ಖಾಸಗಿ ಕಂಪನಿ ಒತ್ತುವರಿ ಮಾಡಿಕೊಂಡಿದ್ದ ಜಾಗ ಗ್ರಾಪಂ ವಶಕ್ಕೆ ನೀಡಿದ ಶಾಸಕರು

| Published : Aug 27 2025, 01:00 AM IST

ಖಾಸಗಿ ಕಂಪನಿ ಒತ್ತುವರಿ ಮಾಡಿಕೊಂಡಿದ್ದ ಜಾಗ ಗ್ರಾಪಂ ವಶಕ್ಕೆ ನೀಡಿದ ಶಾಸಕರು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯ್ತಿಗೆ ಸೇರಿದ ಬಸ್ ನಿಲ್ದಾಣ ಕಟ್ಟಡ ಜಾಗ ಖಾಸಗಿ ಕಂಪನಿ ಒತ್ತುವರಿ ಮಾಡಿಕೊಂಡಿದ್ದು, ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಮತ್ತೆ ಗ್ರಾಮದ ಹೆಸರಿಗೆ ತಿದ್ದುಪಡಿ ದಾಖಲಿಸಿ ಜಾಗವನ್ನು ಪಂಚಾಯ್ತಿಗೆ ವಹಿಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯ್ತಿಗೆ ಸೇರಿದ ಬಸ್ ನಿಲ್ದಾಣ ಕಟ್ಟಡ ಜಾಗ ಖಾಸಗಿ ಕಂಪನಿ ಒತ್ತುವರಿ ಮಾಡಿಕೊಂಡಿದ್ದು, ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಮತ್ತೆ ಗ್ರಾಮದ ಹೆಸರಿಗೆ ತಿದ್ದುಪಡಿ ದಾಖಲಿಸಿ ಜಾಗವನ್ನು ಪಂಚಾಯ್ತಿಗೆ ವಹಿಸಿಕೊಟ್ಟರು.

ಗ್ರಾಪಂ ಕಚೇರಿ ಮುಂಭಾಗದಲ್ಲಿ ಹಲವು ವರ್ಷಗಳಿಂದ ಇದ್ದ ಬಸ್ ನಿಲ್ದಾಣವನ್ನು ಖಾಸಗಿ ಕಂಪನಿ ಒತ್ತುವರಿ ಮಾಡಿಕೊಂಡು ತಮ್ಮ ಸಂಸ್ಥೆ ಹೆಸರಿನಲ್ಲಿ ಬಸ್ ನಿಲ್ದಾಣ ನಿರ್ಮಿಸಿದೆ ಎಂದು ಹೇಳುತ್ತಿದ್ದರು. ಕಂಪನಿ ವಿರುದ್ಧ ಗ್ರಾಪಂ ಸದಸ್ಯರು, ಮಾಜಿ ಸದಸ್ಯರು, ಗ್ರಾಮಸ್ಥರು ಹೋರಾಟ ನಡೆಸಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡರಿಗೆ ದೂರು ನೀಡಿದ್ದರು.

ಜಿಪಂ ಹಾಗೂ ತಾಪಂ ಕಚೇರಿ ಮೂಲಕ ಮಾಹಿತಿ ಪಡೆದ ಶಾಸಕರು, ಮೂಲ ದಾಖಲಾತಿ ಪರಿಶೀಲಿಸಿ ಕಾನೂನು ರೀತ್ಯಾ ಗ್ರಾಮಕ್ಕೆ ಸೇರಿರುವ ಬಸ್ ನಿಲ್ದಾಣದ ಜಾಗವನ್ನು ಗ್ರಾಪಂ ಹೆಸರಿಗೆ ಖಾತೆ ಮಾಡುವಂತೆ ಪಿಡಿಒಗೆ ಸೂಚನೆ ನೀಡಿದ್ದರು.

ಅದೇ ರೀತಿ ಗ್ರಾಪಂ ಹೆಸರಿಗೆ ಬಸ್ ನಿಲ್ದಾಣ ಮತ್ತು ಅದಕ್ಕೆ ಸೇರಿದ ಜಾಗ ಖಾತೆಯಾಗಿದ್ದು, ಅದರ ಪ್ರತಿಯನ್ನು ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಹುಲಿಕೆರೆ ಬಸ್ ನಿಲ್ದಾಣದಲ್ಲಿ ಶಾಸಕರು ವಿತರಿಸಿ ಬಸ್ ನಿಲ್ದಾಣ ಹುಲಿಕೆರೆ ಗ್ರಾಪಂಗೆ ಸೇರಿದ ಸ್ವತ್ತು ಎಂದರು.

ಈ ವೇಳೆ ಗ್ರಾಪಂ ಸದಸ್ಯ ರಾಮು, ಮಾಜಿ ಅಧ್ಯಕ್ಷ ಚೆಲುವರಾಜು, ಮುಖಂಡರಾದ ಬಾಲಣ್ಣ, ಶ್ರೀನಿವಾಸ್, ಮಾಜಿ ಸದಸ್ಯೆ ರೇಶ್ಮಾ ಭಾನು, ರವಿ, ಸೂರಿ, ಕುಮಾರ, ಶಾಕೀರ್, ಕುಂಟೇಗೌಡ, ಚೆಲುವಣ್ಣ, ಮಾಜಿ ಅಧ್ಯಕ್ಷೆ ಬೋರಮ್ಮ, ಸುಶೀಲಮ್ಮ ಸೇರಿದಂತೆ ಹಲವಾರು ಗ್ರಾಮಸ್ಥರು ಇದ್ದರು.

ಲೈಂಗಿಕ ಕಿರುಕುಳ ತಡೆಗಟ್ಟಲು ದೂರು ಸಮಿತಿ ರಚನೆ

ಮಂಡ್ಯ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧಿಸುವಿಕೆ ಮತ್ತು ನಿವಾರಿಸುವಿಕೆ ಕಾಯ್ದೆಯ ಅನುಷ್ಠಾನಕ್ಕಾಗಿ ಸುಪ್ರೀಂ ಕೋರ್ಟ್ ಆದೇಶದಂತೆ 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಆಂತರಿಕ ದೂರು ಸಮಿತಿ ರಚಿಸಿ ಜಿಲ್ಲಾಧಿಕಾರಿಗಳ ಕಛೇರಿಗೆ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಮಾಹಿತಿ ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.