ಕಾರ್ಯಕ್ರಮ ರದ್ದುಪಡಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ

| Published : Feb 17 2025, 12:32 AM IST

ಕಾರ್ಯಕ್ರಮ ರದ್ದುಪಡಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ಕೂಟು ಹೊಳೆಯಲ್ಲಿ ಮೃತನಾದ ನವೋದಯ ಶಾಲೆಯ ವಿದ್ಯಾರ್ಥಿ ಅಮಿತ್‌ ಮನೆಗೆ ಬಂದು ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್‌ಗೌಡ ಮಾನವೀಯತೆ ಮೆರೆದಿದ್ದಾರೆ.

ಮಡಿಕೇರಿ : ಕೂಟು ಹೊಳೆಯಲ್ಲಿ ಮೃತನಾದ ನವೋದಯ ಶಾಲೆಯ ವಿದ್ಯಾರ್ಥಿ ಅಮಿತ್ ಮನೆಗೆ ಬಂದು ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಮಾನವೀಯತೆ ಮೆರೆದಿದ್ದಾರೆ.

ಪೂರ್ವನಿಯೋಜಿತ ಖಾಸಗಿ ಕಾರ್ಯಕ್ರಮಗಳನ್ನು ರದ್ದು ಪಡಿಸಿ ಸಾಂತ್ವನ ಹೇಳಲು ಮನೆಗೆ ಡಾ. ಮಂತರ್ ಗೌಡ ಆಗಮಿಸಿದ್ದರು.

ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಸೆಮಿನಾರ್ ಒಂದರಲ್ಲಿ ಡಾ. ಮಂತರ್ ಗೌಡ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಕಾರ್ಯಕ್ರಮ ನಿಗದಿಯಾಗಿತ್ತು.

ಆ ಸಮಯದಲ್ಲಿ ಕಳೆದ ಮೂರು ದಿನಗಳಿಂದ ನವೋದಯ ಶಾಲೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಅಮಿತ್ ಶವ ಪತ್ತೆಯಾಯಿತು.

ವಿಷಯ ತಿಳಿದ ಡಾ. ಮಂತರ್ ಗೌಡ ಅವರು ಪೂರ್ವನಿಯೋಜಿತ ಕಾರ್ಯಕ್ರಮದ ಆಯೋಜಕರಿಗೆ ಸಂದೇಶ ಪತ್ರ ರವಾನಿಸಿ, ಮಡಿಕೇರಿಗೆ ಆಗಮಿಸಿ ಮೃತ ಅಮಿತ್ ಪೋಷಕರಿಗೆ ಸಾಂತ್ವನ ಹೇಳಿ, ಮುಂದೆ ಜೊತೆಯಾಗಿ ಇರುವ ಭರವಸೆ ನೀಡಿದಲ್ಲದೆ ವೈಯುಕ್ತಿಕ ನೆರವು ನೀಡಿದರು.