ವಿಶ್ವದಲ್ಲೇ ಭಾರತೀಯ ಶಿಲ್ಪಕಲೆ ಮಾದರಿ: ಎಸ್.ವಿ. ಗೋಠೆಕರ

| Published : Jan 02 2024, 02:15 AM IST

ಸಾರಾಂಶ

ತೇರದಾಳ: ಪಟ್ಟಣದ ವೇದಮಾತೆ ಗಾಯತ್ರಿದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನೋತ್ಸವ ಆಚರಿಸಿದರು. ಸದಾಶಿವಾಚಾರ್ಯ ಸುತಾರ ಗಾಯತ್ರಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಮರಶಿಲ್ಪಿ ಜಕಣಾಚಾರಿಗಳ ಭಾವಚಿತ್ರ ಪ್ರತಿಷ್ಠಾಪಿಸಿ ಪೂಜೆ ನೈವೇದ್ಯ ಅರ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ,ತೇರದಾಳ(ರ-ಬ)

ಪಟ್ಟಣದ ವೇದಮಾತೆ ಗಾಯತ್ರಿದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನೋತ್ಸವ ಆಚರಿಸಿದರು.

ಸದಾಶಿವಾಚಾರ್ಯ ಸುತಾರ ಗಾಯತ್ರಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಮರಶಿಲ್ಪಿ ಜಕಣಾಚಾರಿಗಳ ಭಾವಚಿತ್ರ ಪ್ರತಿಷ್ಠಾಪಿಸಿ ಪೂಜೆ ನೈವೇದ್ಯ ಅರ್ಪಿಸಲಾಯಿತು.

ಸಮಾಜದ ಅಧ್ಯಕ್ಷ ಎಸ್.ವಿ. ಗೋಠೆಕರ, ನಾರಾಯಣ ಪತ್ತಾರ ಮಾತನಾಡಿ, ಜಗತ್ತಿನಲ್ಲೇ ಭಾರತೀಯ ಶಿಲ್ಪಕಲೆ ಮಾದರಿಯಾಗಿದ್ದು, ಅದಕ್ಕೆಲ್ಲ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಜಕಣಾಚಾರಿ ಬರೀ ಶಿಲ್ಪಿ ಮಾತ್ರವಲ್ಲ ಕಲೆಯ ಆಗರವಾಗಿದ್ದರು. ಕಲಾರಾಧನೆಯಿಂದ ಜೀವನದಲ್ಲಿ ನೆಮ್ಮದಿಯಿದೆ. ನಾಡನ್ನು ಶಿಲ್ಪಕಲೆಯಿಂದ ಶ್ರೀಮಂತಗೊಳಿಸಿರುವ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರಿಗೆ ನಾಡು ಸದಾ ಋಣಿಯಾಗಿರುತ್ತದೆ ಎಂದರು.

ಸಮಾಜದ ಬಂಧುಗಳು ಕಲೆಗೆ ಹಾಗೂ ಶಿಕ್ಷಣ-ಸಂಸ್ಕಾರಕ್ಕೆ ಹೆಚ್ಚಿನ ಆಧ್ಯತೆ ಕೊಡುವ ಮೂಲಕ ಉತ್ತಮ ಜೀವನ ನಡೆಸಬೇಕು. ಉಳಿದ ಸಮುದಾಯದವರೊಂದಿಗೆ ಸ್ನೇಹ-ಬಾಂಧವ್ಯದಿಂದ ವ್ಯವಹರಿಸಿ ಆದರ್ಶ ವ್ಯಕ್ತಿಗಳಾಗಬೇಕು ಎಂದರು. ಕಲ್ಲಪ್ಪ ಬಡಿಗೇರ ಅಕ್ಷತಾರತಿ ಮಾಡಿದರು. ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.