ಸಾರಾಂಶ
ಶಾಸಕರು ಕೆರಗೋಡು ಭಾಗದ ಅಭಿವೃದ್ಧಿಗೆ ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಭವಿಷ್ಯದ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ. ಅದೇ ರೀತಿ ಸಮಾಜದ ನೆಮ್ಮದಿ ಮತ್ತು ಸೌಹಾರ್ದ ಭಾವನೆಯೊಂದಿಗೆ ಶಾಸಕರು ಮಾಡುವ ಕೆಲಸಗಳಿಗೆ ಬೆಂಬಲವಾಗಿರುತ್ತೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕೆರಗೋಡು ಹನುಮಧ್ವಜ ಪ್ರಕರಣದಲ್ಲಿ ಶಾಸಕರ ಪಾತ್ರವಿಲ್ಲ. ಅವರು ಯಾವುದೇ ಜಾತಿ ಮತ್ತು ಧರ್ಮದ ವಿರೋಧಿಗಳೂ ಅಲ್ಲ. ಹಾಗಾಗಿ ನಾವು ಅವರನ್ನು ಮತ್ತು ಅವರ ಅಭಿವೃದ್ಧಿಯನ್ನು ಬೆಂಬಲಿಸುವುದಾಗಿ ಗ್ರಾಪಂ ಸದಸ್ಯ ಯೋಗೇಶ್ ತಿಳಿಸಿದರು.ಶಾಸಕರು ಕೆರಗೋಡು ಭಾಗದ ಅಭಿವೃದ್ಧಿಗೆ ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಭವಿಷ್ಯದ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ. ಅದೇ ರೀತಿ ಸಮಾಜದ ನೆಮ್ಮದಿ ಮತ್ತು ಸೌಹಾರ್ದ ಭಾವನೆಯೊಂದಿಗೆ ಶಾಸಕರು ಮಾಡುವ ಕೆಲಸಗಳಿಗೆ ಬೆಂಬಲವಾಗಿರುತ್ತೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸ್ತುತ ಕೆರಗೋಡು ಭಾಗದಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿರುವುದು ಆಘಾತಕಾರಿ ಸಂಗತಿ. ನಾವೆಲ್ಲಾ ಒಂದೇ ಸಮಾಜದಡಿ ಬಾಳ್ವೆ ನಡೆಸುತ್ತಿರುವಾಗ ಜಾತಿ ಮತ್ತು ಧರ್ಮಗಳ ವಿಚಾರದಲ್ಲಿ ಸೌಹಾರ್ದತೆಗೆ ಭಂಗ ತರುವುದು ಬೇಡ. ಅಭಿವೃದ್ಧಿಯನ್ನೇ ಮುಖ್ಯವಾಗಿಸಿಕೊಂಡು ಜನರು ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣ ಸೃಷ್ಟಿಸಿಕೊಡಬೇಕಿದೆ. ಆ ನಿಟ್ಟಿನಲ್ಲಿ ಶಾಸಕರ ಕಾರ್ಯವೈಖರಿ ನಮಗೆ ತೃಪ್ತಿ ನೀಡಿರುವುದಾಗಿ ತಿಳಿಸಿದರು.ಕೆರಗೋಡು ಪ್ರಕರಣವನ್ನು ವಜಾಗೊಳಿಸುವ ಕುರಿತು ಚರ್ಚೆಯಾಗಿದೆ. ೬೦ ಮಂದಿ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ಅವರೆಲ್ಲರನ್ನೂ ಬಿಡುಗಡೆಗೊಳಿಸುವ ಭರವಸೆಯೂ ದೊರಕಿದೆ. ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿದ್ದರೆ ವಿವಾದವೇ ಉದ್ಭವಿಸುತ್ತಿರಲಿಲ್ಲ. ಧ್ವಜಸ್ತಂಭವನ್ನು ರಾಜಕೀಯ ವೇದಿಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡದೆ ಸಮಾಜದ ಆಸ್ತಿಯಾಗಿ ಉಳಿಸುವಂತೆ ಕೋರಿದರು.
ಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ಎಂ.ರಾಜೇಶ್ ಇದ್ದರು