ಸಾರಾಂಶ
ಬೀದರ್‌ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 100 ಜನ್ಮದಿನೋತ್ಸವ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಅಟಲ್ ಬಿಹಾರಿ ವಾಜಪೇಯಿ ಅವರು ಹಾಕಿ ಕೊಟ್ಟ ದಾರಿಯಲ್ಲಿಯೆ ಪ್ರಧಾನಿ ಮೋದಿಯವರ ಸರ್ಕಾರ ನಡೆಯುತ್ತಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ ನುಡಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ 100 ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವರ ಕನಸುಗಳನ್ನು ನನಸು ಮಾಡುವತ್ತ ಸಾಗುತ್ತಿದೆ. ಅದಕ್ಕಾಗಿ ನಾವು ಅವರ ಜನ್ಮದಿನವನ್ನು ‘ಸುಶಾಸನ ದಿನಾಚರಣೆ’ಯನ್ನಾಗಿ ಆಚರಿಸುತ್ತಿದ್ದೆವೆ ಎಂದು ಹೇಳಿದರು.
ರಾಜ್ಯ ಪ್ರಶಿಕ್ಷಣ ಪ್ರಕೋಷ್ಟದ ಸಂಚಾಲಕರಾದ ರಾಜಶೇಖರ ನಾಗಮೂರ್ತಿಯವರು ಅಟಲ್‌ಜಿ ಬರೆದ ಗೀತ ಗಾತಾ ಹೂಂ ಮೈ ಕವನ ಗಾಯನ ಮಾಡಿದರು. ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ ಅವರು ಅಟಲ್‌ಜಿಯನ್ನು ಸ್ಮರಿಸಿದರು.ವಿಧಾನ ಪರಿಷತ್ ಸದಸ್ಯ ಮಾರುತಿರಾವ ಮುಳೆ, ಪಕ್ಷದ ಹಿರಿಯರಾದ ಗುರುನಾಥ ಜ್ಯಾಂತಿಕರ್, ಪಿರಪ್ಪಾ ಔರಾದೆ, ಬಾಬುರಾವ್ ಕಾರಬಾರಿ, ರೌಫೊದ್ದಿನ್ ಕಛೆರಿವಾಲೆ, ಜಿಲ್ಲಾ ಉಪಾಧ್ಯಕ್ಷ ಮಾಣಿಕಪ್ಪಾ ಖಾಶೆಂಪುರೆ, ಕೀರಣ ಪಾಟೀಲ, ರಾಜಕುಮಾರ ಪಾಟೀಲ, ಮಹಾನಂದಾ ಪಾಟೀಲ, ಸುಭಾಷ ಮಡಿವಾಳ, ಸಂಜುಕುಮಾರ ಸಜ್ಜನ, ರಾಜೇಂದ್ರ ಪುಜಾರಿ, ಗಣೇಶ ಭೊಸ್ಲೆ, ಗೊಪಾಲ ಕುಕಡಾಲ, ವಿರು ದಿಗ್ವಾಲ್, ನಿತಿನ ಕರ್ಪುರ, ಸೂರ್ಯಕಾಂತ ರಾಮಶೇಟ್ಟಿ, ರವಿ ವಟಗೆ, ಪ್ರಶಾಂತ ಸಿಂಧೊಲ, ರಮೇಶ, ಬಸವ ಮುಲಗೆ, ವಿಜಯಕುಮಾರ ಹೆಗ್ಗೆ , ಪಕ್ಷದ ಮಾಧ್ಯಮ ಪ್ರಮುಖ ಶ್ರೀನಿವಾಸ ಚೌಧರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.