ಸಾರಾಂಶ
ರಾಣಿಬೆನ್ನೂರು: ವಿಕಸಿತ ಭಾರತ ನಿರ್ಮಾಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾತ್ರ ತುಂಬಾ ಮಹತ್ತರವಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ತಿಳಿಸಿದರು.ನಗರದ ಸ್ಟೇಷನ್ ರಸ್ತೆ ಬಿಜೆಪಿ ಕಚೇರಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮೋದಿಯವರದ್ದು ಪ್ರಜಾಪ್ರಭುತ್ವದ ಆಡಳಿತ. ಕೋವಿಡ್ ಸಮಯದಲ್ಲಿ ವಿಶ್ವವೇ ನಲುಗಿ ಹೋಗಿದ್ದಾಗ ಅದನ್ನು ದಕ್ಷವಾಗಿ ನಿಭಾಯಿಸಿದ ಹೆಗ್ಗಳಿಕೆ ಇವರದ್ದಾಗಿದೆ.ಜಲಜೀವನ್ ಮಿಷನ್ ಯೋಜನೆಯಡಿ ದೇಶದ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಕುಶಾಗ್ರಮತಿ ವಿದೇಶಾಂಗ ನೀತಿ ಅನುಸರಿಸುವ ಮೂಲಕ ವಿಶ್ವದ ಜನರು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ವಿಶ್ವದ ಆರ್ಥಿಕತೆಯಲ್ಲಿ ನಮ್ಮ ದೇಶ ನಾಲ್ಕನೇ ಸ್ಥಾನ ತಲುಪಲು ಮೋದಿ ಕೈಗೊಂಡ ಜನಪರ ಆಡಳಿತ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇವರ ದಕ್ಷ ಆಡಳಿತದಲ್ಲಿ ದೇಶ ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂದರು. ರಾಷ್ಟ್ರೀಯ ಪರಿಷತ್ ಸದಸ್ಯ ಮಂಜುನಾಥ ಓಲೇಕಾರ, ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಮೈಲಪ್ಪ ಗೋಣಿಬಸಮ್ಮನವರ, ಕೊಟ್ರೇಶ ಕಮದೋಡ, ನವೀನಕುಮಾರ ಅಡ್ಡಿ, ಲಿಂಗರಾಜ ಬೂದನೂರ, ಮಂಜುನಾಥ ಕಬ್ಬಿಣದ, ಸುಜಾತಾ ಆರಾಧ್ಯಮಠ, ಅಕ್ಷತಾ ಮಾಳಗಿಮನಿ, ಮಮತಾ ಕಾಟಪ್ಪನವರ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ಕೊಟ್ರೇಶ ಕೆಂಚಪ್ಪನವರ, ನಾಗರಾಜ ಬಣಕಾರ, ನಾರಾಯಣ ಪವಾರ, ಚಂದ್ರು ಕುಂದಾಪುರ, ಪ್ರಕಾಶ ಮೈದೂರ, ಸುಧೀರ ನಾಯ್ಕ್, ಮೌನೇಶ ತಳವಾರ, ಅಶೋಕ ಪಾಸಿಗಾರ, ಜಗದೀಶ ದೊಡ್ಡಮನಿ ಮತ್ತಿತರರಿದ್ದರು.