ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕ ಆಯೋಜಿಸಿದ್ದ ‘ಆರೋಗ್ಯಕರ ಭವಿಷ್ಯಕ್ಕಾಗಿ- ಸಾವ ಯವ ಕೃಷಿ’ ಕುರಿತು ಸಂವಾದ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೇಶಿಯ ಬೆಳೆಗಳಲ್ಲಿ ಮಿಶ್ರತಳಿ ಬೀಜಗಳ ಹಾವಳಿಯಿಂದ ಮಣ್ಣಿನ ಫಲವತ್ತತೆ ಹಾಗೂ ಮನುಷ್ಯನ ಆರೋಗ್ಯ ಎರಡೂ ವಿಷವಾಗುತ್ತಿದೆ ಎಂದು ಕೃಷಿ ಪಂಡಿತ ಚಂದ್ರಶೇಖರ್ ನಾರಾಣಾಪುರ ಆತಂಕ ವ್ಯಕ್ತಪಡಿಸಿದರು.

ಮೂಗ್ತಿಹಳ್ಳಿಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕ ಆಯೋಜಿಸಿದ್ದ ‘ಆರೋಗ್ಯಕರ ಭವಿಷ್ಯಕ್ಕಾಗಿ- ಸಾವ ಯವ ಕೃಷಿ’ ಕುರಿತು ಸಂವಾದದಲ್ಲಿ ಮಾತನಾಡಿ ಮಿಶ್ರತಳಿ ಬೀಜಗಳು ಕೃಷಿ ಕ್ಷೇತ್ರಕ್ಕೆ ಆವರಿಸಿಕೊಂಡು ಕೇವಲ ಆದಾಯದ ಮೂಲವಾಗಿಸುತ್ತಿದೆ. ಮಿಶ್ರತಳಿದಿಂದ ಬೆಳೆಯುವ ತರಕಾರಿಗಳು ಬಹುತೇಕ ಜನಸಾಮಾನ್ಯರಲ್ಲಿ ಊಟ ಮಾಡಿದ ನಂತರ ಹಸಿವಲಾರಂಭಿಸುತ್ತವೆ. ಕಾರಣ ಈ ಬೆಳೆಗಳು ಯಾವುದೇ ಪೌಷ್ಠಿಕಾಂಶ, ಜೀವಾಮೃತ ಸತ್ವ ಹೊಂದಿರುವುದಿಲ್ಲ. ಆ ಹಿನ್ನೆಲೆ ಯಲ್ಲಿ ಮಿಶ್ರತಳಿ ಹಾಗೂ ರಾಸಾಯನಿಕ ಬೆಳೆಗಳು ಮನುಷ್ಯನಿಗೆ ದಿನೆ ದಿನೇ ಆರೋಗ್ಯ ಕುಗ್ಗಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ರಾಸಾಯನಿಕ ಬೆಳೆಗಳು ಅತಿಹೆಚ್ಚು ಬಳಕೆಯಿಂದ ಕಡಿಮೆ ವಯಸ್ಸಿನಿಂದಲೇ ಮಧುಮೇಹ, ರಕ್ತದೊತ್ತಡ ಹಾಗೂ ಪೌಷ್ಠಿಕಾಂಶ ಕೊರತೆಯಿಂದ ಅಂಗಾಂಗಗಳು ಹಾನಿಗೆ ತುತ್ತಾಗುತ್ತಿದೆ. ಇದೇ ರೀತಿ ಮಣ್ಣಿನಲ್ಲಿ ವಿಷ ಉಣಿಸಿದರೆ ಭಾರತ 20242ರ ವೇಳೆಗೆ ಮಣ್ಣಿನ ಸತ್ವ ಕಳೆದುಕೊಳ್ಳಲಿದೆ ಎಂದು ವಿಶ್ವ ಸಂಸ್ಥೆ ಎಚ್ಚರಿಕೆ ನೀಡಿದೆ ಎಂದು ತಿಳಿಸಿದರು.ಸಾಹಿತಿ ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಜಿಲ್ಲೆ ಅನೇಕ ಶಿಲೆಗಳು, ಕೆತ್ತನೆಗಳು ಹಾಗೂ ರಾಜಮಹಾರಾಜರು ನಿರ್ಮಿಸಿದ ಪುರಾತನ ಸಂಸ್ಕೃತಿಯಿದೆ. ಇವುಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ನಾವೆಲ್ಲರೂ ಒಟ್ಟಾಗಿ ಮಾಡಬೇಕು. ಅಲ್ಲದೇ ಜಾನಪದ ಗರತಿಯ ಕೃಷಿಗೆ ಅಡಿಪಾಯ ಹಾಕಿದ್ದೆ ಮಹಿಳೆಯರಾಗಿದ್ದು ನಮ್ಮ ಊರಿನ ಸಂಸ್ಕೃತಿ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸಾಹಿತ್ಯ ಲೋಕದಲ್ಲೇ ಜೀವನ ಸಾಗಿಸುತ್ತಿದ್ದವರಿಗೆ ನಾರಾಣಾಪುರ ಅವರು ಇಂದು ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ. ದೇಶದಲ್ಲಿ ಅನೇಕ ಕೃಷಿ ವಿಶ್ವವಿದ್ಯಾ ಲಯ, ಇಲಾಖೆ, ಸಂಶೋಧನೆ ಕೇಂದ್ರಗಳಿದ್ದರೂ, ಈ ರೀತಿಯ ಮಾರ್ಗದರ್ಶನ ದೊರೆಯುತ್ತಿಲ್ಲ. ಹೀಗಾಗಿ ನೇರವಾಗಿ ಪ್ರಾಯೋಗಿಕವಾಗಿ ಮನನ ಮಾಡಿಕೊಳ್ಳಬೇಕು ಎಂದು ಹೇಳಿದರು.


