ಸಾರಾಂಶ
ಪ್ರಧಾನಿಗಳು ತಮ್ಮ ಮಾತಿನಲ್ಲಿ, ಹರ್ ಘರ್ ತಿರಂಗಾ ಅಭಿಯಾನಕ್ಕೆ ದೇಶದ್ಯಾಂತ ಬೆಂಬಲ ವ್ಯಕ್ತವಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು 113 ನೇ ಕಂತಿನ ಆಕಾಶವಾಣಿ ‘ಮನ್ ಕಿ ಬಾತ್’ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ರವರು ಮಂಗಳೂರು ನಗರ ದಕ್ಷಿಣದ ಮಣ್ಣಗುಡ್ಡೆ ವಾರ್ಡಿನ 78 ನೇ ಬೂತ್ ಅಧ್ಯಕ್ಷ ಪ್ರವೀಣ್ ಕುಮಾರ್ ಮನೆಯಲ್ಲಿ ಕಾರ್ಯಕ್ರಮ ಆಲಿಸಿದರು.
ಪ್ರಧಾನಿಗಳು ತಮ್ಮ ಮಾತಿನಲ್ಲಿ, ಹರ್ ಘರ್ ತಿರಂಗಾ ಅಭಿಯಾನಕ್ಕೆ ದೇಶದ್ಯಾಂತ ಬೆಂಬಲ ವ್ಯಕ್ತವಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹೆಮ್ಮೆಯ ಪ್ರಧಾನಮಂತ್ರಿಗಳ ಸ್ಫೂರ್ತಿದಾಯಕ ಮಾತುಗಳೇ ನಮ್ಮೆಲ್ಲರನ್ನು ಇನ್ನಷ್ಟು ಕಾರ್ಯಗಳಿಗೆ ಹುರಿದುಂಬಿಸುತ್ತವೆ ಎಂದು ಶಾಸಕರು ಹೇಳಿದರು.
ಈ ವೇಳೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಪಾಲಿಕೆ ಸದಸ್ಯೆ ಸಂಧ್ಯಾ ಮೋಹನ್ ಆಚಾರ್ ಮತ್ತಿತರರಿದ್ದರು.