ಸಾರಾಂಶ
ನರಸಿಂಹರಾಜಪುರ ಗುಬ್ಬಿಗಾ ಗ್ರಾಮ ಪಂಚಾಯಿತಿ ನೇತ್ಕಲ್ ನಲ್ಲಿ ಜೆಜೆಎಂ ಯೋಜನೆಯಡಿ ಶುದ್ದ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ ಶುದ್ದ ಕುಡಿಯುವ ನೀರಿನ ಯೋಜನೆಯಾದ ಜೆಜೆಎಂ ಕಾಮಗಾರಿಯನ್ನು ಉತ್ತಮ ಗುಣ ಮಟ್ಟದಲ್ಲಿ ಮಾಡಬೇಕು ಎಂದು ಸೂಚಿಸಿದರು.
- ಗುಬ್ಬಿಗಾ ಗ್ರಾಮ ಪಂಚಾಯಿತಿಯ ನೇತ್ಕಲ್ ನಲ್ಲಿ ಜೆಜೆಎಂ ಕಾಮಗಾರಿಗೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಶುದ್ದ ಕುಡಿಯುವ ನೀರಿನ ಯೋಜನೆಯಾದ ಜೆಜೆಎಂ ಕಾಮಗಾರಿಯನ್ನು ಉತ್ತಮ ಗುಣ ಮಟ್ಟದಲ್ಲಿ ಮಾಡಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಸಂಬಂಧಪಟ್ಟ ಇಂಜಿನಿಯರ್ ಗೆ ಸೂಚಿಸಿದರು.
ಶನಿವಾರ ಗುಬ್ಬಿಗಾ ಗ್ರಾಮ ಪಂಚಾಯಿತಿ ನೇತ್ಕಲ್ ನಲ್ಲಿ ಜೆಜೆಎಂ ಯೋಜನೆಯಡಿ ಶುದ್ದ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಜೆಜೆಎಂ ಯೋಜನೆ ಗ್ರಾಮದ ಪ್ರತಿ ಮನೆ, ಮನೆಗೂ ಶುದ್ಧ ಕುಡಿಯುವ ನೀರಿನ ಯೋಜನೆಯಾಗಿದೆ. ಈ ಕಾಮಗಾರಿಗಳಲ್ಲಿ ಯಾವುದೇ ಲೋಪವಾಗಬಾರದು. ಟ್ಯಾಂಕ್, ಪೈಪ್ ಗಳ ಕಾಮಗಾರಿ ಮಾಡುವಾಗ ಇಂಜಿನಿಯರ್, ಗುತ್ತಿಗೆದಾರರು ಎಲ್ಲೂ ಕಳಪೆ ಕಾಮಗಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.ಗುಬ್ಬಿಗಾ ಗ್ರಾಮ ಪಂಚಾಯಿತಿಯ 3 ಗ್ರಾಮಗಳಿಗೆ ಸ್ಮಶಾನ ಜಾಗ ಮಂಜೂರಾಗಿದೆ. ಈಚಿಕೆರೆ ಗ್ರಾಮಕ್ಕೆ 2 ಎಕರೆ, ಗುಬ್ಬಿಗಾ, ಅರಳಿಕೊಪ್ಪ ಗ್ರಾಮಗಳಿಗೆ ತಲಾ 1 ಎಕ್ರೆ ಮಂಜೂರಾಗಿದ್ದು ಪಹಣಿ ಕೂಡಾ ಆಗಿದೆ. ಈ ಜಾಗದ ಸ್ಕೆಚ್ ಆಗ ಬೇಕಾಗಿದ್ದು ಸರ್ವೆ ಮಾಡಿಸಿ ಜಾಗ ಗುರುತು ಮಾಡಿಸುವಂತೆ ಕೋರಿ ತಹಸೀಲ್ದಾರ್ ಅವರಿಗೆ ಪತ್ರ ಬರೆಯುವಂತೆ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗುಬ್ಬಿಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಟಿ.ನಾಗರತ್ನ, ಉಪಾಧ್ಯಕ್ಷ ಶಂಕರ್, ಸದಸ್ಯ ಸಾಜು, ಮುಖಂಡರಾದ ಬೆನ್ನಿ, ಮನು, ಮಾಳೂರು ದಿಣ್ಣೆ ರಮೇಶ್, ಹೊನಗಾರು ರಮೇಶ್, ಪ್ರಶಾಂತಶೆಟ್ಟಿ,ಆದರ್ಶ, ಪಿಡಿಒ. ಸೀಮ ಮತ್ತಿತರರು ಇದ್ದರು.