ಶೃಂಗೇರಿ ತನ್ನ ತಾಯಿಯಾಗಿ ಸ್ಕೂಟರ್ ನಲ್ಲೇ ತೀರ್ಥಕ್ಷೇತ್ರಗಳ ಯಾತ್ರೆಯನ್ನು 2018 ರಿಂದ 2026ರವರೆಗೆ ಮೂರು ಭಾರಿ ಕೈಗೊಂಡಿರುವ ಮೈಸೂರಿನ ಆಧುನಿಕ ಶ್ರವಣಕುಮಾರ ಕೃಷ್ಣಕುಮಾರ್ ಅವರು ಮೂರನೇ ಹಂತದ ಮಾತೃಸೇವಾ ಸಂಕಲ್ಪ ಯಾತ್ರೆಯಲ್ಲಿ ಸುಮಾರು ಒಂದು ಲಕ್ಷದ ಏಳು ಸಾವಿರ ಕಿಲೋ ಮೀಟರ್ ಪ್ರಯಾಣದ ಸಂದರ್ಭದಲ್ಲಿ ಶೃಂಗೇರಿವರೆಗೆ ಭೇಟಿ ನೀಡಿದ್ದರು.
- ..ಶೃಂಗೇರಿಗೂ 3 ಬಾರಿ ಭೇಟಿ । ಸ್ಕೂಟರ್ ನಲ್ಲೇ ಮಾತೃಭಕ್ತಿಗಾಗಿ ಒಂದುಲಕ್ಷ ಏಳು ಸಾವಿರ ಕಿಮಿ ದೇಶ,ವಿದೇಶ
ನೆಮ್ಮಾರ್ ಅಬೂಬಕರ್ಕನ್ನಡಪ್ರಭ ವಾರ್ತೆ, ಶೃಂಗೇರಿ
ತನ್ನ ತಾಯಿಯಾಗಿ ಸ್ಕೂಟರ್ ನಲ್ಲೇ ತೀರ್ಥಕ್ಷೇತ್ರಗಳ ಯಾತ್ರೆಯನ್ನು 2018 ರಿಂದ 2026ರವರೆಗೆ ಮೂರು ಭಾರಿ ಕೈಗೊಂಡಿರುವ ಮೈಸೂರಿನ ಆಧುನಿಕ ಶ್ರವಣಕುಮಾರ ಕೃಷ್ಣಕುಮಾರ್ ಅವರು ಮೂರನೇ ಹಂತದ ಮಾತೃಸೇವಾ ಸಂಕಲ್ಪ ಯಾತ್ರೆಯಲ್ಲಿ ಸುಮಾರು ಒಂದು ಲಕ್ಷದ ಏಳು ಸಾವಿರ ಕಿಲೋ ಮೀಟರ್ ಪ್ರಯಾಣದ ಸಂದರ್ಭದಲ್ಲಿ ಶೃಂಗೇರಿವರೆಗೆ ಭೇಟಿ ನೀಡಿದ್ದರು.ಇವರ ಇವರ ಮಾತೃಭಕ್ತಿ ಸಂಕಲ್ಪ ಯಾತ್ರೆಯನ್ನು ಮೆಚ್ಚಿದ ಬಜಾಜ್ ಕಂಪೆನಿ ಬಜಾಜ್ ಬ್ಯಾಟರಿ ಚಾಲಿತ ಸ್ಕೂಟರ್ ನೀಡಿದ್ದು ಇದರಲ್ಲಿಯೇ 2026 ರ ಫೆ. 1 ರಿಂದ ಕೆರಳ , ಕಾಸರಗೋಡು ಪ್ರಯಾಣ ಬೆಳೆಸಿರುವ ಅವರು ಶೃಂಗೇರಿಗೆ ಮತ್ತೆ ಮೂರನೇ ಬಾರಿ ತಲುಪಿದ ಸಂದರ್ಭದಲ್ಲಿ ಕೃಷ್ಣಕುಮಾರ್ ಮತ್ತು ಅವರ ತಾಯಿ ಚೂಡಾರತ್ನ ಕ್ಷೇತ್ರದ ಅಧಿದೇವತೆ ಶಾರದಾಂಬೆ ದರ್ಶನ ಪಡೆದು, ಜಗದ್ಗುರುಗಳ ಆಶೀರ್ವಾದ ಪಡೆದರು.
