ಸಾರಾಂಶ
ಮಹಾಲಿಂಗಪುರ: ಆಧುನಿಕ ಯುಗದಲ್ಲಿ ಮಾನವ ವೇಗವಾಗಿ ಸಾಗುತ್ತಿದ್ದು. ಇದರಿಂದ ಮಾನಸಿಕತೆ ಮೇಲೆ ಗಾಢ ಪರಿಣಾಮ ಬೀರಿ ದೈಹಿಕ ಕ್ಷಮತೆ ಕಡಿಮೆಯಾಗಿದೆ ಎಂದು ಹುಬ್ಬಳ್ಳಿ ಡಾ. ಗೋಕಾವಿ ಆಸ್ಪತ್ರೆಯ ಸಂತಾನೋತ್ಪತ್ತಿ ತಜ್ಞ ವೈದ್ಯ ಡಾ.ಶೈಲೇಶ ಗೋಕಾವಿ ಹೇಳಿದರು. ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ನಡೆದ ಒಂದು ದಿನದ ಬಂಜೆತನ ನಿವಾರಣೆ ಉಚಿತ ಚಿಕಿತ್ಸೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಆಧುನಿಕ ಯುಗದಲ್ಲಿ ಮಾನವ ವೇಗವಾಗಿ ಸಾಗುತ್ತಿದ್ದು. ಆದರೆ ಅತಿಯಾದ ವೇಗ ಅಪಾಯಕ್ಕೆ ಕಾರಣ ಎಂಬಂತೆ ಮನುಷ್ಯ ಇಂದು ಏನೇ ಮಾಡಿದರೂ ತೀವ್ರಗತಿಯಲ್ಲಿ ಮಾಡುತ್ತಿದ್ದು, ಈ ವೇಗ ಅವನ್ನು ದೈಹಿಕವಾಗಿ ಹಿಂಸಿಸುತ್ತಿದೆ. ಇದರಿಂದ ಮಾನಸಿಕತೆ ಮೇಲೆ ಗಾಢ ಪರಿಣಾಮ ಬೀರಿ ದೈಹಿಕ ಕ್ಷಮತೆ ಕಡಿಮೆಯಾಗಿದೆ ಎಂದು ಹುಬ್ಬಳ್ಳಿ ಡಾ. ಗೋಕಾವಿ ಆಸ್ಪತ್ರೆಯ ಸಂತಾನೋತ್ಪತ್ತಿ ತಜ್ಞ ವೈದ್ಯ ಡಾ.ಶೈಲೇಶ ಗೋಕಾವಿ ಹೇಳಿದರು.ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ನಡೆದ ಒಂದು ದಿನದ ಬಂಜೆತನ ನಿವಾರಣೆ ಉಚಿತ ಚಿಕಿತ್ಸೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇತೀಚಿನ ದಿನಗಳಲ್ಲಿ ಬಂಜೆತನ ಎಂಬ ಪಿಡುಗು ವ್ಯಾಪಾಕವಾಗಿ ಹಬ್ಬುತ್ತಿದ್ದು, ಮನುಷ್ಯರನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. ಸಂತಾನ ಪಡೆಯಲು ಜನ ಪಡಬಾರದ ಕಷ್ಟ ಪಡುತ್ತಿದ್ದಾರೆ. ಅದಕ್ಕೆ ಹಲವು ಕಾರಣಗಳಿರಬಹುದು, ಔಷಧಿ ಪದ್ಧತಿಯಿಂದ ಹಲವು ತರಹದ ಬಂಜೆತನ ನಿವಾರಿಸಬಹುದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್, ಈ ತೊಂದರೆ ಇರುವ ಎಲ್ಲ ಮಹಿಳೆಯರು ಕೆಲವರು ಕಷ್ಟಪಡುವುದಿಲ್ಲ. ಇನ್ನು ಕೆಲವರು ಕಷ್ಟ ಪಡುತ್ತಾರೆ. ಇದನ್ನು ಆಧುನಿಕ ತಂತ್ರಜ್ಞಾನದಲ್ಲಿ ಅನೇಕ ವಿಧಾನಗಳಿಂದ ಗುಣಪಡಿಸಬಹುದಾಗಿದೆ. ಸಂತಾನಕ್ಕೆ ಪೌಷ್ಟಿಕ ಆಹಾರ ಸೇವನೆ, ಮಾನಸಿಕ ಅರೋಗ್ಯ ಬಹಳ ಮುಖ್ಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಡಾ. ಮಂಜುನಾಥ ಚನ್ನಾಳ, ಡಾ.ವಿಶ್ವನಾಥ ಗುಂಡಾ,ಡಾ. ಉಷಾ ಗುಂಡಾ, ಡಾ.ಅಶೋಕ ದಿನ್ನಿಮನಿ, ಡಾ.ವಿದ್ಯಾ ದಿನ್ನಿಮನಿ, ಡಾ.ಜ್ಯೋತಿ ಚಿತ್ತರಗಿ, ಡಾ.ಎಂ.ಎಸ್. ಚನ್ನಾಳ, ಡಾ.ರಾಜೇಂದ್ರ ಪಾಟೀಲ, ಡಾ.ಸಂಜಯ ಮುರಗೋಡ, ಡಾ.ಶಿವಾನಂದ ನುಚ್ಚಿ, ಡಾ.ಪತ್ತಾರ, ಡಾ.ನದಾಫ್ ಸೇರಿ ಹಲವರು ಇದ್ದರು.