ಸಾರಾಂಶ
ಜಗಳೂರು ತಾಲೂಕಿನ ಉದ್ದಗಟ್ಟ ಗ್ರಾಮದಲ್ಲಿ ಕೆರೆ ನೀರು ನುಗ್ಗಿದ ಪರಿಣಾಮ 20ಕ್ಕಿಂತ ಹೆಚ್ಚು ಮನೆಗಳು ಜಲಾವೃತವಾದ ಸ್ಥಳಕ್ಕೆಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಉದ್ದಗಟ್ಟ ಗ್ರಾಮದಲ್ಲಿ ಕೆರೆ ನೀರು ನುಗ್ಗಿದ ಪರಿಣಾಮ 20ಕ್ಕಿಂತ ಹೆಚ್ಚು ಮನೆಗಳು ಜಲಾವೃತವಾದ ಸ್ಥಳಕ್ಕೆಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು.ಗ್ರಾಮದಲ್ಲಿ ಮನೆಗಳು ಮುಳುಗಡೆಯಾದ 20 ನಿರಾಶ್ರಿತ ಕುಟುಂಬಗಳ ಮಹಿಳೆಯರಿಗೆ 20 ಪಾಕೀಟು ಸೋನಾ ಮಸೂರಿ ಅಕ್ಕಿ ಕೊಳ್ಳಲು ₹20 ಸಾವಿರ ಧನಸಹಾಯವನ್ನು ಶಾಸಕರು ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಉದ್ದಗಟ್ಟದ ಸರ್ವೇ ನಂಬರಿನಲ್ಲಿರುವ 5 ಎಕರೆ ಕಂದಾಯ ಭೂಮಿಯನ್ನು ಮನೆಗಳ ನಿರ್ಮಾಣ ಮಾಡಿಕೊಳ್ಳಲು ಮಂಜೂರಾತಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹಮ್ಮದ್ ಗೌಸ್, ಆರ್.ಐ. ಧನಂಜಯ್ಯ ಕುಮಾರ್, ಪತ್ರಕರ್ತರಾದ ಡಿ.ಶ್ರೀನಿವಾಸ್, ಮಹಾಂತೇಶ್ ಬ್ರಹ್ಮ, ಗ್ರಾಮದ ಮುಖಂಡರು ಇದ್ದರು.- - - -28ಜೆ.ಜಿ.ಎಲ್.2:
ಜಗಳೂರು ತಾಲೂಕಿನ ಉದ್ದಗಟ್ಟದಲ್ಲಿ ಕೆರೆ ನೀರು ನುಗ್ಗಿದ ಪರಿಣಾಮ 20ಕ್ಕಿಂತ ಹೆಚ್ಚು ಮನೆಗಳು ಜಲಾವೃತವಾಗಿದ್ದ ಸ್ಥಳಕ್ಕೆಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು. -28ಜೆ.ಜಿ.ಎಲ್.2:ಜಗಳೂರು ತಾಲೂಕಿನ ಉದ್ದಗಟ್ಟದಲ್ಲಿ ಕೆರೆ ನೀರು ನುಗ್ಗಿದ ಪರಿಣಾಮ 20ಕ್ಕಿಂತ ಹೆಚ್ಚು ಮನೆಗಳು ಮುಳುಗಡೆಯಾಗಿದ್ದ ಸ್ಥಳಕ್ಕೆಶಾಸಕ ಬಿ.ದೇವೇಂದ್ರಪ್ಪ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.