ಸೌಮ್ಯಾ ಗುಡಿ ಎಂಬವರು ಪೆನ್ಸಿಲ್ಲಿನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಿಡಿಸಿದ್ದರು

ಕೊಪ್ಪಳ: ನಗರದ ಮಹಿಳೆಯೊಬ್ಬರು ಬಿಡಿಸಿದ ತಮ್ಮದೆ ಚಿತ್ರವನ್ನು ಮೆಚ್ಚಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರ ಬರೆದು ಪ್ರೋತ್ಸಾಹಿಸಿದ್ದಾರೆ.

ಕೊಪ್ಪಳ ನಗರದ ನಿವಾಸಿಯಾಗಿರುವ ಸೌಮ್ಯಾ ಗುಡಿ ಎಂಬವರು ಪೆನ್ಸಿಲ್ಲಿನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಿಡಿಸಿದ್ದರು. ಆ ಕಲಾಕೃತಿಯನ್ನು ಇತ್ತೀಚಿಗೆ ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರಿಗೆ ನೀಡಿದ್ದರು. ಈ ಕಲಾಕೃತಿ ಮೆಚ್ಚಿ ಮೋದಿ ಅವರು ಸೌಮ್ಯಾ ಅವರಿಗೆ ಪತ್ರ ಬರೆದು ಕಲಾ ಪ್ರಯಾಣ ಮುಂದುವರಿಯಲಿ ಎಂದು ಹಾರೈಸಿದ್ದಾರೆ.

ಉಡುಪಿಯಲ್ಲಿ ಈ ಸುಂದರ ಭಾವಚಿತ್ರ ಸ್ವೀಕರಿಸಿದ್ದು ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು. ನಿಮ್ಮ ಕಲಾತ್ಮಕ ಪ್ರಯಾಣವೂ ಇದೇ ಸಮರ್ಪಣೆ, ಉತ್ಸಾಹದಿಂದ ಮುಂದುವರಿಯಲಿ. ಹೃದಯ ಸ್ಪರ್ಶಿಸುವ ಹಾಗೂ ಮನಸ್ಸು ಪ್ರೇರಿಸುವ ಕಲಾಕೃತಿ ಮತ್ತಷ್ಟು ಮತ್ತಷ್ಟು ರಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರದಲ್ಲಿ ಹಾರೈಸಿದ್ದಾರೆ.