪಾದಯಾತ್ರೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಒಳಚರಂಡಿ ಅವೈಜ್ಞಾನಿಕವಾಗಿದ್ದು, ಮಳೆ ಬಂದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗಲಿದ್ದು,
ಕನ್ನಡಪ್ರಭ ವಾರ್ತೆ ಮೈಸೂರು
ನಗರ ಪಾಲಿಕೆಯ 43ನೇ ವಾರ್ಡ್ ವ್ಯಾಪ್ತಿಯ ಶಾರದಾದೇವಿ ನಗರ, ಜನತಾನಗರ, ಟಿ.ಕೆ. ಲೇಔಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಭಾನುವಾರ ಪಾದಯಾತ್ರೆ ಮೂಲಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.ಪಾದಯಾತ್ರೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಒಳಚರಂಡಿ ಅವೈಜ್ಞಾನಿಕವಾಗಿದ್ದು, ಮಳೆ ಬಂದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗಲಿದ್ದು, ಈ ಕೂಡಲೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಪಾರ್ಕ್ ಗಳಲ್ಲಿ ರಾತ್ರಿ ಸಮಯ ಪುಂಡ ಯುವಕರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಗಸ್ತು ಹೆಚ್ಚಿಸಬೇಕು. ಖಾಲಿ ನಿವೇಶನ ಇರುವ ರೆವಿನ್ಯೂ ಮನೆಗಳ ಸುತ್ತಮುತ್ತ ಕಸ ಹಾಕಬಾರದು. ಕೃಷ್ಣಮೂರ್ತಿ ಬಡಾವಣೆಯಲ್ಲಿ ಮರಗಳು ಬೆಳದಿದ್ದು, ಕೂಡಲೆ ಟ್ರಿಂ ಮಾಡುವ ಮೂಲಕ ಸರಿಪಡಿಸಬೇಕು ಎಂದು ಅವರು ತಿಳಿಸಿದರು.ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಮುಖಂಡರಾದ ಜೋಗಿ ಮಂಜು, ಶಿವಣ್ಣ, ಮಧುಕೆಂಚ, ರಮೇಶ್, ಬಸವರಾಜು, ಈರೇಗೌಡ, ಚಂದ್ರಪ್ಪ, ಲೋಹಿತ್, ಶ್ರೀನಿವಾಸ್, ಪೂರ್ಣಿಮಾ, ಕಿಶೋರ್, ಪ್ರದೀಪ್, ಶಿವರಾಜ್ ರಾವ್, ರಮೇಶ್, ಜಯರಾಮ್, ಸತ್ಯಾನಂದ ವಿಟ್ಟು ಮೊದಲಾದವರು ಇದ್ದರು.