ಸಾರಾಂಶ
ಮೊಬೈಲ್‌ನಿಂದ ಮಕ್ಕಳನ್ನು ದೂರವಿರಿಸಲು ಪೋಷಕರು ಮುಂದಾಗಬೇಕು. ಕೋವಿಡ್ ವೇಳೆ ಮಕ್ಕಳಿಗೆ ಓದಿಗಾಗಿ ಅನಿವಾರ್ಯ ಮೊಬೈಲ್ ಆಗಿತ್ತು. ಆದರೆ, ಇದು ದುಶ್ಟಟವಾಗಿ ಮಕ್ಕಳ ಭವಿಷ್ಯ, ಆರೋಗ್ಯ ಕಸಿದುಕೊಳ್ಳುತ್ತಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ದುಶ್ಚಟಕ್ಕಿಂತಲೂ ಮಕ್ಕಳ ಮೇಲೆ ಮೊಬೈಲ್ ಮಾರಕವಾಗಿ ಗಂಭೀರ ಪರಿಣಾಮ ಬೀರುತ್ತಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಎಸ್.ಕೆ.ದೇವರಾಜು ಹೇಳಿದರು.ಪಟ್ಟಣದ ಕೆಪಿಎಸ್ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮೊಬೈಲ್ ಬಿಡಿ, ಪತ್ರಿಕೆ, ಪುಸ್ತಕ ಓದಿ ಜ್ಞಾನ ವೃದ್ಧಿಸಿಕೊಳಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೊಬೈಲ್‌ನ ಬೇಡದ ಕೆಟ್ಟ ಸಂಗತಿಗಳಿಂದ ಯುವಕರು ತಪ್ಪು ದಾರಿಗೆ ತುಳಿದರೆ, ಮಕ್ಕಳಿಗೆ ದೃಷ್ಟಿ, ಆರೋಗ್ಯ ಸಮಸ್ಯೆ, ಚಡಪಡಿಸುವಿಕೆ, ಮರಗುಳಿತನದಂತಹ ಹತ್ತಾರು ಸಮಸ್ಯೆಗಳು ಕಾಡುತ್ತಿವೆ ಎಂದು ಎಚ್ಚರಿಸಿದರು.
ಮೊಬೈಲ್‌ನಿಂದ ಮಕ್ಕಳನ್ನು ದೂರವಿರಿಸಲು ಪೋಷಕರು ಮುಂದಾಗಬೇಕು. ಕೋವಿಡ್ ವೇಳೆ ಮಕ್ಕಳಿಗೆ ಓದಿಗಾಗಿ ಅನಿವಾರ್ಯ ಮೊಬೈಲ್ ಆಗಿತ್ತು. ಆದರೆ, ಇದು ದುಶ್ಟಟವಾಗಿ ಮಕ್ಕಳ ಭವಿಷ್ಯ, ಆರೋಗ್ಯ ಕಸಿದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಗುರಿ ಹಿಂದೆ ಗುರು ಬೇಕಿದೆ. ಆದರೆ, ಇಂದು ಮಕ್ಕಳಿಂದ ವೃದ್ಧರವರೆಗೆ ಎಲ್ಲವೂ ಮೊಬೈಲ್ ಗುರುವಾಗಿದೆ. ಪರಿಣಾಮ ಚಟುವಟಿಕೆ ಇಲ್ಲದ ಬದುಕಾಗಿ ಮೊಬೈಲ್ ಫೋಬಿಯಾ ಮಾರಕ ಕಾಯಿಲೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪುಸ್ತಕ, ಪತ್ರಿಕೆ ಸ್ಪಷ್ಟಓದು, ಬರಹ, ನೆನಪಿನ ಶಕ್ತಿ ವೃದ್ಧಿಸಲಿದೆ. ಮೊಬೈಲ್ ಗೀಳು ವ್ಯಸನಿಯಾಗಿ ಮಾಡುವ ಜೊತೆಗೆ ಖಿನ್ನತೆಗೆ ದೂಡಲಿದೆ ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದೆ. ತಲೆತಗ್ಗಿಸಿ ನೋಡುವ ಮೊಬೈಲ್ ಶಾಶ್ವತವಾಗಿ ತಲೆ ಎತ್ತದಂತೆ ಮಾಡಲಿದೆ ಎಂದು ಎಚ್ಚರಿಸಿದರು.ಉಪಪ್ರಾಂಶುಪಾಲ ಚಲುವನಾರಾಯಣ ಸ್ವಾಮಿ ಮಾತನಾಡಿ, ಮಕ್ಕಳು ಸಾತ್ವಿಕ ಆಹಾರ, ಉತ್ತಮ ದಿನಚರಿ, ಗುರು ಹಿರಿಯರಲ್ಲಿ ಭಕ್ತಿ ರೂಢಿಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯಗಳಿವೆ. ದಾನಿಗಳ ಸಹಕಾರ ಸಿಗಲಿದೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್‌ಸಿಸಿ ಘಟಕಾಧಿಕಾರಿ ಎಸ್.ಎಂ.ಬಸವರಾಜು, ಬಿ.ಎನ್.ಪರಶಿವಮೂರ್ತಿ, ಸುರೇಶ್, ದೀಪಕ್, ಪ್ರಸನ್ನ, ಶ್ರೀಕಾಂತ್ ಚಿಮ್ಮಲ್ ಇದ್ದರು.