ಇದೇ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿಯಾಗಿನಿವೃತ್ತಿ ಹೊಂದಿದ ಮಂಜುಳಾ ಹುಲ್ಲಹಳ್ಳಿ ಅವರನ್ನು ಸನ್ಮಾನಿಸಲಾಯಿತು. 21 ದಿನ ತೋಟಗಾರಿಕಾ ತರಬೇತಿಯಲ್ಲಿ ಪಾಲ್ಗೊಂಡ ಯುವಕರಿಗೆ ಪ್ರಮಾಣಪತ್ರ ವಿತರಿಸಲಾಯಿತು.ಈ ವೇಳೆ ಕಾಫಿ ಬೆಳೆಗಾರರಾದ ಷಡಾಕ್ಷರಿ, ಎಚ್.ಎನ್.ನಂಜೇಗೌಡ, ಕಸಾಪ ನಗರಾಧ್ಯಕ್ಷೆ ರೂಪನಾಯ್ಕ್, ಗೌರವ ಸಲಹೆಗಾರ ನವೀನ್‌ಕುಮಾರ್, ಕೃಷಿಕರಾದ ಎಂ.ಡಿ.ಪುಟ್ಟಸ್ವಾಮಿ, ಎಸ್.ಎಸ್.ವೆಂಕಟೇಶ್, ಜಿ.ಬಿ.ರಾಜಪ್ಪ, ಆರ್.ನಿಂಗಾನಾಯ್ಕ್ ಉಪಸ್ಥಿತರಿದ್ದರು.

---ಬಾಕ್ಸ್‌---

ಗೆದ್ದವರ ಸಿದ್ಧಸೂತ್ರ ಪುಸ್ತಕ ವಿತರಣೆ

ಇದೇ ವೇಳೆ ‘ಕನ್ನಡಪ್ರಭ’ ಪ್ರಕಾಶನದಲ್ಲಿ ಪ್ರಕಟಿಸಿ ಇತ್ತೀಚಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಲೋಕಾರ್ಪಣೆಗೊಳಿಸಿದ ‘ಗೆದ್ದವರ ಸಿದ್ಧಸೂತ್ರ’ ಪುಸ್ತಕವನ್ನು ಪುಷ್ಪಗಿರಿ ಪ್ಲಾಂಟೇಶನ್‌ ಬೊಗಸೆ ಮಾದೇಗೌಡ ರವಿಶಂಕರ್‌ ಸಹಕಾರದಲ್ಲಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ನೀಡಲಾಯಿತು.