ಸಾರಾಂಶ
ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮ | ಕುಣಿದು ಕುಪ್ಪಳಿಸಿದ ಬಿಜೆಪಿ ಕಾರ್ಯಕರ್ತರು
ಕನ್ನಡಪ್ರಭ ವಾರ್ತೆ ಕೊಪ್ಪಳಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು.
ಕೊಪ್ಪಳ ನಗರ, ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಬಿಜೆಪಿ ಕಾರ್ಯಕರ್ತರು, ಹಿರಿಯರು ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಜಯಘೋಷ ಕೂಗಿ ಸಂಭ್ರಮ ಆಚರಿಸಿ ಹರ್ಷ ವ್ಯಕ್ತಪಡಿಸಿದರು. ಕೆಲವು ಕಡೆ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಮೋದಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಜಿಲ್ಲಾದ್ಯಂತ ಹರ್ಷೋದ್ಗಾರ ಕೇಳಿಬಂತು.ಬಿಜೆಪಿ ಜಿಲ್ಲಾ ಕಾರ್ಯಾಲಯ:
ಜಿಲ್ಲಾ ಬಿಜೆಪಿ ಘಟಕದಿಂದ ಭಾನುವಾರ ಸಂಜೆ ನಗರದ ಬಿಜೆಪಿ ಕಾರ್ಯಾಲಯದ ಎದುರು ಸಂಭ್ರಮಾಚರಣೆ ನಡೆಯಿತು.ಒಂದೆಡೆ ಸೇರಿದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೇ ಪರಸ್ಪರ ಸಿಹಿ ತಿನ್ನಿಸಿ ಹರ್ಷ ವ್ಯಕ್ತಪಡಿಸಿದರು. ಮೋದಿ-ಮೋದಿ ಎನ್ನುತ್ತಾ ದೇಶ ಉಜ್ವಲ ಭವಿಷ್ಯ ಕಾಣಲಿ ಎಂದು ಕಾರ್ಯಕರ್ತರು, ಪದಾಧಿಕಾರಿಗಳು ಹರ್ಷೋದ್ಗಾರ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್, ಕೊಪ್ಪಳ ಲೋಕಸಭಾ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್, ಮುಖಂಡರಾದ ಮಹಾಂತೇಶ ಪಾಟೀಲ್, ರಾಘವೇಂದ್ರ ಪಾನಗಂಟಿ, ಅಪ್ಪಣ್ಣ ಪದಕಿ, ಗಣೇಶ ಹೊರ ತಟ್ನಾಳ, ರಾಜು ಬಾಕಳೆ, ಮಹಾಲಕ್ಷ್ಮಿ ಕಂದಾರಿ, ವಾಣಿಶ್ರೀ ಇತರರು ಇದ್ದರು.
ಗೊಂಡಬಾಳದಲ್ಲಿ ವಿಜಯೋತ್ಸವ:ಮೂರನೇ ಬಾರಿಗೆ ಮೋದಿ ಪ್ರಧಾನಿ ಹುದ್ದೆ ಸ್ವೀಕರಿಸಿದ ಹಿನ್ನೆಲೆ ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು, ಮೋದಿ- ಮೋದಿ ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸಿದರು.ಮುಖಂಡರಾದ ಭೀಮಜ್ಜ ಕರ್ಕಿಹಳ್ಳಿ, ಶಂಕ್ರಪ್ಪ ಚಳಗೇರಿ, ರುದ್ರಯ್ಯ ದಳವಾಯಿ, ಮಠ ಶಂಭು ಕರ್ಕಿಹಳ್ಳಿ, ಭೀಮಜ್ಜ ಇರಬಿ, ಬಸನಗೌಡ ಅಯ್ಯನಗೌಡ, ಶಿವಾಜಿ ಹೊನ್ನಪ್ಪ, ಮೆತಗಲ್ ಸಿದ್ದನಗೌಡರು ಇನ್ನಿತರರು ಇದ್ದರು.
ಬಳಗೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ:ಮೋದಿ ಮೂರನೇ ಬಾರಿ ಪ್ರಧಾನಿ ಆದ ಹಿನ್ನೆಲೆ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಿದರು.
ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಆನಂತರ ಕಾರ್ಯಕರ್ತರು ಜಯಘೋಷ ಕೂಗುವ ಮೂಲಕ ಕುಣಿದು ಕುಪ್ಪಳಿಸಿದರು.ಪ್ರಮುಖರಾದ ಕಂಟ್ಟೆಪ್ಪ ಮೇಟಿ, ಲಕ್ಷ್ಮಣ ತಳವಾರ, ಬಸಣ್ಣ ಉಪ್ಪಾರ, ಗವಿಸಿದ್ದಪ್ಪ ಹೂಗಾರ, ಲಕ್ಷ್ಮಣ ಕಾಳಿ, ಲಕ್ಷ್ಮಣ ಕಮ್ಮಾರ, ಪ್ರಕಾಶ ತಳವಾರ, ಪ್ರವೀಣ ಹೂಗಾರ, ಶರಣಪ್ಪ ವಣಗೇರಿ, ಬಳ್ಳೇಶ ಹೂಗಾರ ಇನ್ನಿತರರು ಇದ್ದರು.