ಯುವಕ ನಾಪತ್ತೆ
KannadaprabhaNewsNetwork | Published : Oct 14 2023, 01:00 AM IST
ಸಾರಾಂಶ
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಮದ್ ರೀಹಾನ್ ಎಂಬ 19 ವರ್ಷದ ಯುವಕನು ಸೆಪ್ಟೆಂಬರ್ 11ರಂದು ಮಧ್ಯರಾತ್ರಿ 12.30 ರಿಂದ ಬೆಳಿಗ್ಗೆ 6.30ರ ಸಮಯದಲ್ಲಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಈತನ ತಾಯಿ ಆಯಿಷಾ ಠಾಣೆಗೆ ದೂರು ನೀಡಿದ್ದಾರೆ.
ತುಮಕೂರು: ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಮದ್ ರೀಹಾನ್ ಎಂಬ 19 ವರ್ಷದ ಯುವಕನು ಸೆಪ್ಟೆಂಬರ್ 11ರಂದು ಮಧ್ಯರಾತ್ರಿ 12.30 ರಿಂದ ಬೆಳಿಗ್ಗೆ 6.30ರ ಸಮಯದಲ್ಲಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಈತನ ತಾಯಿ ಆಯಿಷಾ ಠಾಣೆಗೆ ದೂರು ನೀಡಿದ್ದಾರೆ. ಕಾಣೆಯಾದ ಯುವಕ 5.2 ಅಡಿ ಎತ್ತರ, ಸಾಧಾರಣ ಶರೀರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಆಕಾಶ್ ನೀಲಿ ಬಣ್ಣದ ಷರ್ಟ್, ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣದ ಜರ್ಕೀನ್ ಹಾಗೂ ಗುಲಾಬಿ ಬಣ್ಣದ ಹ್ಯಾಟ್ ಧರಿಸಿದ್ದನು. ಈತನ ಬಗ್ಗೆ ಸುಳಿವು ಸಿಕ್ಕವರು ಕೂಡಲೇ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.