ನೇಕಾರರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್

| Published : Jan 15 2024, 01:47 AM IST

ನೇಕಾರರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್
Share this Article
  • FB
  • TW
  • Linkdin
  • Email

ಸಾರಾಂಶ

ಇಳಕಲ್ಲ: ನಗರದ ಶಾಸಕರ ಗೃಹ ಕಚೇರಿಯಲ್ಲಿ ಜವಳಿ ಇಲಾಖೆ ವತಿಯಿಂದ ಕೂಡ ಮಾಡುವ ನೇಕಾರರ ಸ್ಮಾರ್ಟ್‌ ಕಾರ್ಡ್‌ ಶಾಸಕ ವಿಜಯಾನಂದ ಕಾಶಪ್ಪನವರ್ ನೇಕಾರರಿಗೆ ವಿತರಣೆ ಮಾಡಿದರು. ಪಾವರ್ ಲೂಮ್ ನೇಕಾರರಿಗೆ ಬಾಗಲಕೋಟೆ ಜವಳಿ ಇಲಾಖೆ ವತಿಯಿಂದ ನೀಡುವ ನೇಕಾರ ಸ್ಮಾರ್ಟ್‌ ಕಾರ್ಡ್‌ ನಗರದ ನೇಕಾರರಿಗೆ ವಿತರಣೆ ಮಾಡಿ, ಶಾಸಕರು ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಳಕಲ್ ನಗರದ ಶಾಸಕರ ಗೃಹ ಕಚೇರಿಯಲ್ಲಿ ಜವಳಿ ಇಲಾಖೆ ವತಿಯಿಂದ ಕೂಡ ಮಾಡುವ ನೇಕಾರರ ಸ್ಮಾರ್ಟ್‌ ಕಾರ್ಡ್‌ ಶಾಸಕ ವಿಜಯಾನಂದ ಕಾಶಪ್ಪನವರ್ ನೇಕಾರರಿಗೆ ವಿತರಣೆ ಮಾಡಿದರು.

ಪಾವರ್ ಲೋಮ್ ನೇಕಾರರಿಗೆ ಬಾಗಲಕೋಟೆ ಜವಳಿ ಇಲಾಖೆ ವತಿಯಿಂದ ನೀಡುವ ನೇಕಾರ ಸ್ಮಾರ್ಟ್‌ ಕಾರ್ಡ್‌ ನಗರದ ನೇಕಾರರಿಗೆ ವಿತರಣೆ ಮಾಡಿ, ಶಾಸಕರು ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ. ಜನರಿಗೆ ಆಶ್ವಾಸನೆ ಕೊಟ್ಟಂತೆ ಎಲ್ಲ ವರ್ಗದವರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಂತಹ ಸರ್ಕಾರ ನಮ್ಮದಾಗಿದೆ. ನೇಕಾರರ ಸ್ಮಾರ್ಟ್‌ ಕಾರ್ಡ್‌ ಹೊಂದಿರುವವರಿಗೆ ಸರ್ಕಾರ ಸಿಗುವ ನೇಕಾರಕ್ಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು. ಕಾಂಗ್ರೆಸ್ ಮುಖಂಡರಾದ ವಿಜಯಮಹಾಂತೇಶ ಗದ್ದನಕೇರಿ, ಶರಣಪ್ಪ ಆಮದಿಹಾಳ, ಅಹ್ಮದ್ ಬಾಗವಾನ್, ಸುರೇಶ ಜಂಗ್ಲಿ, ಪ್ರಶಾಂತ ಪಾಟೀಲ್, ಅಮೃತ ಬಿಜ್ಜಳ, ಅಬ್ಬು ಹಳ್ಳಿ, ರಾಯನಗೌಡ ಗೌಡರ ಹಾಗೂ ಇತರರು ಉಪಸ್ಥಿತರಿದ್ದರು.