ಐಟಿ, ಇಡಿ ಮೂಲಕ ಹೆದರಿಸಿ ಮೋದಿ ಸೇಡಿನ ರಾಜಕೀಯ: ಡಾ. ಎಸ್. ಶಾಮನೂರು ಶಿವಶಂಕರಪ್ಪ

| Published : May 01 2024, 01:22 AM IST

ಐಟಿ, ಇಡಿ ಮೂಲಕ ಹೆದರಿಸಿ ಮೋದಿ ಸೇಡಿನ ರಾಜಕೀಯ: ಡಾ. ಎಸ್. ಶಾಮನೂರು ಶಿವಶಂಕರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ತಂದುಕೊಟ್ಟವರ ಬಗ್ಗೆ ಪ್ರಧಾನಿ ಮೋದಿಯವರು ಟೀಕೆ ಮಾಡುವುದಲ್ಲ, ದೇಶಕ್ಕೆ ಅವರ ಕೊಡುಗೆ ಏನು ಎಂಬುದನ್ನು ಜನತೆಗೆ ತಿಳಿಸಲಿ ಎಂದು ಡಾ. ಎಸ್. ಶಾಮನೂರು ಶಿವಶಂಕರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಐಟಿ, ಇಡಿ ಮೂಲಕ ಜನರನ್ನು ಹೆದರಿಸಿ ಮೋದಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಎಸ್. ಶಾಮನೂರು ಶಿವಶಂಕರಪ್ಪ ಆರೋಪಿಸಿದರು.

ಪಟ್ಟಣದ ಆರ್‌ಎಸ್‌ಎನ್ ಶಾಲೆಯ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಐಟಿ, ಇಡಿಯವರನ್ನು ಕಳಿಸುತ್ತಾರೆ ಎನ್ನುವ ಭಯದಿಂದ ದೊಡ್ಡ ಶ್ರೀಮಂತರು ಬಿಜೆಪಿಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ತಂದುಕೊಟ್ಟವರ ಬಗ್ಗೆ ಪ್ರಧಾನಿ ಮೋದಿಯವರು ಟೀಕೆ ಮಾಡುವುದಲ್ಲ, ದೇಶಕ್ಕೆ ಅವರ ಕೊಡುಗೆ ಏನು ಎಂಬುದನ್ನು ಜನತೆಗೆ ತಿಳಿಸಲಿ. ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು ಸೇರಿದಂತೆ ಅನೇಕರು ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅದರಲ್ಲೂ ಎಲ್ಲರೂ ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಅವರನ್ನು ಟೀಕೆ ಮಾಡುವುದು ಅವರ ಘನತೆ ಹೆಚ್ಚುವುದಿಲ್ಲ ಎಂದರು.

ಪ್ರಧಾನಮಂತ್ರಿಗಳಾಗಿ ಪ್ರತಿಯೊಂದು ತಾಲೂಕಿಗೂ ಬಂದು ಚುನಾವಣಾ ಪ್ರಚಾರ ಮಾಡುತ್ತಿರುವುದು ಎಷ್ಟು ಸರಿ ಇದೆ ಎಂದು ಪ್ರಶ್ನಿಸಿದ ಅವರು ಈ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಆದರೆ ಈ ಬಾರಿ ನಾವು ರಾಜ್ಯದಲ್ಲಿ 28 ಸ್ಥಾನಗಳನ್ನು ಪಡೆಯಲಿದ್ದೇವೆ ಎಂದು ಹೇಳಿದರು.

ಡಾ. ಪ್ರಭಾ ಮಲ್ಲಿಕಾರ್ಜುನ ಅವರ ಗೆಲುವು ಖಚಿತವಾಗಿದ್ದು, ಪ್ರಭುದ್ಧ ಮತದಾರರು ಮತ ಹಾಕಿ ಎಂದು ಕೋರಿದರು.

ಚಿಗಟೇರಿ ನಾರದಮುನಿ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ, ಅಥಿಣಿ ವೀರಣ್ಣ, ಮುಖಂಡ ಪಿ. ಮಹಾಬಲೇಶ್ವರಗೌಡ, ಅರಸಿಕೇರಿ ಎನ್. ಕೊಟ್ರೇಶ, ಶಶಿಧರ ಪುಜಾರ, ರೇಣುಕಾ ಪ್ರಸನ್ನ, ಪ್ರಕಾಶ ಪಾಟೀಲ್, ಮಲ್ಲಿಕಾರ್ಜುನ ಕಲ್ಮಠ ಮಾತನಾಡಿದರು.

ಪುರಸಭೆ ಸದಸ್ಯ ಗೊಂಗಡಿ ನಾಗರಾಜ, ಮುಖಂಡರಾದ ಎಂ. ರಾಜಶೇಖರ, ಐಗೋಳ ಚಿದಾನಂದ, ಅಂಬ್ಲಿ ಮಂಜುನಾಥ, ತೆಲಗಿ ಈಶಪ್ಪ, ನಾಗರಾಜ, ಕುಬೇರಗೌಡ, ಪುಷ್ಟಾ ದಿವಾಕರ್, ಟಿಎಚ್‌ಎಂ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಇದ್ದರು.