ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲಿ ಪದವೀಧರರು ಹಾಗೂ ಶಿಕ್ಷಕರ, ನಿರುದ್ಯೋಗ ಯುವಕರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಬಲ್ಲ ಅನುಭವಿ ನಾಯಕ ಮೋಹನ ಲಿಂಬಿಕಾಯಿ ಅವರಾಗಿದ್ದು, ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು.
ಕನ್ನಡಪ್ರಭ ವಾರ್ತೆ ರೋಣ
ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲಿ ಪದವೀಧರರು ಹಾಗೂ ಶಿಕ್ಷಕರ, ನಿರುದ್ಯೋಗ ಯುವಕರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಬಲ್ಲ ಅನುಭವಿ ನಾಯಕ ಮೋಹನ ಲಿಂಬಿಕಾಯಿ ಅವರಾಗಿದ್ದು, ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ ಜಿ. ಪಾಟೀಲ ಹೆಡಳಿದರು.ಭಾನುವಾರ ಪಟ್ಟದಣಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಪದವೀಧರ ಮತದಾರರ ಸಭೆಯಲ್ಲಿ ಪಶ್ಚಿಮ ಪದವೀಧರ ಮತಕ್ಷೇತ್ರ ಕಾಂಗ್ರಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಪರ ಪ್ರಚಾರ ಕೈಗೊಂಡು ಮಾತನಾಡಿದರು.
ಅನುಭವ ಮತ್ತು ರಾಜಕೀಯ ಬದ್ಧತೆಯು ಪದವೀಧರರ ಹಕ್ಕುಗಳ ರಕ್ಷಣೆ ಅತ್ಯಗತ್ಯವಾಗಿದೆ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಹಾಗೂ ಪದವೀಧರರ ಕಲ್ಯಾಣದ ದೃಷ್ಟಿಯಿಂದ ಈ ಬಾರಿ ಮೋಹನ್ ಲಿಂಬಿಕಾಯಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು. ಪದವೀಧರರ ನೌಕರರ ಹಾಗೂ ಪದವೀಧರ ನಿರುದ್ಯೋಗಿ ಯುವಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಮೋಹನ ಲಿಂಬಿಕಾಯಿ ಅವರು ಸೂಕ್ತ ನಾಯಕರಾಗಿದ್ದಾರೆ. ಇವರ ಬಗ್ಗೆ ಯುವಕರ ಒಲವಿದ್ದು, ಗೆಲುವು ನಿಶ್ಚಿತವಾಗಿದೆ ಎಂದರು.ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಕ್ಷಯ ಐ.ಪಾಟೀಲ್ ಮಾತನಾಡಿದರು.
ಈ ವೇಳೆ ಮುಖಂಡರಾದ ಆರ್.ಬಿ. ಬಸವರಡ್ಡೇರ, ವೀರಣ್ಣ ಶೆಟ್ಟರ, ಶರಣಪ್ಪ ಬೆಟಗೇರಿ, ಯೂಸುಫ್ ಇಟಗಿ, ಬಸವರಾಜ ನವಲಗುಂದ, ಗಿರೀಶಗೌಡ ಪಾಟೀಲ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ರಾಮನಗೌಡ ಹಲಕುರ್ಕಿ, ಗುರಣ್ಣ ಅವರಡ್ಡಿ, ಸುರೇಶ ಶಿರೋಳ, ಎಂ.ಕೆ. ಅಂಗಡಿ, ಶಿವಣ್ಣ ಗುಗ್ಗರಿ, ಅಂದಪ್ಪ ವೀರಾಪುರ, ಅಜ್ಜಪ್ಪಗೌಡ ಪಾಟೀಲ, ಮಲ್ಲು ಯಲ್ಲರಡ್ಡಿ, ಎಚ್.ಟಿ. ದ್ವಾಸಲ, ಬಸವರಾಜ ತಳವಾರ, ಮಹಾಂತೇಶ ತಳವಾರ, ಎಂ.ಡಿ. ಬಸವರಡ್ಡೇರ, ಶರಣಪ್ಪಗೌಡ ಮಾದಿನೂರ, ಭೀಮರಡ್ಡಿ ಅವರಡ್ಡಿ, ಭೀಮಣ್ಣ ಕಂಬಳಿ, ಬಸವರಾಜ ತಳಬಾಳ, ನಾಗರಾಜ ತಳಕಲ್, ಸೋಮು ಶಿರೋಳ, ಮಂಜು ಚಿತ್ತರಗಿ, ಚನ್ನಬಸು ಹೂಗಾರ, ಬಾಬು ಬನ್ನಿಕೊಪ್ಪ, ಅಂದಪ್ಪ ದ್ವಾಸಲ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ಯುವ ಕಾರ್ಯಕರ್ತರು ಹಾಗೂ ಪದವೀಧರ ಮತದಾರರು ಉಪಸ್ಥಿತರಿದ್ದರು.