ಪ್ರಧಾನಿ ನರೇಂದ್ರ ಮೋದಿಜಿ ಅವರು ದೇಶದ ಸಮಗ್ರ ಅಭಿವೃದ್ಧಿಗೆ ತಮ್ಮದೇ ಆದ ಆಡಳಿತ ವೈಖರಿಯ ಮೂಲಕ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಹಿರೇಕೆರೂರು: ಪ್ರಧಾನಿ ನರೇಂದ್ರ ಮೋದಿಜಿ ಅವರು ದೇಶದ ಸಮಗ್ರ ಅಭಿವೃದ್ಧಿಗೆ ತಮ್ಮದೇ ಆದ ಆಡಳಿತ ವೈಖರಿಯ ಮೂಲಕ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪ್ರಧಾನಿ ನರೇಂದ್ರ ಮೋದಿರವರ 76ನೇ ಹುಟ್ಟು ಹಬ್ಬದ ನಿಮಿತ್ತ ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಹಾಗೂ ನಮೋ ಭಾರತ ಸಂಯುಕ್ತ ಆಶ್ರಯದಲ್ಲಿ ಸತತ ಒಂಬತ್ತನೇ ಬಾರಿಗೆ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ದೇಶದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ ನರೇಂದ್ರ ಮೋದಿ ಕಾರಣಿಭೂತರಾಗಿದ್ದಾರೆ. ಅವರ ಹುಟ್ಟುಹಬ್ಬವನ್ನು ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸುವ ಮೂಲಕ ಈ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು, ರಕ್ತದಾನ ಜೀವದಾನವಾಗಿದೆ. ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದರು.
ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಜಗದೀಶ ದೊಡ್ಡಗೌಡ್ರ ಮಾತನಾಡಿ, ದೇಶಕ್ಕಾಗಿ ಸ್ವಾರ್ಥವನ್ನು ಮರೆತು ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಯುವಕರ ಕಣ್ಮಿಣಿಯಾಗಿದ್ದಾರೆ. ಅವರ ಜನ್ಮದಿನದ ಅಂಗವಾಗಿ ನಾವೆಲ್ಲರೂ ಸೇರಿ ರಕ್ತದಾನವನ್ನು ಮಾಡುವ ಮೂಲಕ ಸಣ್ಣದೊಂದು ಸೇವಾ ಕಾರ್ಯವನ್ನು ನಾವು ಮಾಡುತ್ತಿದ್ದೇವೆ ಎಂದರು.ಶಿಬಿರದಲ್ಲಿ 85 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. 350 ಜನ ರಕ್ತ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ನಮೋ ಭಾರತ ಸಂಚಾಲಕ ರವಿಕುಮಾರ್ ಬಡಳ್ಳಿ, ಸಹಸಂಚಾಲಕ ಅಶೋಕ್ ಜಿ.ಎನ್., ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಗೌಡರ, ರವಿಶಂಕರ್ ಬಾಳಿಕಾಯಿ, ಶಿವಕುಮಾರ್ ತಿಪ್ಪಶೆಟ್ಟಿ, ಬಸವರಾಜ್ ಕಾಲ್ವಿಹಳ್ಳಿ, ಬಸಮ್ಮ ಅಮಲೂರ್, ಲತಾ ಬಣಕಾರ, ಶಶಾಂಕ್ ಚಿಂದಿ, ಶಿವಕುಮಾರ್ ಪ್ಯಾಟೆರ್, ಅಖಿಲ ಪಾಟೀಲ್, ಪುಟ್ಟಣ್ಣ ಪಾಟೀಲ, ಮಹೇಶ್ ಭರಮಗೌಡ್ರ, ಮಂಜುನಾಥಗೌಡ ಪಾಟೀಲ್, ಬಸವರಾಜ್ ಅರಕೇರಿ, ಪ್ರದೀಪ್ ಎಮ್ಮಿಗನೂರು, ಎಸ್.ಎಸ್. ಬಳಿಗಾರ, ರುದ್ರೇಶ್ ಬೇತೂರ್, ಚನ್ನಪ್ಪ ಕಿಟ್ಟದ, ಶಂಕರಗೌಡ ಪೊಲೀಸ್‌ಗೌಡ್ರು, ಪ್ರವೀಣ್ ತಳವಾರ್, ನಾಗನಗೌಡ, ಪ್ರದೀಪ್ ತಳವಾರ್, ಹುಚ್ಚಣ್ಣ ಚೌಟಗಿ, ಬೋಜೆಗೌಡ ,ಪ್ರವೀಣ್ ಸಣ್ಣಕ್ಕಿ, ಸಿ.ಎಸ್. ಚಳಗೇರಿ, ಮನೋಜ್ ಹಾರ‍್ನಳ್ಳಿ, ಜಯಣ್ಣ ಮಾದಕ್ಕಳವರ ಸೇರಿ ಇತರರಿದ್ದರು.