ಸಾರಾಂಶ
ಈ ಕೃತಿ ಪ್ರಧಾನಿ ನರೇಂದ್ರ ಮೋದಿ ಕಳೆದ ತಮ್ಮ ಐದು ದಶಕಗಳ ಸಾರ್ವಜನಿಕ ಬದುಕಿನಲ್ಲಿ, ಅನುಭವ ಮತ್ತು ಅನುಭಾವದಿಂದ ರೂಪುಗೊಂಡ, ಓರ್ವ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಿ ಸ್ಥಾನ ಅಲಂಕರಿಸುವ ವರೆಗೆ, ಸಮರ್ಥ ನೇತೃತ್ವ ವಹಿಸಿಕೊಂಡ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಂಡ ರೀತಿ ಕಟ್ಟಿಕೊಡುತ್ತದೆ.
ಧಾರವಾಡ:
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಕುರಿತಾಗಿ ಅಭಿವೃದ್ಧಿ ಪರ ಚಿಂತಕ ಹಾಗೂ ಸ್ವಾಮಿ ವಿವೇಕಾನಂದ ಯೂಥ್ ಮೂಲಮೆಂಟ್ ಸಂಸ್ಥಾಪಕ ಡಾ. ಆರ್. ಬಾಲಸುಬ್ರಹಣ್ಯಂ ಅವರು ರಚಿಸಿರುವ ಪವರ್ ವಿಥಿನ್ (ದ ಲೀಡರ್‌ಶಿಪ್ ಲೆಗಸಿ ನರೇಂದ್ರ ಮೋದಿ) ಕೃತಿ ಅನಾವರಣ ಹಾಗೂ ಲೇಖಕರೊಂದಿಗೆ ಸಂವಾದ ಡಿ. 26ರಂದು ಸಂಜೆ 6ಕ್ಕೆ ನಗರದ ಆಲೂರು ಭವನದಲ್ಲಿ ಆಯೋಜಿಸಲಾಗಿದೆ.ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿಸರ್ಗ ಸಂಶೋಧನಾ ಕೇಂದ್ರದ ಪಿ.ವಿ. ಹಿರೇಮಠ ಹಾಗೂ ಇತರರು, ಈ ಕೃತಿ ಪ್ರಧಾನಿ ನರೇಂದ್ರ ಮೋದಿ ಕಳೆದ ತಮ್ಮ ಐದು ದಶಕಗಳ ಸಾರ್ವಜನಿಕ ಬದುಕಿನಲ್ಲಿ, ಅನುಭವ ಮತ್ತು ಅನುಭಾವದಿಂದ ರೂಪುಗೊಂಡ, ಓರ್ವ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಿ ಸ್ಥಾನ ಅಲಂಕರಿಸುವ ವರೆಗೆ, ಸಮರ್ಥ ನೇತೃತ್ವ ವಹಿಸಿಕೊಂಡ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಂಡ ರೀತಿ ಕಟ್ಟಿಕೊಡುತ್ತದೆ. ಬಿಲ್ ಗೇಟ್ಸ್, ಫಾಲ್ಗುಣಿ ನಾಯರ್, ಆನಂದ ಮಹಿಂದ್ರ್, ದೇಬ್‌ಜಾನಿ ಘೋಷ್, ಅಮಿಷ್ ತ್ರಿಪಾಠಿ ಮೊದಲ ದಿಗ್ಗಜರು, ಮೋದಿ ಮಾದರಿಯ ನೇತೃತ್ವ, ಮಾತು, ವ್ಯಾವಹಾರಿಕ ಕುಶಲತೆ, ಸಂಸ್ಕಾರ ಮತ್ತು ಸಂಸ್ಕೃತಿ ಜತೆಗೆ ವಿವಿಧ ಆಯಾಮಗಳನ್ನು ಮೇಳವಿಸಿಕೊಂಡ, ರಾಷ್ಟ್ರಹಿತದ ನಡೆ, ವ್ಯಕ್ತಿತ್ವ ಪರಿಚಯಕ್ಕಿಂತ ಭಿನ್ನವಾಗಿ ಕೃತಿ ಇದೆ. ಸದ್ಯ ಇಂಗ್ಲಿಷ್ ಭಾಷೆಯಲ್ಲಿದ್ದು ಕೆಲವೇ ದಿನಗಳಲ್ಲಿ ಕನ್ನಡದಲ್ಲೂ ಪ್ರಕಟಗೊಳ್ಳಲಿದೆ ಎಂದ ಅವರು, 325 ಪುಟಗಳನ್ನು ಹೊಂದಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೃತಿ ಲೋಕಾರ್ಪಣೆ ಮಾಡಲಿದ್ದು, ಚಾಣಕ್ಯ ವಿವಿ ಸ್ಕೂಲ್ ಆಫ್‌ಲಾ ಡೀನ್ ಡಾ. ಚೇತನ್ ಸಿಂಗಾಯಿ ಕೃತಿ ಪರಿಚಯಿಸುವರು. ಧಾರವಾಡ ಐಐಟಿ ನಿರ್ದೇಶಕ ಪ್ರೊ. ವೆಂಕಪಯ್ಯ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದು ಕೃತಿಯ ಲೇಖಕರೊಂದಿಗೆ ಸಂವಾದವೂ ಇರಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗೋಪಾಲಕೃಷ್ಣ ಕಮಲಾಪುರ, ಜಯಂತ ಕೆ.ಎಸ್., ಡಾ. ಮೋಹನ ತುಂಬದ ಹಾಗೂ ನಿವೃತ್ತ ಪ್ರಾಚಾರ್ಯ ಎಸ್.ಎನ್. ಹೆಗಡೆ ಇದ್ದರು.