ಅಂತಾರಾಜ್ಯ ಕಳ್ಳನ ಬಂಧನ

| Published : Aug 18 2024, 01:51 AM IST

ಸಾರಾಂಶ

ಕಂಪನಿ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು

ಕನ್ನಡಪ್ರಭ ವಾರ್ತೆ ಮೈಸೂರು

ಅಂತಾರಾಜ್ಯ ಕಳ್ಳನನ್ನು ಮೈಸೂರಿನ ಕುವೆಂಪುನಗರ ಠಾಣೆಯ ಪೊಲೀಸರು ಬಂಧಿಸಿ, 7.20 ಲಕ್ಷ ರೂ. ಮೌಲ್ಯದ 1 ಬೈಕ್ ಮತ್ತು 1 ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ನಿವಾಸಿ ಮಹಮದ್ ರಮ್ಜಾನ್ (21) ಎಂಬಾತನೇ ಬಂಧಿತ ಆರೋಪಿ. ಈತ ಕುವೆಂಪುನಗರದ ಕಂಪನಿಯೊಂದಕ್ಕೆ ಸೇರಿದ್ದ ಗೂಡ್ಸ್ ವಾಹನ ಕಳವು ಮಾಡಿದ್ದ. ಈ ಸಂಬಂಧ ಕಂಪನಿ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ ಬಿಳಿಕೆರೆ ಠಾಣೆ ವ್ಯಾಪ್ತಿಯಲ್ಲಿ ಈತ ಕಳವು ಮಾಡಿದ್ದ ಬೈಕ್ ಕಳವು ಪ್ರಕರಣ ಸಹ ಬೆಳಕಿಗೆ ಬಂದಿದೆ.

ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಎಸ್. ಜಾಹ್ನವಿ, ಕೆ.ಆರ್. ಉಪ ವಿಭಾಗದ ಎಸಿಪಿ ರಮೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕುವೆಂಪುನಗರ ಠಾಣೆ ಇನ್ಸ್ ಪೆಕ್ಟರ್ ಎಲ್. ಅರುಣ್, ಎಸ್ಐಗಳಾದ ಗೋಪಾಲ್, ಮದನ್ ಕುಮಾರ್, ಸಿಬ್ಬಂದಿ ಆನಂದ್, ಮಂಜುನಾಥ್, ಮಹೇಶ್ವರ್, ಮಂಜು, ನಾಗೇಶ್, ಯಶವಂತ್, ಹಜರತ್ ಈ ಪತ್ತೆ ಮಾಡಿದ್ದಾರೆ.