ಶಾಸಕರು ಜನಸಾಮಾನ್ಯರಿಗೆ ತೊಂದರೆ ಕೊಡಬಾರದು: ರವೀಂದ್ರ ಶ್ರೀಕಂಠಯ್ಯ

| Published : Apr 17 2024, 01:16 AM IST

ಶಾಸಕರು ಜನಸಾಮಾನ್ಯರಿಗೆ ತೊಂದರೆ ಕೊಡಬಾರದು: ರವೀಂದ್ರ ಶ್ರೀಕಂಠಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಚುನಾವಣೆ ಇಲ್ಲದೆ ನೇರವಾಗಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಅದರಲ್ಲಿ ಪ್ರಮುಖವಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಮೊದಲನೆಯದಾಗಿ ಕೇಳಿ ಬರಲಿದೆ. ಅಂತಹ ವ್ಯಕ್ತಿ ನಮ್ಮೇಲ್ಲರ ಒತ್ತಡದಿಂದ ಸ್ಪರ್ಧಿಸಿದ್ದಾರೆ. ರಾಜ್ಯಕ್ಕೆ, ಜಿಲ್ಲೆಗೆ ಕುಮಾರಸ್ವಾಮಿ ಅವಶ್ಯಕತೆ ಇದೆ. ಪ್ರತಿಯೊಬ್ಬರು ಅವರ ಗೆಲುವಿಗೆ ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶಾಸಕರಾದವರು ಜನಸೇವೆ ಮಾಡಬೇಕೆ ವಿನಃ ಜನ ಸಾಮಾನ್ಯರಿಗೆ ತೊಂದರೆ ಕೊಡಬಾರದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹರಿಹಾಯ್ದರು.

ವಿಧಾನಸಭಾ ಕ್ಷೇತ್ರದ ಬೆಳಗೊಳ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದರು.

ತಾಲೂಕಿನ ಕೆಆರ್‌ಎಸ್‌ನ ಬಡ ಜನರಿಗೆ ಶಾಶ್ವತ ನೆಲೆ ಸಿಗಲಿ ಎಂಬ ಉದ್ದೇಶದಿಂದ ಶಾಸಕನಾಗಿದ್ದ ವೇಳೆ ಕಾನೂನಿನ ಚೌಕಟ್ಟಿನಲ್ಲೇ ಸ್ಥಳೀಯ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದೇನೆ. ಆದರೆ, ಈಗಿನ ಶಾಸಕರು ಅದನ್ನು ತನಿಖೆ ಮಾಡಬೇಕು ಎಂದು ಅರ್ಜಿ ನೀಡಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಚುನಾವಣೆ ಇಲ್ಲದೆ ನೇರವಾಗಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಅದರಲ್ಲಿ ಪ್ರಮುಖವಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಮೊದಲನೆಯದಾಗಿ ಕೇಳಿ ಬರಲಿದೆ. ಅಂತಹ ವ್ಯಕ್ತಿ ನಮ್ಮೇಲ್ಲರ ಒತ್ತಡದಿಂದ ಸ್ಪರ್ಧಿಸಿದ್ದಾರೆ. ರಾಜ್ಯಕ್ಕೆ, ಜಿಲ್ಲೆಗೆ ಕುಮಾರಸ್ವಾಮಿ ಅವಶ್ಯಕತೆ ಇದೆ. ಪ್ರತಿಯೊಬ್ಬರು ಅವರ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಕೆಆರ್‌ಎಸ್ ಗ್ರಾಪಂ ಸದಸ್ಯೆ ಶಶಿಕಲಾ ಮಹಾದೇವು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ದಶರಥ, ಕೆಆರ್‌ಎಸ್ ಗ್ರಾಪಂ ಸದಸ್ಯರಾದ ಮಂಜು, ನಾಗೇಂದ್ರ, ದೀಪು, ಹುಲಿಕೆರೆ ಗ್ರಾಪಂ ಸದಸ್ಯ ಮಜ್ಜಿಗೆಪುರ ಮಂಜುನಾಥ್, ಮುಖಂಡರಾದ ಬಿ.ವಿ ಲೋಕೇಶ್, ಬಿಜೆಪಿ ಮುಖಂಡ ಸುನಿಲ್, ಬಲಮುರಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ್, ಗ್ರಾಪಂ ಮಾಜಿ ಸದಸ್ಯ ವಾಸು, ಪುಟ್ಟೇಗೌಡ, ಭರತ್, ನೆಲಮನೆ ಗುರುಪ್ರಸಾದ್, ಅನಿಲ್, ಕಿರಣ್, ಏಜಾಜ್‌ಪಾಷ ಸೇರಿದಂತೆ ಇತರರು ಇದ್ದರು.