ಮೋದಿ ಸರ್ವ ವರ್ಗದ ಏಳ್ಗೆಗೆ ಶ್ರಮಿಸುವ ಶ್ರೇಷ್ಠ ನಾಯಕ

| Published : Apr 21 2024, 02:19 AM IST

ಸಾರಾಂಶ

ಸಚಿವನಾದಾಗಿಲಿಂದಲೂ ಅವರ ಆಡಳಿತದ ವೈಖರಿ ಗಮನಿಸುತ್ತಿದ್ದೇನೆ. ದೇಶದ ಒಳಿತಿಗಾಗಿ ಯೋಚಿಸುತ್ತ ಶ್ರಮಿಸುವ ಒಬ್ಬ ಶೇಷ್ಠ ನಾಯಕ ಅವರು. ದೇಶದಲ್ಲಿರುವ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಾರೆ.

ಹುಬ್ಬಳ್ಳಿ:

ಪ್ರಧಾನಿ ನರೇಂದ್ರ ಮೋದಿ ಸರ್ವ ವರ್ಗದ ಅಭಿವೃದ್ಧಿಗಾಗಿ ಶ್ರಮಿಸುವ ಶ್ರೇಷ್ಠ ನಾಯಕರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಲೋಕಸಭೆ ಚುನಾವಣೆ ಪ್ರಯುಕ್ತ ಶನಿವಾರ ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಭೋವಿ ವಡ್ಡರ ಸಮಾಜದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸಚಿವನಾದಾಗಿಲಿಂದಲೂ ಅವರ ಆಡಳಿತದ ವೈಖರಿ ಗಮನಿಸುತ್ತಿದ್ದೇನೆ. ದೇಶದ ಒಳಿತಿಗಾಗಿ ಯೋಚಿಸುತ್ತ ಶ್ರಮಿಸುವ ಒಬ್ಬ ಶೇಷ್ಠ ನಾಯಕ ಅವರು. ದೇಶದಲ್ಲಿರುವ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಾರೆ. ಅದರ ಫಲವನ್ನು ಪ್ರತಿ ನಾಗರಿಕನಿಗೂ ತಲುಪಿಸುವ ನಿಟ್ಟಿನಲ್ಲಿ ಸಕ್ರಿಯರಾಗುತ್ತಾರೆ. ಭಾರತ ಇದೇ ರೀತಿ ಅಭಿವೃದ್ಧಿ ಸಾಧಿಸಬೇಕಾದಲ್ಲಿ ನಾವು ಮತ್ತೆ ನರೇಂದ್ರ ಮೋದಿ ಅವರನ್ನೇ ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಜೋಶಿ ಕರೆ ನೀಡಿದರು.

ಈ ವೇಳೆ ವಿಪ ಸದಸ್ಯ ಸುನೀಲ್ ವಲ್ಯಾಪುರಿ, ಪಾಲಿಕೆ ಮಾಜಿ ಮೇಯರ್‌ ವೆಂಕಟೇಶ್ ಮೇಸ್ತ್ರಿ, ಪ್ರಮುಖರಾದ ಮಲ್ಲಪ್ಪ ಹಳಕಟ್ಟಿ, ಪ್ರಕಾಶ್ ಕ್ಯಾರಕಟ್ಟಿ, ಬಸವರಾಜ ವಡ್ಡರ, ಪರಮೇಶ ವಡ್ಡರ, ಮಂಜುನಾಥ ಹಿರೇಮಠ ಸೇರಿದಂತೆ ಸಮಾಜದ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.