ಕ್ಯಾನ್ಸರ್ ಪೀಡಿತ ನೌಕರನ ಚಿಕಿತ್ಸೆಗೆ ಎಂಎಲ್‌ಸಿ ಮಧು ನೆರವು

| Published : May 22 2025, 12:50 AM IST

ಕ್ಯಾನ್ಸರ್ ಪೀಡಿತ ನೌಕರನ ಚಿಕಿತ್ಸೆಗೆ ಎಂಎಲ್‌ಸಿ ಮಧು ನೆರವು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ತಿಂಗಳು ನೌಕರರ ಸಂಬಳದಿಂದ 45 ಸಾವಿರ ಮತ್ತು ಸಂಸ್ಥೆಯಿಂದ 25 ಸಾವಿರ ರುಗಳನ್ನು ನೌಕರರ ಕಲ್ಯಾಣ ನಿಧಿಗೆ ಮೀಸಲಿಡಲಾಗುತ್ತದೆ. ಕಳೆದ 6 ತಿಂಗಳ ಹಿಂದೆ ನೌಕರರ ನಿಧಿ ಸ್ಥಾಪಿಸಿದ್ದು ಮಾರಣಾಂತರ ಕಾಯಿಲೆಗೆ ತುತ್ತಾದವರಿಗೆ 5 ರಿಂದ 6 ಲಕ್ಷ ಚಿಕಿತ್ಸೆ ವೆಚ್ಚ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಾರತೀ ಶಿಕ್ಷಣ ಸಂಸ್ಥೆಗಳ ಯಾವುದೇ ನೌಕರರು ತೀವ್ರ ಅನಾರೋಗ್ಯಕ್ಕೆ ತುತ್ತಾದಲ್ಲಿ ಅವರ ಚಿಕಿತ್ಸೆಗೆ ನೆರವು ನೀಡಲು ಭಾರತೀ ಶಿಕ್ಷಣ ಸಂಸ್ಥೆ ನೌಕರರ ಕಲ್ಯಾಣ ನಿಧಿ ಸ್ಥಾಪನೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ, ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡ ಹೇಳಿದರು.

ಸಂಸ್ಥೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ನೌಕರ ಮಾಗಳ್ಳಿ ಅವರು ಕ್ಯಾನ್‌ರ್‌ನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆತನಿಗೆ ಶಸ್ತ್ರ ಚಿಕಿತ್ಸೆಗೆ ನೌಕರರ ಕಲ್ಯಾಣ ನಿಧಿಯಿಂದ 3 ಲಕ್ಷ ರು. ಆರ್ಥಿಕ ನೆರವು ನೀಡಿ ಮಾತನಾಡಿದರು.

ಪ್ರತಿ ತಿಂಗಳು ನೌಕರರ ಸಂಬಳದಿಂದ 45 ಸಾವಿರ ಮತ್ತು ಸಂಸ್ಥೆಯಿಂದ 25 ಸಾವಿರ ರುಗಳನ್ನು ನೌಕರರ ಕಲ್ಯಾಣ ನಿಧಿಗೆ ಮೀಸಲಿಡಲಾಗುತ್ತದೆ. ಕಳೆದ 6 ತಿಂಗಳ ಹಿಂದೆ ನೌಕರರ ನಿಧಿ ಸ್ಥಾಪಿಸಿದ್ದು ಮಾರಣಾಂತರ ಕಾಯಿಲೆಗೆ ತುತ್ತಾದವರಿಗೆ 5 ರಿಂದ 6 ಲಕ್ಷ ಚಿಕಿತ್ಸೆ ವೆಚ್ಚ ನೀಡಲಾಗುವುದು ಎಂದರು.

ಸಂಸ್ಥೆಯು ಸದ್ದಿಲ್ಲದೆ ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದೆ. ಸಂಸ್ಥಾಪಕ ಅಧ್ಯಕ್ಷರಾದ ಜಿ.ಮಾದೇಗೌಡರ ಆಶಯದಂತೆ ನೌಕಕರಿಗೆ ಸದಾ ನೆರವಾಗುತ್ತಿವೆ ಎಂದರು.

ಈ ವೇಳೆ ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಭಾರತೀ ಹೆಲ್ತ್‌ಸೈನ್ಸ್‌ಸ್ ನಿರ್ದೇಶಕ ಡಾ. ತಮೀಜ್‌ಮಣಿ, ಕಾಲೇಜಿನ ಪ್ರಾಂಶುಪಾಲೆ ಜಿ.ಬಿ.ಪಲ್ಲವಿ, ಆಡಳಿತಾಧಿಕಾರಿ ಪ್ರೊ.ಎಸ್. ಜವರೇಗೌಡ, ಭಾರತೀ ಪಾಲಿಟೇಕ್ನಿಕ್ ಪ್ರಾಂಶುಪಾಲ ಜಿ.ಕೃಷ್ಣ ಸೇರಿದಂತೆ ಮತ್ತಿತರಿದ್ದರು.

ಆರೋಗ್ಯ ಮೇಳದಲ್ಲಿ 3 ಸಾವಿರ ಜನರ ಆರೋಗ್ಯ ತಪಾಸಣೆಗೆ: ಗಂಜೀಗೆರೆ ಮಹೇಶ್

ಕೆ.ಆರ್.ಪೇಟೆ:

ಆರ್.ಟಿ.ಓ ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಜಯನಗರ ಬಡಾವಣೆ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ನಡೆದ ಬೃಹತ್ ಆರೋಗ್ಯ ಮೇಳದಲ್ಲಿ ಸುಮಾರು 3 ಸಾವಿರ ಜನ ಆರೋಗ್ಯ ತಪಾಸಣೆಗೆ ಒಳಗಾದರು ಎಂದು ಟ್ರಸ್ಟಿ ಗಂಜೀಗೆರೆ ಮಹೇಶ್ ತಿಳಿಸಿದರು.

ಪಟ್ಟಣದಲ್ಲಿ ಟ್ರಸ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಾ ಪುರಸ್ಕಾರ, ಬೃಹತ್ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದಿದ್ದು, ಶಿಬಿರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ 250 ಜನರನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದರು.

ಅಗತ್ಯವಿರುವವರಿಗೆ ಸ್ಥಳದಲ್ಲಿಯೇ ಔಷಧಿ, ಮಾತ್ರೆಗಳನ್ನು ವಿತರಿಸಲಾಯಿತು. ಇದೇ ವೇಳೆ ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. 415 ಮಂದಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಯಿಸಲಾಯಿತು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಶ್ರೀಗಳು, ರಾಜಕೀಯ ಗಣ್ಯರು, ನಿಗಮ ಮಂಡಳಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸೇರಿದಂತೆ ತಾಲೂಕಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಯುವ ಸಮುದಾಯ ಸೇರಿದಂತೆ ಸುಮಾರು 8 ಸಾವಿರಕ್ಕೂ ಹೆಚ್ಚಿನ ಮಂದಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು ಎಂದರು.

ಈ ವೇಳೆ ತಾಲೂಕು ಕಸಪಾ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಶಿಕ್ಷಕರಾದ ಸಣ್ಣೇಗೌಡ, ದೇವರಾಜು, ತಮ್ಮೆಗೌಡ ಇದ್ದರು.