ಏಕಕಾಲಕ್ಕೆ 5 ಸಾವಿರ ಸ್ಥಳಗಳಲ್ಲಿ ನವ ಮತದಾರರ ಜೊತೆ ಮೋದಿ ಸಂವಾದ

| Published : Jan 25 2024, 02:08 AM IST

ಏಕಕಾಲಕ್ಕೆ 5 ಸಾವಿರ ಸ್ಥಳಗಳಲ್ಲಿ ನವ ಮತದಾರರ ಜೊತೆ ಮೋದಿ ಸಂವಾದ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜ. 25ರಂದು ಯುವ ಮೋರ್ಚಾದಿಂದ ಯುವ ಮತದಾರರ ಜೊತೆ ಸಭೆಯನ್ನು ಆಯೋಜನೆ ಮಾಡಲಾಗಿದ್ದು, 5 ಸಾವಿರ ಸ್ಥಳಗಳಲ್ಲಿ ನವ ಮತದಾರರ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ನವದೆಹಲಿ

ಲಕ್ಷಾಂತರ ಯುವ ಮತದಾರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿಯೊಬ್ಬರು ಇಷ್ಟು ದೊಡ್ಡ ಪ್ರಮಾಣದಲ್ಲಿ ನವ ಮತದಾರರ ಜೊತೆ ಈತನಕ ಮಾತನಾಡಿಲ್ಲ. ಕರ್ನಾಟಕದಲ್ಲಿ 250 ಕಡೆ ಹಾಗೂ ಬೆಂಗಳೂರಿನಲ್ಲಿ 60 ಕಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಸಭೆಯಲ್ಲಿ 2014ರ ಹಿಂದಿನ ಭಾರತ, ನಂತರದ ಭಾರತದ ಬಗ್ಗೆ ಯುವಕರಿಗೆ ಮಾಹಿತಿ ದೊರೆಯಲಿದೆ ಎಂದರು.

9 ವರ್ಷಗಳಿಂದ ಯುವಕರನ್ನು ಗಮನದಲ್ಲಿರಿಸಿಕೊಂಡು ಹಲವು ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ನೀತಿ ಆಯೋಗದ ವರದಿಯಂತೆ 25 ಕೋಟಿ ಬಡವರು ಬಡತನದ ರೇಖೆಯಿಂದ ಹೊರ ಬಂದಿದ್ದಾರೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳು, ಡಿಜಿಟಲ್ ಇಂಡಿಯಾ ಸೇರಿ ಹಲವು ಯೋಜನೆಗಳನ್ನು ಮೋದಿ ಅವರು ಯುವಕರಿಗೆ ನೀಡಿದ್ದಾರೆ ಎಂದರು.

ಇಂಡಿಯಾ ಮೈತ್ರಿ ಬಗ್ಗೆ ಮಾತನಾಡಿ, ಇದೊಂದು ಅಸಹಜ ಮೈತ್ರಿಯಾಗಿದ್ದು, ಬಹುಬೇಗ ಸಾವನ್ನಪ್ಪುತ್ತದೆ. ಇದು ಮುಂಗಸಿ ಮತ್ತು ಹಾವಿನ ಕಥೆಯಂತೆ, ಕೇವಲ ವರ್ಚುವಲ್ ಮೈತ್ರಿಯಾಗಿದೆ. ಕೇರಳ, ದೆಹಲಿ, ಪಶ್ಚಿಮ ಬಂಗಾಳಗಳಲ್ಲಿ ಬೇರೆ, ಬೇರೆ ಸರ್ಕಾರಗಳಿವೆ. ಹಾಗಾಗಿ ಅದು ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದರು.