ಸಾರಾಂಶ
ದೊಡ್ಡಬಳ್ಳಾಪುರ: ಹಿಂದೂ-ಮುಸ್ಲಿಂ ಭಾವೈಕ್ಯತೆ ಪ್ರತೀಕವಾದ ಮೊಹರಂ ಹಬ್ಬವನ್ನು ದೊಡ್ಡಬಳ್ಳಾಪುರ ನಗರ ಹಾಗೂ ಪುಟ್ಟಯ್ಯನ ಅಗ್ರಹಾರ ಸೇರಿದಂತೆ ತಾಲೂಕಿನ ವಿವಿಧೆಡೆ ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು.
ಇಲ್ಲಿನ ಮುಕ್ತಾಂಬಿಕಾ ರಸ್ತೆಯಲ್ಲಿ ಹಿಂದು-ಮುಸಲ್ಮಾನ ಬಾಂಧವರು ಎಂದಿನಂತೆ ಮೊಹರಂ ಆಚರಿಸಿ, ಸಹಬಾಳ್ವೆ, ಸಮನ್ವಯದ ಸಂದೇಶ ಸಾರಿದರು. ವಿಠೋಬ ದೇವಾಲಯ ರಸ್ತೆ, ಇಸ್ಲಾಂಪುರ, ಕೋಟೆ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮೊಹರಂ ಆಚರಣೆ ಗಮನ ಸೆಳೆಯಿತು.ಮಧ್ಯರಾತ್ರಿ ಬಳಿಕ ಅಗ್ನಿ ಹಾಯುವುದು, ಬೆಂಕಿಯ ಮೇಲೆ ನಡೆದುಕೊಂಡು ಹೋಗಿ ಭಕ್ತಿಭಾವದ ಹರಕೆ ತೀರಿಸುವುದು ಮೊಹರಂ ಮತ್ತೊಂದು ವಿಶೇಷವಾಗಿದ್ದು, ಅಲಂಕೃತ ಪೀರ್ ದೇವರಿಗೆ ಮಕ್ಕಳ ಕೈಮುಟ್ಟಿಸಿ ದರ್ಶನ ಮಾಡಿಸಿದರು.
ಪೀರ್ ಮೆರವಣಿಗೆ ಮುಂದೆ ಯುವಕರು ಅಲಾಯಿ ಆಡುವುದು, ಎಣಾಲ್ ಎಣಿಕೆಯ ಹಗ್ಗದಾಟ ನೋಡಲು ಆಕರ್ಷಕವಾಗಿತ್ತು. ಕೈಯಲ್ಲಿ ಖಡ್ಗ, ಕೊಡ್ಲಿ, ಬಡಿಗೆ ಹಿಡಿದುಕೊಂಡು ಬೋಸಯ್ಯಿ ಆಡುವುದು ಕಂಡು ಬಂದಿತು. ಹಲಗೆ ನಾದಕ್ಕೆ ತಕ್ಕಂತೆ ಕುಣಿಯುವುದು ಮನ ಮೋಹಕ ದೃಶ್ಯವನ್ನು ಜನರು ಕಣ್ತುಂಬಿಕೊಂಡರು.ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಹಜರತ್ ಹಸೇನ್ ಮತ್ತು ಹುಸೇನರ ಪುಣ್ಯಸ್ಮರಣಾರ್ಥ 10 ದಿನಗಳ ಕಾಲ ಮೊಹರಂ ಆಚರಿಸಲಾಗುತ್ತದೆ. ಮೊಹರಂ ಹಬ್ಬ ಕೇವಲ ಹಬ್ಬವಾಗಿರದೆ ಹಿಂದೂ ಮುಸ್ಲಿಂ ಭಾವೈಕ್ಯತೆ ಪ್ರತೀಕವಾಗಿದೆ. ಪುರಾತನ ಕಾಲದಿಂದಲೂ ಮೊಹರಂ ಹಬ್ಬವನ್ನು ಭಾವೈಕ್ಯತೆ, ಸಹೋದರತೆಯಿಂದ ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬವು ಇಂದಿಗೂ ಎಲ್ಲ ಧರ್ಮದ ಜನರ ಬಾಂಧವ್ಯವನ್ನು ಗಟ್ಟಿಗೊಳಿಸಿದೆ. ಹಳ್ಳಿಗಳಲ್ಲಿ ಜನರು ಶ್ರದ್ಧಾ, ಭಕ್ತಿಯೊಂದಿಗೆ ವಿಜೃಂಭಣೆಯಿಂದ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.
(ಚೆಂದದ ಒಂದು ಫೋಟೋ ಸುದ್ದಿಗೆ ಬಳಸಿ, ಮತ್ತೊಂದು ಪ್ಯಾನಲ್‌ನಲ್ಲಿ ಬಳಸಿ)17ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಅಗ್ನಿ ಕೊಂಡ ಹಾಯುವ ಸಾಂಪ್ರದಾಯಿಕ ಆಚರಣೆ ನಡೆಯಿತು.
17ಕೆಡಿಬಿಪಿ3-ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಗಳಲ್ಲಿ ಮೊಹರಂ ಆಚರಣೆ.