ಮಾದರಿ ಮತದಾನ ಜಾಗೃತಿ ಅಭಿಯಾನ

| Published : Feb 07 2024, 01:52 AM IST / Updated: Feb 07 2024, 04:09 PM IST

ಸಾರಾಂಶ

ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಮತದಾರರಿಗೆ ಮತ ಚಲಾಯಿಸುವುದರ ಬಗ್ಗೆ ಇವಿಎಂ, ವಿವಿಪ್ಯಾಟ್‌, ಬ್ಯಾಲೇಟ್ ಮಷೀನ್‌ಗಳ ಮಾಹಿತಿ ಅಭಿಯಾನ ಹಮ್ಮಿಕೊಳ್ಳಲಾಗಿದೆಯೆಂದು ಚುನಾವಣಾ ಸೆಕ್ಟರ್ ಅಧಿಕಾರಿ ಎಸ್.ಎಂ. ಕಲಬುರ್ಗಿವರು ಹೇಳಿದರು.

ಕನ್ನಡಪ್ರಭ ವಾರ್ತೆ, ರಬಕವಿ - ಬನಹಟ್ಟಿ

ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಮತದಾರರಿಗೆ ಮತ ಚಲಾಯಿಸುವುದರ ಬಗ್ಗೆ ಇವಿಎಂ, ವಿವಿಪ್ಯಾಟ್‌, ಬ್ಯಾಲೇಟ್ ಮಷೀನ್‌ಗಳ ಮಾಹಿತಿ ಅಭಿಯಾನ ಹಮ್ಮಿಕೊಳ್ಳಲಾಗಿದೆಯೆಂದು ಚುನಾವಣಾ ಸೆಕ್ಟರ್ ಅಧಿಕಾರಿ ಎಸ್.ಎಂ. ಕಲಬುರ್ಗಿವರು ಹೇಳಿದರು.

ಇಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದಲ್ಲಿ ನೂತನ ಮತದಾರರಿಗೆ ದಿನಂಪ್ರತಿ ಒಂದೊಂದು ಮತಗಟ್ಟೆಯಂತೆ ಜಾಗೃತಿ ಅಭಿಯಾನದಲ್ಲಿ ಬೂತ್‌ ನಂ-೯೮ನೆಯ ಪಾರ್ಟ ನಂ-೧೦೧ ರಲ್ಲಿ ಮತದಾರರಿಗೆ ತಿಳಿಸಿದರು. ಸಾರ್ವಜನಿಕರು ಇದರ ಉಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದು ಹೇಳಿದರು.

ದೇಣಿಗೆ: ಮುಂಬೈನ ಸೇಠ್‌ ತಪಿದಾಸ ಮತ್ತು ತುಳಸಿದಾಸ ವರ್ಜದಾಸ ಚಾರಿಟಬಲ್ ಟ್ರಸ್ಟ್ ಅವರಿಂದ ಎಪ್ಸಾನ್ ಕಂಪನಿಯ ಅತ್ಯುತ್ತಮ ಮುದ್ರಣ ಯಂತ್ರವನ್ನು ಸ್ಥಳೀಯ ಅನುದಾನಿತ ಬಾಲಿಕೆಯರ ಪ್ರೌಢಶಾಲೆಗೆ ದೇಣಿಗೆಯಾಗಿ ನೀಡಿದರು.

ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಗಳ ಸಬಲೀಕರಣಕ್ಕಾಗಿ ಇಂತಹ ಚಾರಿಟಬಲ್ ಟ್ರಸ್ಟ್‌ ನವರು ಬಡ ಮಕ್ಕಳ ಕಲಿಕೆಗೆ ಪ್ರೋತ್ಸಾಹದಾಯಿಕವಾಗಿ ನೀಡುವ ಸಾಮಗ್ರಿಗಳು ಮಕ್ಕಳ ಕಲಿಕಾ ಪ್ರಗತಿಗೆ ಪೂರಕವಾಗುತ್ತದೆ. ಅವುಗಳ ಸದ್ಬಳಕೆ ಶಾಲೆಯಲ್ಲಿ ಆಗಬೇಕು ಎಂದು ಮುಖ್ಯ ಶಿಕ್ಷಕ ಪಿ.ಎಚ್. ಪ್ರತಾಪ ಹೇಳಿದರು.

ವಿಜಯಪುರದ ಎಲ್ಲ ಶಾಲೆಗಳನ್ನು ದತ್ತು ಪಡೆದು ಹಂತ ಹಂತವಾಗಿ ಭೌತಿಕ ಸಾಮಗ್ರಿ ನೀಡುವ ಮೂಲಕ ಶಾಲೆಗಳ ಸಬಲೀಕರಣಕ್ಕೆ ಮುಂದಾಗಿದೆ ಎಂದು ವೃತ್ತಿ ಶಿಕ್ಷಕ ಶಿವಶರಣಪ್ಪ ಹೇಳಿದರು.

ಚಾರಿಟಬಲ್ ಟ್ರಸ್ಟ್‌ ನ ಪ್ರತಿನಿಧಿಗಳಾದ ಶ್ರೀ ವಿಶ್ವನಾಥ ಸಿಂದಗಿ, ಹಿಂದುಳಿದ ಪ್ರದೇಶಗಳಲ್ಲಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮತ್ತು ಶಿಕ್ಷಕರು ಇದರ ಸಂಪೂರ್ಣ ಬಳಕೆ ಮಾಡಿದಾಗ ದೇಣಿಗೆ ನೀಡಿದ ದಾನಿಗಳಿಗೆ ತೃಪ್ತಿಯಾಗುತ್ತದೆಂದರು.

ವಿಶ್ವನಾಥ ದಂಪತಿಯನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಆರ್.ಬಿ. ಜೋಗಳೆ, ವ್ಹಿ.ಪಿ. ಮಾಳಿ, ವೈ ಬಿ. ವಾಘಮೋರೆ, ಆರ್.ಕೆ. ಜಮಖಂಡಿ, ಎಸ್.ಜಿ. ಸರಿಕರ ಹಾಗೂ ಎಸ್.ಎಸ್. ಬೆಳಗಲಿ ಉಪಸ್ಥಿತರಿದ್ದರು. ವಿ.ಪಿ. ಮಾಳಿ ಸ್ವಾಗತಿಸಿದರು, ಕೊಣ್ಣೂರ ವಂದಿಸಿದರು.