ದೇಶದ ಉಳಿವಿಗೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು: ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್

| Published : Apr 13 2024, 01:10 AM IST / Updated: Apr 13 2024, 11:45 AM IST

ದೇಶದ ಉಳಿವಿಗೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು: ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ದೇಶ ಉಳಿವಿಗಾಗಿ ಮತ್ತೊಮ್ಮೆ ಮೋದಿ ಪ್ರಧಾನ ಮಂತ್ರಿ ಆಗಬೇಕು ಎಂದು ಬಿಜೆಪಿ ಪಕ್ಷದ ಶ್ರವಣಬೆಳಗೊಳ ಕ್ಷೇತ್ರದ ಉಸ್ತುವಾರಿ ಮತ್ತು ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ತಿಳಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ಮಂಡಳದ ಬಿಜೆಪಿ ಪಕ್ಷದ ಶಕ್ತಿ ಕೇಂದ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

 ಚನ್ನರಾಯಪಟ್ಟಣ :  ಭಾರತ ದೇಶ ಉಳಿವಿಗಾಗಿ ಮತ್ತೊಮ್ಮೆ ಮೋದಿ ಪ್ರಧಾನ ಮಂತ್ರಿ ಆಗಬೇಕು ಎಂದು ಬಿಜೆಪಿ ಪಕ್ಷದ ಶ್ರವಣಬೆಳಗೊಳ ಕ್ಷೇತ್ರದ ಉಸ್ತುವಾರಿ ಮತ್ತು ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ತಿಳಿಸಿದ್ದಾರೆ.

ಶ್ರವಣಬೆಳಗೊಳದಲ್ಲಿ ಮಂಡಳದ ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಶಕ್ತಿ ಕೇಂದ್ರದ ಪ್ರಚಾರ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಭಾರತ ದೇಶದ ಉಳಿವಿಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿ ಹುದ್ದೆಯನ್ನು ಅಲಂಕರಿಸುವುದು ಸೂಕ್ತವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಕೂಡ ಮೋದಿಯ ಪರವಾಗಿ ಹೋರಾಟವನ್ನು ನಡೆಸಬೇಕು. ರಾಜ್ಯದಲ್ಲಿ ೨೫ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಇವರಿಗೂ ಕೂಡ ಕೈಜೋಡಿಸಬೇಕು. ಮೂರು ಸೀಟುಗಳನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ನೀಡಿದ್ದು ಇವರನ್ನು ಕೂಡ ಗೆಲ್ಲಿಸುವ ಹೋರಾಟವನ್ನು ನಡೆಸಬೇಕು. ಏಕೆಂದರೆ ನಮಗೆ ರಾಜ್ಯದಲ್ಲಿ ೨೫ ಸ್ಥಾನಗಳನ್ನು ಬಿಟ್ಟು ಕೇವಲ ಮೂರು ಸ್ಥಾನಗಳನ್ನು ಇಟ್ಟುಕೊಂಡು ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ಆಶ್ರಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂರು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಎನ್‌ಡಿಎ ಪಕ್ಷದ ಪರ ಬೆಂಬಲವನ್ನು ವ್ಯಕ್ತಪಡಿಸಿ ಗೆಲುವಿನ ಸಾಧನೆಗೆ ಕೈಜೋಡಿಸಬೇಕು’ ಎಂದು ಹೇಳಿದರು.

‘ಈಗಾಗಲೇ ಇಡೀ ರಾಜ್ಯದಲ್ಲಿ ನಮ್ಮ ಪಕ್ಷದ ವರಿಷ್ಠ ನಾಯಕರು ಕುಳಿತು ಚರ್ಚಿಸಿದ ತೀರ್ಮಾನದಂತೆ ನಾವು ತಲೆಬಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಂತೆ ನಾವು ಕೂಡ ಕೈಜೋಡಿಸುವ ಕಾರ್ಯದಲ್ಲಿ ತೊಡಗಬೇಕು. ಈಗಾಗಲೇ ಕಾಂಗ್ರೆಸ್ ಸರ್ಕಾರ ನೀಡಿರುವ ವಿವಿಧ ಯೋಜನೆಗಳಿಗೆ ಯಾರೂ ಕೂಡ ತಲೆಬಾಗಬೇಡಿ. ಏಕೆಂದರೆ ಮನೆಯಲ್ಲಿ ಇರುವಂತಹ ಮಹಿಳೆಯರಿಗೆ ಪ್ರತಿ ತಿಂಗಳು ೨೦೦೦ ರು. ಹಣ ನೀಡಿ ಗಂಡಸರ ಜೇಬಿನಿಂದ ಪ್ರತಿ ತಿಂಗಳು ೨೦,೦೦೦ ರು. ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಪ್ರತಿಯೊಬ್ಬ ಜನಸಾಮಾನ್ಯರು ಕೂಡ ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಹಾಗೂ ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಣತಿ ಆನಂದ್ ಮಾತನಾಡಿ, ‘ಹಾಸನ ಜಿಲ್ಲೆಯ ಜೆಡಿಎಸ್ ಮತ್ತು ಬಿಜೆಪಿ ಎನ್‌ಡಿಎ ಪಕ್ಷದ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದ್ದು ಆ ನಿಟ್ಟಿನಲ್ಲಿ ಈ ಶಕ್ತಿ ಕೇಂದ್ರಗಳ ಸಭೆಯನ್ನು ಮತದಾರರ ಗಟ್ಟಿ ಕೇಂದ್ರದ ಸಭೆಯಾಗಿ ಪರಿವರ್ತನೆ ಮಾಡಿ ಮತಬಾಂಧವರಿಂದ ಪ್ರಜ್ವಲ್ ರೇವಣ್ಣರಿಗೆ ಮತ ಚಲಾಯಿಸುವ ಮಾಹಿತಿಯನ್ನು ನೀಡುವಲ್ಲಿ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು. ಅದರಲ್ಲೂ ಕೂಡ ಮೈತ್ರಿ ಪಕ್ಷಗಳ ಚುನಾವಣೆ ಆಗಿರುವುದರಿಂದ ಅತಿ ಹೆಚ್ಚು ಮತವನ್ನು ಹಾಕಿಸುವ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶನ ಮಾಡಲು ಕಾರ್ಯಕರ್ತರ ಪಾತ್ರ ಬಹುಮುಖ್ಯವಾಗಿದೆ’ ಎಂದರು.

ತಾಲೂಕು ಅಧ್ಯಕ್ಷ ರವಿ ದಮ್ಮನಿಂಗಲ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗಿರೀಶ್, ಮಾಜಿ ಬಿಜೆಪಿ ಪಕ್ಷದ ಅಧ್ಯಕ್ಷ ಚನ್ನಕೇಶವ, ಮಾಜಿ ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ರಾಜು, ಶಂಕರ್ ಹಾಜರಿದ್ದರು.

ಶ್ರವಣಬೆಳಗೊಳದಲ್ಲಿ ಬಿಜೆಪಿ ಪಕ್ಷದಿಂದ ಏರ್ಪಡಿಸಿದ್ದ ಶಕ್ತಿ ಕೇಂದ್ರದ ಪ್ರಚಾರ ಸಭೆಯಲ್ಲಿ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್‌ ಮಾತನಾಡಿದರು.