ಬೇಲೂರು ಹಳೇ ಬೀಡು ನೋಡಲು ಬಯಸಿದ್ದ ತನ್ನ ತಾಯಿ ಚೂಡರತ್ನ (76) ಅವರನ್ನು ಜನವರಿ 16, 2018ರಂದು ತನ್ನ ಹಳೇ ಬಜಾಜ್ ಚೇತಕ್ ಸ್ಕೂಟರ್ ನಲ್ಲಿ ತೀರ್ಥಯಾತ್ರೆ ಆರಂಭಿಸಿದ ಮಗ ಕೃಷ್ಣಕುಮಾರ್ ಬೇಲೂರು ಹಳೇ ಬೀಡು ಶ್ರವಣಬೆಳಗೊಳ, ಕೇರಳ, ಪಾಂಡೀಚೇರಿ ಸೇರಿದಂತೆ ದಕ್ಷಿಣದ ಬಹುತೇಕ ರಾಜ್ಯಗಳನ್ನು ಸಂದರ್ಶಿಸಿ ನೆರೆಯ ದೇಶ ಭೂತಾನ್ ತಲುಪಿದ್ದರು. ಅಲ್ಲಿ 2019 ರಲ್ಲಿ ಕೊವಿಡ್ ಲಾಕ್ ಡೌನ್ ಪರಿಣಾಮ ಗಡಿಭಾಗದಲ್ಲಿ ಸಿಲುಕಿ ಹರಸಾಹಸ ಪಟ್ಟು ಭಾರತ ಸೇರಿದ್ದರು. ನಂತರ ಯಾತ್ರೆ ಮುಂದುವರಿಸಿ ಸುಮಾರು 70 ಸಾವಿರ ಕಿ.ಮಿ ಹಳೇ ಸ್ಕೂಟರ್ ನಲ್ಲಿಯೇ ಪ್ರಯಾಣಿಸಿ 2019 ರಲ್ಲಿ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ದರ್ಶನ , ಜಗದ್ಗುರುಗಳ ಆಶೀರ್ವಾದ ಪಡೆದು ಮರಳಿದ್ದರು.ನಂತರದಲ್ಲಿ ಉತ್ತರ ಭಾರತದತ್ತ ಸಾಗಿ ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ಜಮ್ಮು ಕಾಶ್ಮೀರ, ಅಸ್ಸಾಂ, ಮೇಘಾಲಯ, ಮಣಿಪುರ,ಜಾರ್ಖಂಡ್ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳನ್ನು ಸಂದರ್ಶಿಸಿದರು. ಸುಮಾರು 2018 ರಿಂದ 2026 ರವರೆಗಿನ ಇವರ ಸ್ಕೂಟರ್ ತೀರ್ಥಕ್ಷೇತ್ರ ಪ್ರಯಾಣದಲ್ಲಿ ಕಾಶ್ಮೀರ ದಿಂದ ಕನ್ಯಾಕುಮಾರಿ ಸೇರಿದಂತೆ ಈಶಾನ್ಯ, ದಕ್ಷಿಣ ರಾಜ್ಯಗಳು ಸೇರಿದಂತೆ ಸಮಗ್ರ ಭಾರತವಲ್ಲದೇ ನೆರೆಯ ನೇಪಾಳ, ಭೂತಾನ್, ಮ್ಯಾನ್ಮಾರ್ ದೇಶಗಳಿಗೂ ಇದೇ ಸ್ಕೂಟರ್ ನಲ್ಲಿ ಪ್ರಯಾಣಿಸಿ ಬಂದಿದ್ದಾರೆ. ಇವರ ಈ ಸೇವೆಗೆ ಮಾತೃ ಸೇವಾ ಆದರ್ಶ ರತ್ನ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಪ್ರಭ ದೊಂದಿಗೆ ಮಾತನಾಡಿದ ನನ್ನ ತಾಯಿ ಚೂಡಾರತ್ನ ಬೇಲೂರು ಹಳೆ ಬೀಡು ನೋಡಲು ಆಸೆಪಟ್ಟರು. ಖಾಸಗಿ ಬ್ಯಾಂಕ್ ನಲ್ಲಿ ಉದ್ದೋಗಿಯಾಗಿದ್ದ ನಾನು ವೃತ್ತಿ ತ್ಯಜಿಸಿ, ನನ್ನ ತಂದೆ 2001 ರಲ್ಲಿ ಕೊಡಿಸಿದ್ದ ಬಜಾಜ್ ಸ್ಕೂಟರ್ ನಲ್ಲಿ 2018 ರಿಂದ ಬೇಲೂರು ಹಳೆ ಬೀಡು ತೀರ್ಥಕ್ಷೇತ್ರ ಯಾತ್ರೆ ಮೂಲಕ ಸಂಕಲ್ಪ ಯಾತ್ರೆ ಆರಂಬಿಸಿದೆ. ದೇಶದ ವಿವಿಧೆಡೆ ಪ್ರಯಾಣಿಸಿದಾದ ಭಾರತ ವಿವಿಧ ಧರ್ಮ, ಸಂಸ್ಕೃತಿ, ಜನಾಂಗಗಳ ನೆಲೆವೀಡು ಎಂಬುದನ್ನು ಪ್ರತ್ಯಕ್ಷವಾಗಿ ಕಾಣುವ ಅವಕಾಶ ಸಿಕ್ಕಿತು.ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಜನಾಂಗಗಳ ಜನರ ದರ್ಶನ, ಹಿಂದೂ, ಭೌದ್ದ, ಜೈನ ,ಸಿಖ್, ಕ್ರೈಸ್ತ, ಇಸ್ಲಾಂ ಧರ್ಮಗಳ ಪವಿತ್ರ ಕ್ಷೇತ್ರ, ಧರ್ಮ, ಸಂಸ್ಕೃತಿಗಳ ದರ್ಶನ, ವಿವಿಧತೆಯಲ್ಲಿ ಏಕತೆ ಕಾಣುವ ಅದೃಷ್ಟ ನನ್ನ ತಾಯಿ ಆಸೆಯ ತೀರ್ಥಕ್ಷೇತ್ರ ಯಾತ್ರೆಯ ಮೂಲಕ ನನಗೂ ಸಿಕ್ಕಿತು.
ಪ್ರಯಾಣದ ವೇಳೆಯಲ್ಲಿ ವಿಭಿನ್ನ ವಾತಾವರಣ ಬಿಸಿಲು, ಮಳೆ, ಚಳಿ, ಗಾಳಿ ಯಾವುದೂ ಲೆಕ್ಕಿಸಲಿಲ್ಲ. ತಲುಪುವ ಗುರಿಯೊಂದೇ ಮುಂದಿತ್ತು. ದೇವರ ಕೃಪೆ, ಜನರ ಆಶೀರ್ವಾದ ಜೊತೆಗಿತ್ತು. ಮಾನವ ತತ್ವಕ್ಕಿಂತ ದೊಡ್ಡದು ಇನ್ನೊಂದು ಧರ್ಮವಿಲ್ಲ ಎಂದರು. ಚೂಡಾರತ್ಮಮ್ಮ ಮಾತನಾಡಿ ಇಂತಹ ಮಗನನ್ನು ಪಡೆದಿದ್ದು ನನ್ನ ಅದೃಷ್ಣ, ನನ್ನ ಪುಣ್ಯ, ಇದಕ್ಕಿಂತ ಸಂತೋಷ ಮತ್ತೇನು ಬೇಕಿಲ್ಲ ಎಂದರು.2 ಶ್ರೀ ಚಿತ್ರ 1-
ಶೃಂಗೇರಿಗೂ ಸ್ಕೂಟರ್ ನಲ್ಲಿ ಸುಮಾರು ಒಂದು ಲಕ್ಷ ಏಳು ಸಾವಿರ ಕಿ.ಮಿ ಮಾತೃಸಂಕಲ್ಪ ಯಾತ್ರೆ ಮುಂದುವರೆಸಿ ಭೇಟಿ ನೀಡಿದ ಆದುನಿಕ ಶ್ರವಣ ಕುಮಾರ ಕೃಷ್ಣಕುಮಾರ್,ತಾಯಿ ಚೂಡರತ್ನ