ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು, ಆಪರೇಷನ್ ಸಿಂಧೂರ, ಸರ್ಜಿಕಲ್ ಸ್ಟ್ರೈಕ್, ಕೋವಿಡ್ ಸಮಯದಲ್ಲಿ ಮೋದಿ ತೆಗೆದುಕೊಂಡ ಬದ್ಧತೆ ಸ್ಮರಿಸಬೇಕು

ಯಲಬುರ್ಗಾ: ದೇಶದ ಸ್ವಾತಂತ್ರ್ಯಾ ನಂತರದ ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಪಕ್ಷದ ದೀರ್ಘಾವಧಿ ಪ್ರಧಾನಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನರೇಂದ್ರ ಮೋದಿಗೆ ಇನ್ನೂ ಹೆಚ್ಚಿನ ದಿನಗಳ ದೇಶ ಸೇವೆ ಮಾಡುವಂತೆ ಪ್ರಾರ್ಥಿಸಿ ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ಶ್ರೀವಿಜಯ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ,ಸಿಹಿ ಹಂಚಿ ಸಂಭ್ರಮಿಸಲಾಯಿತು.

ಬಿಜೆಪಿ ತಾಲೂಕು ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಸ್ವಾತಂತ್ರ್ಯ ನಂತರದ ಎನ್‌ಡಿಎ ಮೈತ್ರಿಕೂಟದ ದೀರ್ಘಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರಧಾನಿ ಮೋದಿ ಆಡಳಿತವು ಜಗತ್ತಿಗೆ ಮಾದರಿಯಾಗಿದೆ. ಮೋದಿ ನೇತೃತ್ವದಲ್ಲಿ ಭಾರತ ಭರವಸೆಯ ದೀಪವಾಗಿ ಹೊರಹೊಮ್ಮಿದೆ. ಭಾರತವು ಉಜ್ವಲ ಭವಿಷ್ಯದತ್ತ ಪರಿವರ್ತನೆಗೊಂಡಿದೆ. ಆಡಳಿತದಲ್ಲಿ ಮಾದರಿ ಬದಲಾವಣೆಗೆ ಕಾರಣವಾಗಿದೆ. ಸೇವೆ, ಉತ್ತಮ ಆಡಳಿತ ಮತ್ತು ಬಡ ಜನರ ಕಲ್ಯಾಣದ‌ ಮೇಲೆ ಕೇಂದ್ರೀಕರಿಸುವ ಮೂಲಕ ಅಮೃತ ಕಾಲದ‌ ಕಡೆಗೆ ಭಾರತವು ಅಭಿವೃದ್ಧಿಯ ಹೊಸ ದಿಕ್ಕಿನೆಡೆಗೆ ಪ್ರಾರಂಭಿಸಿದೆ ಎಂದರು.

ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು, ಆಪರೇಷನ್ ಸಿಂಧೂರ, ಸರ್ಜಿಕಲ್ ಸ್ಟ್ರೈಕ್, ಕೋವಿಡ್ ಸಮಯದಲ್ಲಿ ಮೋದಿ ತೆಗೆದುಕೊಂಡ ಬದ್ಧತೆ ಸ್ಮರಿಸಬೇಕು. ದೇಶದ ಅಭಿವೃದ್ಧಿ ಮತ್ತು ಯುವ ಜನರ ಸಬಲತೆಗೆ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಂದಯ್ಯ ಕಳ್ಳಿಮಠ, ಅಮರೇಶ ಹುಬ್ಬಳ್ಳಿ,ಕಳಕಪ್ಪ ತಳವಾರ್, ವಸಂತ ಬಾವಿಮನಿ, ಸಿದ್ರಾಮೇಶ ಬೇಲೇರಿ, ಕಲ್ಲೇಶಪ್ಪ ಕರಮುಡಿ, ಅಶೋಕ ಅರಿಕೇರಿ, ದೊಡ್ಡಯ್ಯ ಗುರುವಿನ, ಈರಪ್ಪ ಬಣಕಾರ, ಪರಶುರಾಮ ಚವ್ಹಾಣ, ಮಲ್ಲಣ್ಣ ತೊಂಡಿಹಾಳ,ಸಂತೋಷಿಮಾ ಜೋಷಿ, ರೇಖಾ ಅಯ್ಯನಗೌಡ, ಲಲಿತಾ ಭಾಸ್ಕರ, ಗೌತಮ ಜೋಶಿ, ಶರಣಪ್ಪ ತೋಟರ, ನಾಗಪ್ಪ ಹಳೆಮನೆ, ಬಸಲಿಂಗಪ್ಪ ಹಳೆಮನಿ, ನಾಗರಾಜ ಅಯ್ಯನಗೌಡ್ರ ಸೇರಿದಂತೆ ಮತ್ತಿತರರು ಇದ್ದರು.