ಸಾರಾಂಶ
ಕಿಕ್ಕೇರಿ:
ಪಟ್ಟಣದ ಕೆಪಿಎಸ್ ಶಾಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ನಡೆದ ಸಂಸತ್ ಅಣುಕು ಸಭೆಯಲ್ಲಿ ತಮ್ಮ ಮಾತಿನ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.ಸಭೆಯಲ್ಲಿ ವಿದ್ಯಾರ್ಥಿಗಳು ನಾಯಕತ್ವಗುಣ ಬೆಳೆಸಿಕೊಳ್ಳಲು ಸಹಕಾರಿಯಾಯಿತು. ಸದನದಲ್ಲಿ ಚರ್ಚೆಗಳು, ನಡಾವಳಿ, ಕಾನೂನು ರಚನೆ ವಿಧಾನ, ಅಲ್ಲಿನ ಪ್ರಶ್ನಾವಳಿ, ನಿಲುವಳಿ ಸೂಚನೆ ಎಲ್ಲವನ್ನು ಸವಿಸ್ತಾರವಾಗಿ ಅಭಿನಯದ ಮೂಲಕ ಚರ್ಚೆ, ವಿಷಯ ಮಂಥನ ಮಾಡಿದರು.
ಸಭಾಧ್ಯಕ್ಷರು, ಪ್ರಧಾನಮಂತ್ರಿ ವಿರೋಧ ಪಕ್ಷ ನಾಯಕರು, ಮಂತ್ರಿಗಳ ಆಸನ ವ್ಯವಸ್ಥೆ, ಅಧಿಕಾರಿಗಳ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಸದನದಲ್ಲಿ ಸಭಾಧ್ಯಕ್ಷರು ಬಲು ತಾಳ್ಮೆಯಿಂದ ಆಡಳಿತ, ವಿಪಕ್ಷ ನಾಯಕರ ಮಂಡಿಸಿದ ವಿಷಯ, ಚರ್ಚೆ, ವಾಕ್ಸಮರ, ಹಕ್ಕು ಒತ್ತಾಯಗಳನ್ನು ತಾಳ್ಮೆಯಿಂದ ಆಲಿಸಿದರು. ನಂತರ ಅಗತ್ಯ ಉತ್ತರ ನೀಡಿದರು.ರಾಜ್ಯಶಾಸ್ತ್ರ ಉಪನ್ಯಾಸಕ ಜಿ.ಎಸ್. ಕುಮಾರಸ್ವಾಮಿ ಮಕ್ಕಳಿಗೆ ಪರಿಚಯ ಮಾಡಿಕೊಟ್ಟರು. ಪ್ರಾಂಶುಪಾಲ ಎಂ.ಆರ್.ಸಹದೇವ, ಉಪನ್ಯಾಸಕರಾದ ಎ.ಎಂ.ಮಂಜುನಾಥ್, ಎಸ್.ಡಿ.ಹರೀಶ್, ಅರ್ಪಿತಾ, ಚಂದ್ರಿಕಾ, ಲಾವಣ್ಯ ಇದ್ದರು.ಮದ್ದೂರು ತಾಲೂಕಿನ ಮೂರು ಶಾಲೆಗಳು ಉನ್ನತೀಕರಣ: ಶಾಸಕರಿಂದ ಅಭಿನಂದನೆ
ಮದ್ದೂರು:ಒಂದೇ ಸೂರಿನಡಿ ಎಲ್ ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನ ಮೂರು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಿಸಲು ಸರ್ಕಾರ ಅನುಮತಿ ನೀಡಿ ಅಧಿಕೃತ ಆದೇಶ ಮಾಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಶಾಸಕ ಕೆ.ಎಂ.ಉದಯ್, ಕ್ಷೇತ್ರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಕೆಪಿಎಸ್ ಶಾಲೆಗಳನ್ನಾಗಿ ಉನ್ನತಿಕರಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಪ್ರತಿ ಸ್ಪಂದಿಸಿ ತಾಲೂಕಿನ ಅಣ್ಣೂರು ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢ ಶಾಲೆ, ಮಲ್ಲನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ಹಾಗೂ ಕೆ.ಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಉನ್ನತೀಕರಿಸಿ ಅಧಿಕೃತ ಆದೇಶ ಮಾಡಿದ್ದಾರೆ ಎಂದು ಹೇಳಿದ್ದಾರೆ.ಇದರಿಂದ ಈ ಶಾಲೆಗಳಲ್ಲಿ ಇನ್ಮುಂದೆ ಎಲ್ ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೆಡೆ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುವಂತೆ ಆಗಲಿದೆ. ಮೂರು ಕೆಪಿಎಸ್ ಶಾಲೆ ಮಂಜೂರು ಮಾಡಿರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಶಾಸಕರು ಧನ್ಯವಾದ ತಿಳಿಸಿದ್ದಾರೆ.ಮಂಡ್ಯ ನಗರದ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ
ಮಂಡ್ಯ: 66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಗಾಂಧಿನಗರ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.17ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಗಾಂಧಿನಗರ, ಬಿ.ವಿ.ಕೆ ಲೇಔಟ್, ಚಂದಗಾಲು ಲೇಔಟ್, ಶಂಕರನಗರ, ಹೌಸಿಂಗ್ ಬೋರ್ಡ್ 1 ನೆ ಹಂತ, ಅಂಬುಜಮ್ಮ ಪಾರ್ಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯಮಂಡ್ಯ: ತಾಲೂಕಿನ ಚಿಕ್ಕ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಅ.18 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಚಿಕ್ಕಮಂಡ್ಯ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಾದ ಶಂಕರಪುರ, ಜೈನ ಸ್ಟ್ರೀಟ್, ಬೀಡಿ ಕಾಲೋನಿ, ಜಬರ್ ಸರ್ಕಲ್, ಹೊಳಲು ವೃತ್ತ, ವಿನಾಯಕನಂದ ಬಡಾವಣೆ, ಗ್ರಾಮಾಂತರ ಪ್ರದೇಶಗಳಾದ ಗೋಪಾಲಪುರ, ಚಿಕ್ಕಮಂಡ್ಯ. ಸಾತನೂರು, ಕೊಮ್ಮೇರಹಳ್ಳಿ, ಹುಲಿವಾನ, ಕೆ.ಗೌಡಗೆರೆ. ಎಚ್. ಮಲ್ಲಿಗೆರೆ, ಎಸ್.ಐ.ಕೋಡಿಹಳ್ಳಿ, ಎಚ್. ಕೋಡಿಹಳ್ಳಿ, ಸಂಪಹಳ್ಳಿ, ಗೊರವಾಲೆ, ಬಿ. ಹೊಸಹಳ್ಳಿ, ಬೀರಗೌಡನಹಳ್ಳಿ ಹಾಗೂ ಈ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.