ಸಾರಾಂಶ
ತಾಲೂಕಿನ ಉಚ್ಚಂಗಿದುರ್ಗದ ಜಾತ್ರೆಯಲ್ಲಿ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಯುಗಾದಿ ಹಬ್ಬದ ಪ್ರಯುಕ್ತ ಸಾಮೂಹಿಕವಾಗಿ ಬೇವು-ಬೆಲ್ಲ ವಿತರಿಸಿ ಶುಭಕೋರಿದರು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ತಾಲೂಕಿನ ಉಚ್ಚಂಗಿದುರ್ಗದ ಜಾತ್ರೆಯಲ್ಲಿ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಯುಗಾದಿ ಹಬ್ಬದ ಪ್ರಯುಕ್ತ ಸಾಮೂಹಿಕವಾಗಿ ಬೇವು-ಬೆಲ್ಲ ವಿತರಿಸಿ ಶುಭಕೋರಿದರು.ಈ ಸಂದರ್ಭ ಮಾತನಾಡಿದ ಶಾಸಕರು, ಮನುಷ್ಯನಿಗೆ ಹುಟ್ಟು ಸಾವಿನ ಮದ್ಯೆ ಸುಖ - ದುಃಖಗಳು,, ಹಗಲು - ರಾತ್ರಿ, ನೋವು- ನಲಿವು ಇವೆಲ್ಲವೂ ಒಂದೇ ನಾಣ್ಯದ ಎರಡು ಮುಖಗಳು, ಎಲ್ಲವನ್ನೂ ಸಮನಾಗಿ ಸ್ವೀಕರಿಸಬೇಕು. ಬೇವು-ಬೆಲ್ಲವನ್ನು ಸಮನಾಗಿ ಸ್ವೀಕರಿಸಿ ದೇವರ ಮೇಲೆ ಭಾರವನ್ನಾಕಿ ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಬೆಳೆ ಆಗಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯೆಕ್ಷೆ ಬಿ.ಗಂಗಮ್ಮ ರಮೇಶ್ ಮಾತನಾಡಿ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ, ಕುಡಿಯುವ ನೀರು, ಬ್ಲೀಚಿಂಗ್ ಪೌಡರ್ ಸಿಂಪಡಿಕೆ, ಚರಂಡಿ ಸ್ವಚ್ಛತೆ, ಬೀದಿದೀಪ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಈ ದೇವಿಯ ಜಾತ್ರೆಗೆ ಹಾವೇರಿ, ದಾವಣಗೆರೆ, ವಿಜಯನಗರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಭಕ್ತರು ಆಗಮಿಸಿ ಭಕ್ತಿ ಸಮರ್ಪಿಸಿ ಹರಕೆ ತೀರಿಸಿದರು.
ಈ ಸಂದರ್ಭ ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ, ಗ್ರಾಪಂ ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ, ವಿಎಸ್ಎಸ್ಎನ್ ಅಧ್ಯಕ್ಷ ತಳವಾರ್ ಮಂಜಪ್ಪ, ಮುಖಂಡರಾದ ಶಿವಕುಮಾರ್ ಸ್ವಾಮಿ, ಮಹಾಂತೇಶ್ ನಾಯ್ಕ್, ಎಚ್.ಸಿದ್ದಪ್ಪ, ರೈತ ಮುಖಂಡ ಫಣಿಯಾಪುರದ ಲಿಂಗರಾಜ್, ಪಲ್ಲಾಗಟ್ಟಿ ಶೇಖರಪ್ಪ, ರಾಜಶೇಖರ್ ಗೌಡ್ರು, ಕೆಂಚಪ್ಪ, ಎಂ. ಕುಮಾರ್, ಇಒ ಕೆ. ಮಲ್ಲಪ್ಪ, ಪಿಎಸ್ಐಗಳಾದ ಕೆ. ರಂಗಯ್ಯ, ಎ.ಕಿರಣ್ ಕುಮಾರ್, ನಾಗರತ್ನ, ಪಿಡಿಒ ಪರಮೇಶ್ವರಪ್ಪ, ಗಂಗಾಧರ್, ಗ್ರಾಮ ಪಂಚಾಯಿತಿ ಸರ್ವ ಸದಸ್ಯರಿದ್ದರು.