ಮೋದಿ ಸರ್ಕಾರ ಅಮೆರಿಕ ಸಾಮ್ರಜ್ಯಶಾಹಿ ಅಡಿಯಾಳಾಗಬಾರದು: ಯಾದವ ಶೆಟ್ಟಿ

| Published : Nov 05 2024, 12:31 AM IST

ಮೋದಿ ಸರ್ಕಾರ ಅಮೆರಿಕ ಸಾಮ್ರಜ್ಯಶಾಹಿ ಅಡಿಯಾಳಾಗಬಾರದು: ಯಾದವ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಮೆರಿಕ ಸಾಮ್ರಾಜ್ಯಶಾಹಿಯ ಅಡಿಯಾಳು ಆಗಬಾರದು ಎಂದು ಸಿಪಿಐಎಂನ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಹೇಳಿದರು. ಅವರು ಭಾನುವಾರ ಸಮಾಜ ಮಂದಿರದಲ್ಲಿ ನಡೆದ ಸಿಪಿಐಎಂ ಮೂಡುಬಿದಿರೆ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಮೆರಿಕ ಸಾಮ್ರಾಜ್ಯಶಾಹಿಯ ಅಡಿಯಾಳು ಆಗಬಾರದು ಎಂದು ಸಿಪಿಐಎಂನ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಹೇಳಿದರು.

ಅವರು ಭಾನುವಾರ ಸಮಾಜ ಮಂದಿರದಲ್ಲಿ ನಡೆದ ಸಿಪಿಐಎಂ ಮೂಡುಬಿದಿರೆ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಪ್ಯಾಲೆಸ್ತೀನ್ ನಾಗರಿಕರನ್ನು ಅತ್ಯಂತ ಅಮಾನವೀಯವಾಗಿ ಕೊಲ್ಲುತ್ತಿರುವ ಇಸ್ರೇಲ್‌ಗೆ ಸರ್ವ ರೀತಿಯ ಸಹಕಾರ ನೀಡುತ್ತಿರುವ ಅಮೆರಿಕ ಮತ್ತು ಅದರ ಮಿತ್ರಕೂಟದ ನೀತಿಯನ್ನು ಖಂಡಿಸಿ ಅವರು ಮಾತನಾಡಿದರು. ಭಾರತ ಎಂದಿಗೂ ಸಾಮ್ರಾಜ್ಯ ಶಾಹಿಗಳ ಪರವಾಗಿರಲಿಲ್ಲ 2014ರಲ್ಲಿ ಆಡಳಿತಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ದೇಶದ ವಿದೇಶಾಂಗ ನೀತಿಯನ್ನು ಅಮೆರಿಕ ಸಾಮ್ರಾಜ್ಯ ಶಾಹಿಗಳ ಅಡಿಯಲಾಗಿಸಿವೆ ಅದು ಹಾಗೆ ಆಗಬಾರದು, ಸರಕಾರದ ನೀತಿ ಬದಲಾಗಬೇಕೆಂದು ಅವರು ಹೇಳಿದರು .

ತಾಲೂಕು ಸಮಿತಿ ಕಾರ್ಯದರ್ಶಿ ರಮಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮುಂದಾಳು ಸುನಿಲ್ ಕುಮಾರ್ ಬಜಾಲ್ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ವಸಂತ ಆಚಾರ್ಯ ಉಪಸ್ಥಿತರಿದ್ದರು. ತಾಲೂಕು ಸಮಿತಿ ಸದಸ್ಯರಾದ ಸುಂದರ ಶೆಟ್ಟಿ, ರಾಧಾ, ಗಿರಿಜಾ, ಲಕ್ಷ್ಮೀ, ಮೊಹಮ್ಮದ್ ತಸ್ರೀಫ್, ಸೀತಾರಾಮ್ ಶೆಟ್ಟಿ, ಶಂಕರ್, ಕೃಷ್ಣಪ್ಪ ಕೊಣಾಜೆ ಉಪಸ್ಥಿತರಿದ್ದರು. ರಾಧಾ ಸ್ವಾಗತಿಸಿದರು. ಮಹಮ್ಮದ್ ತಸ್ರೀಫ್ ವಂದಿಸಿದರು.