ನಗರದ ಬೋಳೂರಿನ ಶ್ರೀ ಜಾರಂದಾಯ ದೈವಸ್ಥಾನದ ಆಸುಪಾಸಿನ ಪರಿಸರದಲ್ಲಿ ಸ್ಥಳೀಯರ ಪ್ರಮುಖ ಸಮಸ್ಯೆಯಾಗಿರುವ ಒಳಚರಂಡಿ ಕುರಿತು ದೈವಸ್ಥಾನದ ಆವರಣದಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಗುರುವಾರ ಹಿರಿಯ ಅಧಿಕಾರಿಗಳ, ಸಂಘಸಂಸ್ಥೆಗಳ, ಸ್ಥಳೀಯರ ಜೊತೆ ಗುರುವಾರ ಸಭೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕರು, ಈ ಭಾಗದಲ್ಲಿ ಡ್ರೈನೇಜ್ ಇಲ್ಲದಿರುವುದೇ ಜನರ ಬಹುದೊಡ್ಡ ಸಮಸ್ಯೆಯಾಗಿದೆ. ಸುಮಾರು 75 ವರ್ಷಗಳಿಂದಲೂ ಈ ಬಗ್ಗೆ ಸ್ಥಳೀಯರ ಬೇಡಿಕೆಯಿದ್ದು ಸಮಸ್ಯೆಗೆ ಮುಕ್ತಿ ನೀಡಲೇ ಬೇಕು. ಹಿಂದಿನ ಅವಧಿಯಲ್ಲೇ ಕುಡ್ಸೆಂಪ್‌ನಿಂದ ಅಗತ್ಯ ಅನುದಾನಗಳನ್ನು ಮೀಸಲಿಟ್ಟಿದ್ದೆವು.
ಮಂಗಳೂರು: ನಗರದ ಬೋಳೂರಿನ ಶ್ರೀ ಜಾರಂದಾಯ ದೈವಸ್ಥಾನದ ಆಸುಪಾಸಿನ ಪರಿಸರದಲ್ಲಿ ಸ್ಥಳೀಯರ ಪ್ರಮುಖ ಸಮಸ್ಯೆಯಾಗಿರುವ ಒಳಚರಂಡಿ ಕುರಿತು ದೈವಸ್ಥಾನದ ಆವರಣದಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಗುರುವಾರ ಹಿರಿಯ ಅಧಿಕಾರಿಗಳ, ಸಂಘಸಂಸ್ಥೆಗಳ, ಸ್ಥಳೀಯರ ಜೊತೆ ಗುರುವಾರ ಸಭೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕರು, ಈ ಭಾಗದಲ್ಲಿ ಡ್ರೈನೇಜ್ ಇಲ್ಲದಿರುವುದೇ ಜನರ ಬಹುದೊಡ್ಡ ಸಮಸ್ಯೆಯಾಗಿದೆ. ಸುಮಾರು 75 ವರ್ಷಗಳಿಂದಲೂ ಈ ಬಗ್ಗೆ ಸ್ಥಳೀಯರ ಬೇಡಿಕೆಯಿದ್ದು ಸಮಸ್ಯೆಗೆ ಮುಕ್ತಿ ನೀಡಲೇ ಬೇಕು. ಹಿಂದಿನ ಅವಧಿಯಲ್ಲೇ ಕುಡ್ಸೆಂಪ್‌ನಿಂದ ಅಗತ್ಯ ಅನುದಾನಗಳನ್ನು ಮೀಸಲಿಟ್ಟಿದ್ದೆವು. ಆದರೆ ಈ ಯೋಜನೆ ಸಾಕಾರಗೊಳ್ಳದಿರಲು ಇಲ್ಲಿ ನೆಲದಡಿ ಇರುವ ಬಂಡೆಕಲ್ಲುಗಳಂತಹ ಭೌಗೋಳಿಕ ಸಮಸ್ಯೆಯೇ ಕಾರಣ, ಸದ್ಯ ಈ ಯೋಜನೆಗಾಗಿ ಎರಡೂವರೆಯಿಂದ ಮೂರು ಕೋಟಿ ರು. ಅನುದಾನ ಅಗತ್ಯ ಬೀಳಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಿದ್ದರೂ ಈ ಸಮಸ್ಯೆ ಬಗೆ ಹರಿಯಲೇಬೇಕೆಂಬ ಆಶಯದಿಂದ ಎಲ್ಲರ ಸಮ್ಮುಖದಲ್ಲಿ ಸಭೆ ನಡೆಸಲಾಗುತ್ತಿದ್ದು ಕ್ಷೇತ್ರದ ಜವಾಬ್ದಾರಿಯುತ ಶಾಸಕನಾಗಿ ಶತಾಯಗತಾಯ ನನ್ನ ಪ್ರಯತ್ನ ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು.ಸಭೆಯಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು, ಪಾಲಿಕೆ ಉಪ ಆಯುಕ್ತ ನರೇಶ್ ಶೆಣೈ, ಕಾರ್ಯಪಾಲ ಅಭಿಯಂತರರು ನಾಗರಾಜ್, ಸಹಾಯಕ ಕಾರ್ಯಪಾಲ ಅಭಿಯಂತರರು ಶಿವಲಿಂಗಯ್ಯ, ಸಹಾಯಕ ನಗರ ಯೋಜನಾಧಿಕಾರಿ ಗುರುಪ್ರಸಾದ್, ಕುಡ್ಸೆಂಪ್ ಅಧಿಕಾರಿಗಳಾದ ವೆಂಕಟ್ರಮಣ, ಜಯಪ್ರಕಾಶ್ ಹಾಗೂ ಶಿವು ಕುಮಾರ್ ಮತ್ತಿತರರು ಇದ್ದರು.
-------------------