ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಕಾಲ ನಿರಂತರವಾಗಿ ಜನ ಸೇವೆ ಮಾಡಿದ ಇಂದಿನ ದಿನ ಇತಿಹಾಸದ ಪುಟಗಳಲ್ಲಿ ಬರೆದಿಡುವ ದಿನವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಕಾಲ ನಿರಂತರವಾಗಿ ಜನ ಸೇವೆ ಮಾಡಿದ ಇಂದಿನ ದಿನ ಇತಿಹಾಸದ ಪುಟಗಳಲ್ಲಿ ಬರೆದಿಡುವ ದಿನವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ನಗರದ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಬಿಜೆಪಿ ಶಿವಮೊಗ್ಗ ವತಿಯಿಂದ ಪ್ರಧಾನಿ ಮೋದಿಯವರು ಜನಸೇವೆ ಮತ್ತು ದೇಶ ಸೇವೆಯಲ್ಲಿ 25 ವರ್ಷಗಳು ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಸೇವಾ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಧಾನಿ ಮೋದಿಯವರು ರಾಷ್ಟ್ರವನ್ನುದ್ಧೇಶಿಸಿ ಮಾತನಾಡಿದ ಭಾಷಣದ ನೇರ ಪ್ರಸಾರ ವೀಕ್ಷಣೆ ಬಳಿಕ ಪ್ರತಿಕ್ರಯಿಸಿದ ಅವರು, ಗುಜರಾತಿ ದ್ರುವ ತಾರೆ ತಾನೂ ಬೆಳೆದು ವಿಶ್ವನಾಯಕನಾಗಿ ಸಂಘಟನೆಯನ್ನೂ ಬೆಳೆಸಿ, ದೇಶದ ಜನರಲ್ಲಿ ವಿಶ್ವಾಸ ಮೂಡಿಸಿದ ನಾಯಕರಾಗಿ ತನ್ನ ಇಡೀ ಜೀವನವನ್ನೇ ದೇಶಕ್ಕೆ ಸಮರ್ಪಣೆ ಮಾಡಿ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯವನ್ನು ನೀಡಿದ ಮೋದಿಯವರೊಂದಿಗೆ ನಾವೂ ಕೂಡ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.ಎನ್.ಡಿ.ಎ.ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸೋಣ. ಹೊಸದಾಗಿ ಅಸಂಘಟಿತ ಕಾರ್ಮಿಕರಿಗೆ ಕೇವಲ 20 ರು.ಮಾಸಿಕ ಪಡೆದು 60 ವರ್ಷದ ನಂತರ 2500-5000 ರು.ವರೆಗೆ ಮಾಸಿಕ ಪೆನ್ಷನ್ ಯೋಜನೆ ಜಾರಿಗೊಳಿಸಿದ್ದಾರೆ. ಬರಗಾಲದ ಈ ದಿನದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಜನತೆ ಬಿಜೆಪಿ ಸರ್ಕಾರವನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.
ಇಡೀ ವಿಶ್ವದಲ್ಲೇ ಬೇರೆ ಬೇರೆ ಕಾರಣಗಳಿಗೆ ಆರ್ಥಿಕ ತಲ್ಲಣವಾಗಿದ್ದರೂ ದೇಶದ ಜಿಡಿಪಿಯಲ್ಲಿ ಏರಿಕೆಯಾಗಿದ್ದು, 2047ರ ಹೊತ್ತಿಗೆ ಸ್ವಾತಂತ್ರ್ಯ ಸಿಕ್ಕಿ ನೂರು ವರ್ಷ ತುಂಬಲಿದ್ದು, ಮೋದಿಯವರ ವಿಕಸಿತ ಭಾರತದ ಕನಸನ್ನು ನನಸು ಮಾಡಬೇಕು. ವಿವಿಲ್ ಡು ಇಟ್ ಘೋಷವಾಕ್ಯದೊಂದಿಗೆ ಸಂಕಲ್ಪ ಮಾಡೋಣ. ಕಾರ್ಯಕರ್ತರು ಮುಂಬರುವ ಸಣ್ಣ ಸಣ್ಣ ಚುನಾವಣೆಗಳನ್ನೂ ಕಡೆಗಣಿಸದೆ ಸಂಪೂರ್ಣವಾಗಿ ಪ್ರಧಾನಿ ಮೋದಿಯವರ ಯೋಜನೆಗಳನ್ನು ಪ್ರತಿ ಮನೆಮನೆಗೂ ತಲುಪಿಸುವ ಸಂಕಲ್ಪ ಮಾಡೋಣ ಎಂದರು.ಸೀನಪ್ಪ ಶೆಟ್ಟಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಸೇವಾ ಜ್ಯೋತಿ ಯಾತ್ರೆ ಮುಂದುವರಿಯಿತು. ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಆರ್.ಕೆ.ಸಿದ್ರಾಮಣ್ಣ, ಕೆ.ಬಿ.ಅಶೋಕ ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಟಿ.ಡಿ.ಮೇಘರಾಜ್, ರಾಜು ತಲ್ಲೂರು, ಮಾಲತೇಶ್, ಹರಿಕೃಷ್ಣ, ಜ್ಞಾನೇಶ್ವರ್ ಸೇರಿದಂತೆ ಜಿಲ್ಲೆಯ ವಿವಿಧ ಮಂಡಲಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.