ಸಾರಾಂಶ
ಉಡುಪಿ: ಇಲ್ಲಿನ ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ 75ನೇ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ‘ನಾ ಕಂಡತೆ ಪ್ರಧಾನಿ ನರೇಂದ್ರ ಮೋದಿ’ ಪ್ರಬಂಧ ಸ್ಪರ್ಧೆ ಯಶಸ್ವಿಯಾಗಿ ಸಂಪನ್ನಗೊಂಡಿತು, ಈ ಸ್ಪರ್ಧೆಯಲ್ಲಿ ಉಡುಪಿ, ದ.ಕ. ಜಿಲ್ಲೆ ಮಾತ್ರವಲ್ಲದೆ ಇಲ್ಲಿಂದ ಬೆಂಗಳೂರಿಗೆ ಹೋಗಿ ನೆಲೆಸಿರುವ ಕುಟುಂಬಗಳ ಮಕ್ಕಳು ಸೇರಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ- ಅನುಶ್ರೀ (ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವಳಕಾಡು ಉಡುಪಿ), ದ್ವಿತೀಯ - ತನಿಷಾ ವಿ. ಕೆ. ( ಡಾ.ಎಂ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ, ಮೂಲ್ಕಿ), ತೃತೀಯ - ಸೃಜನ್ ಎನ್.ವೈ, (ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬಹ್ಮಾವರ)
ಪ್ರೌಢಶಾಲಾ ವಿಭಾಗ: ಪ್ರಥಮ- ದಿಯಾ ಎಸ್. ಕರ್ಕೇರ (ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ, ಮಲ್ಪೆ), ದ್ವಿತೀಯ - ನಿರ್ವಿಘ್ನ (ಕ್ರೈಸ್ಟ್ ಸ್ಕೂಲ್, ಮಣಿಪಾಲ), ತೃತೀಯ - ತನಿಷಾ ಗಣೇಶ್ (ಎರ್ ಫೋರ್ಸ್ ಸ್ಕೂಲ್, ಜಾಲಹಳ್ಳಿ, ಬೆಂಗಳೂರು)ಪದವಿ ಪೂರ್ವ ವಿಭಾಗ: ಪ್ರಥಮ - ಭಾವನ (ವಿದ್ಯೋದಯ ಪದವಿಪೂರ್ವ ಕಾಲೇಜು,ಉಡುಪಿ), ದ್ವಿತೀಯ - ತೇಜಸ್ (ಎಮ್.ಎಸ್, ಜವಾಹರ್ ನವೋದಯ ವಿದ್ಯಾಲಯ, ಮುಡಿಪು), ತೃತೀಯ - ತೃಷಾ ಯು. (ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಉಡುಪಿ)ಪದವಿ ವಿಭಾಗ : ಪ್ರಥಮ - ದಿವಿತ್ ದಿನಕರ್ (ತ್ರಿಷಾ ವಿದ್ಯಾ ಕಾಲೇಜು. ಕಟಪಾಡಿ), ದ್ವಿತೀಯ - ನಿರೀಕ್ಷಾ ನರೇಶ್, (ಮಧ್ವ ವಾದಿರಾಜ ತಾಂತ್ರಿಕ ಸಂಸ್ಥೆ, ಬಂಟಕಲ್ಲು), ತೃತೀಯ - ಲಾಸ್ಯಪ್ರಿಯಾ (ಮುನಿಯಾಲ್ ಆಯುರ್ವೇದ ಕಾಲೇಜು, ಮಣಿಪಾಲ) ಸ್ಪರ್ಧೆಯಲ್ಲಿ ವಿಜೇತರಾಗಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಯಶ್‍ಪಾಲ್ ಎ. ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
;Resize=(128,128))