ಭಾರತವನ್ನು ವಿಶ್ವಗುರು ಮಾಡುವ ಶಕ್ತಿ ಮೋದಿಗಿದೆ: ಯತ್ನಾಳ

| Published : Apr 28 2024, 01:17 AM IST

ಭಾರತವನ್ನು ವಿಶ್ವಗುರು ಮಾಡುವ ಶಕ್ತಿ ಮೋದಿಗಿದೆ: ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ:ನಗರ ಮತಕ್ಷೇತ್ರ ವ್ಯಾಪ್ತಿಯ ವಾರ್ಡ್‌ 2ರ ದರ್ಗಾ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯಕ್ಕೆ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತದ ನಿದೇರ್ಶಕ ರಾಮನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಭೇಟಿ ನೀಡಿದ ಬಿಜೆಪಿ ನಗರ ಮಂಡಲ ಪದಾಧಿಕಾರಿಗಳು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರವಾಗಿ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ರಾಮನಗೌಡ ಪಾಟೀಲ ಯತ್ನಾಳ, ಭಾರತ ದೇಶವನ್ನು ವಿಶ್ವಗುರು ಆಗಿ ಮಾಡುವ ಶಕ್ತಿ ಮೋದಿ ಅವರಿಗೆ. ಅದು ಅವರಿಂದ ಮಾತ್ರ ಸಾಧ್ಯ. ಅವರು ಮತ್ತೆ ಪ್ರಧಾನಿಯಾದರೆ ದೇಶ ಸುರಕ್ಷಿತವಾಗಿರುವುದಲ್ಲದೆ, ಅಭಿವೃದ್ಧಿ ಪಥದತ್ತ ಸಾಗಲಿದೆ. ಹೀಗಾಗಿ ನಾವು ನಮ್ಮ ಜಿಲ್ಲೆಯಿಂದ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸಿ ಕಳಿಸೋಣ ಎಂದರು.

ರಾಜಯೋಗಿನಿ ಬ್ರಹ್ಮಕುಮಾರಿ ಸರೋಜಾ ಅಕ್ಕ, ರಾಜಯೋಗಿ ಬ್ರಹ್ಮಕುಮಾರ ಗಂಗಾಧರ ಅಣ್ಣ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಂಕರ ಹೂಗಾರ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪರಿವಾರದ ದೈವಿ ಸಹೋದರ, ಸಹೋದರಿಯರು ಉಪಸ್ಥಿತರಿದ್ದರು.